ಲೋಕದರ್ಶನ ವರದಿ
ಕಾರವಾರ27: ದೃಶ್ಯ ಮಾಧ್ಯಮವೊಂದರ ವರದಿಗಾರ ಹಾಗೂ ಕ್ಯಾಮರಾಮನ್ಗೆ ಜಿಲ್ಲಾಧಿಕಾರಿ ಕಚೇರಿ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿದರ್ೇಶಕ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದಲ್ಲಿನ ಭೂ ದಾಖಲೆ ಉಪನಿದರ್ೇಶಕರ ಕಚೇರಿಗೆ ತೆರಳಿದ್ದ ಪತ್ರಕರ್ತ ಹಾಗೂ ಕ್ಯಾಮರಾಮನ್ ಸುದ್ದಿಗಾಗಿ ತೆರಳಿದ್ದರು. ಕಚೇರಿ ಪ್ರವೇಶಿಸುತ್ತಿದ್ದಂತೆ ಅಧಿಕಾರಿ ಕೂಗಾಡಿದ್ದು ವರದಿಗಾರರ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಸ್ಕಲ್ ನಿನ್ನಂಥವರನ್ನು ತುಂಬಾ ಜನ ನೋಡಿದ್ದೇನೆ. ನಿನ್ನನ್ನು ನೋಡಿಕೊಳ್ಳುತ್ತೇನೆ. ಮೊದಲು ಇಲ್ಲಿಂದ ಹೊರ ಹೋಗು ಎಂದು ಕೂಗಾಡಿದ್ದಾರೆ. ಪದನಿಮಿತ್ತ ಉಪ ನಿದರ್ೇಶಕ 15 ದಿನಗಳಿಗೆ ಒಮ್ಮೆ ಕಚೇರಿಗೆ ಬಂದು , ಒಂದೇ ದಿನ ಎಲ್ಲಾ ಸಹಿ ಮಾಡುತ್ತಿದ್ದ ಆರೋಪವಿತ್ತು. ಈ ಬಗ್ಗೆ ಮಾಹಿತಿ ಹಾಗೂ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ತೆರಳಿದ್ದರು. ಭೂ ದಾಖಲೆಗಳ ಸವರ್ೆ ಮತ್ತು ನಂಬರ್ ನೀಡಿಕೆ ವಿಷಯದಲ್ಲಿ ಸಹ ಸಾರ್ವಜನಿಕರಿಗೆ ಉಪ ನಿದರ್ೇಶಕರು ಕಿರುಕುಳ ನೀಡುತ್ತಾರೆ ಎಂಬ ದೂರುಗಳು ಬಂದಿದ್ದವು.
ಕಾರವಾರಕ್ಕೆ ವಗರ್ಾವಣೆಯಾಗಿ ಬರುವ ಮುನ್ನ ಹಿರಿಯ ಐಎಎಸ್ ಅಧಿಕಾರಿಗೆ ಕಿರಿಕ್ ಮಾಡಿದ ಆರೋಪ ಸಹ ವೇಣುಗೋಪಾಲ್ ಮೇಲೆ ಇತ್ತು ಎಂದು ಹೇಳಲಾಗುತ್ತಿದೆ.
ಮುಖ್ಯ ಕಾರ್ಯದಶರ್ಿಗೆ ದೂರು :
ಪದನಿಮಿತ್ತ ಭೂ ದಾಖಲೆ ಉಪ ನಿದರ್ೇಶಕರು ಅಸಭ್ಯವಾಗಿ ವತರ್ಿಸಿ ನಿಂದಿಸಿದ ಬಗ್ಗೆ ರಾಜ್ಯ ಮುಖ್ಯಕಾರ್ಯದಶರ್ಿಗಳಿಗೆ ಕನರ್ಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. ಅಪದ ಜಿಲ್ಲಾಧಿಕಾರಿ ಡಾ.ಸುರೇಶ್ ಹಿಟ್ನಾಳ್ ಅವರ ಮೂಲಕ ಅಸಭ್ಯ ವರ್ತನೆ ತೋರಿ , ಪತ್ರಕರ್ತರಿಗೆ ಅವಮಾನಿಸಿದ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕೆಂದು ಲಿಖಿತ ದೂರು ನೀಡಲಾಯಿತು.
ದೃಶ್ಯವಾಹಿನಿ ವರದಿಗಾರ ಉದಯ ಬಗರ್ಿ ಭೂದಾಖಲೆಗಳ ಇಲಾಖೆಯ ಮಾಹಿತಿ ಕೇಳಲು ಭೂದಾಖಲೆ ಉಪ ನಿದರ್ೇಶಕರ ಕಚೇರಿಗೆ ತೆರಳಿದ್ದರು. ಈ ವೇಳೆ ಪದನಿಮಿತ್ತ ಭೂ ದಾಖಲೆಗಳ ಉಪನಿದರ್ೇಶಕ ವೇಣುಗೋಪಾಲ್ ಅವರು ಪತ್ರಕರ್ತ ಹಾಗೂ ಕ್ಯಾಮರಾಮನ್ ಕಚೇರಿ ಒಳಗೆ ಬಂದಿದ್ದನ್ನು ಆಕ್ಷೇಪಿಸಿದರು. ಅಲ್ಲದೇ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದರು.ಏಕಾ ಏಕಿ ಕೈಯಿಂದ ವರದಿಗಾರನನ್ನು ನೂಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರು ಎಂದು ಅಪರ ಜಿಲ್ಲಾಧಿಕಾರಿಗೆ ವಿವರಿಸಲಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಯನ್ನು ಸಹ ಜಿಲ್ಲಾಧಿಕಾರಿಗಳ ವ್ಯಾಟ್ಸಪ್ ಗ್ರೂಪ್ಗೆ ಕಳುಹಿಸಲಾಯಿತು.
ಪದನಿಮಿತ್ತ ಭೂ ದಾಖಲೆ ಇಲಾಖೆಯ ಉಪನಿದರ್ೇಶಕರ ಅಹಂಕಾರದ ಮಾತುಗಳು, ಅವರ ಮನೋಭಾವವನ್ನು ಬಿಂಬಿಸುತ್ತಿದೆ.ವೇಣುಗೋಪಾಲ ಅವರ ಮೇಲೆ ಈ ಹಿಂದೆಯೂ ಕೆಲ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಮೇಲೆ ಅಧಿಕಾರಿ ನಡೆಸಿದ ದುರ್ವರ್ತನೆಯನ್ನು ಖಂಡಿಸುತ್ತೇವೆ. ಅಧಿಕಾರಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರ ಗಮನಕ್ಕೆ ಈ ಸಂಗತಿ ಸಹ ವಿವರಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮನವಿ ಸ್ವೀಕರಿಸಿದರು. ಮನವಿ ನೀಡುವ ವೇಳೆ ಕನರ್ಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷ ಕಡತೋಕಾ ಮಂಜು, ದರ್ಶನ್ ನಾಯ್ಕ, ಗಿರೀಶ್ ನಾಯ್ಕ ಬಾಡ, ಉದಯ್ ಬಗರ್ಿ, ನಾಗರಾಜ ಹರಪನಹಳ್ಳಿ, ಗಿರೀಶ್ ಬಾಂದೇಕರ್, ಸಾಯಿಕಿರಣ, ಗುರುದತ್ತ ಭಟ್, ಗಜಾ ಸುರಂಗೇಕರ್ ಹಾಗೂ ಇತರರು ಇದ್ದರು.