ಜನಗಣತಿ ತರಬೇತಿ ಕಾರ್ಯಾಗಾರಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಸಿಇಓ ಭುವನೇಶ ಪಾಟೀಲ ಭೇಟಿ
Deputy Commissioner Snehal R., CEO Bhuvanesh Patil visit Census training workshops
ಲೋಕದರ್ಶನ ವರದಿ
ಹುಬ್ಬಳ್ಳಿ 07 : ಏಪ್ರೀಲ್ 16 ರಿಂದ ಭಾರತ ದೇಶದಾದ್ಯಂತ ಮನೆಮನೆ ಜನಗಣತಿ ಕಾರ್ಯ ಆರಂಭವಾಗಲಿದೆ. ಅದತಂತೆ ಜಿಲ್ಕೆಯಲ್ಲಿಯೂ ಏಪ್ರೀಲ್ 16 ರಿಂದ ಮೇ 16 ರವರೆಗೆ ಮನೆಮನೆ ಜನಗಣತಿ ಕಾರ್ಯ ನಡೆಯಲಿದೆ. ನಿಗದಿತ ಅವಧಿಯೊಳಗೆ ಗಣತಿ ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಪ್ರತಿ ಗಣತಿದಾರರಿಗೆ ಸುಮಾರು 200 ಮನೆಗಳ ಗಣತಿ ಮಾಡಲು ಸೂಚಿಸಲಾಗುತ್ತದೆ. ಪ್ರತಿ 200 ಮನೆಗಳ ಗಣತಿ ಮಾಡಲು 10 ದಿನಗಳು ಸಾಕಾಗುತ್ತದೆ. ಆದರೆ ಗಣತಿದಾರರಿಗೆ 30 ದಿನಗಳ ಕಾಲಾವಕಾಶ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಹುಬ್ಬಳ್ಳಿ ನಗರದ ಲ್ಯಾಮಿಂಗ್ಟನ್ ಶಾಲೆಯ ಜನಗಣತಿಯ ಗಣತಿದಾರರ ತರಬೇತಿ ಕಾರ್ಯಾಗಾರ ಕೇಂದ್ರಕ್ಕೆ ಭೇಟಿ ನೀಡಿ, ತರಬೇತಿದಾರರನ್ನು ಉದ್ದೇಶಿಸಿ, ಮಾತನಾಡಿದರು. ಮನೆಮನೆ ಗಣತಿ ಕಾರ್ಯದಲ್ಲಿ ಪ್ರತಿ ದಿನ 10 ಮನೆಗಳ ಗಣತಿ ಕಾರ್ಯ ಪೂರ್ಣಗೊಳಿಸಿದರೆ, 30 ದಿನಗಳಲ್ಲಿ ಗಣತಿದಾರರಿಗೆ ನೀಡಲಾದ ಗುರಿಯನ್ನು ತಲುಪಬಹುದು. ಗಣತಿಗೆ ಹೋದ ಮನೆಗಳಲ್ಲಿ ಯಾರಾದರೂ ಸಹ ಮಾಹಿತಿಯನ್ನು ನೀಡಬಹುದಾಗಿದೆ. ಮನೆಗಳ ಗಣತಿ ಕಾರ್ಯದ ಕುರಿತು ಜನರಿಗೆ ಅರಿವು ಮೂಡಿಸಿ, ಇದರಿಂದ ಗಣತಿದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಗಣತಿಯ ಮೊದಲ ವಾರದಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ ಆದಷ್ಟು ಬೇಗನೆ ಗಣತಿ ಕಾರ್ಯವನ್ನು ಮುಕ್ತಾಯಗೊಳಿಸಬೇಕು. ಜನರು ಮನೆಯಲ್ಲಿ ಸಿಗುವ ವೇಳೆಯಲ್ಲಿ ಗಣತಿ ಮಾಡುವುದು ಸೂಕ್ತ. ಮನೆಯ ಮ್ಯಾಪಿಂಗ್ ಕೂಡ ಬಹಳ ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಬೇರೆ ಸ್ಥಳಗಳಿಗೆ ತೆರಳಿದ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಬೇರೆ ಊರುಗಳಿಗೆ ತೆರಳಿದ ಜನರ ಮಾಹಿತಿಯು ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ವಿವಿಧ ಭಾಷೆಗಳಲ್ಲಿ ಸಹ ಮಾಹಿತಿಯನ್ನು ಸಂಗ್ರಹಿಸಬಹುದು. ಗಣತಿ ಕಾರ್ಯವು ತುಂಬಾ ಸರಳವಾಗಿದೆ. ಖುಷಿಯಿಂದ ಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಯಾವುದೇ ಮನೆಗಳು ಗಣತಿ ಕಾರ್ಯದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ. ಜನರಿಂದ ದೂರುಗಳು ಬರದಂತೆ ಗಣತಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಎಚ್ಚರ ವಹಿಸಬೇಕು. ತರಬೇತಿಯಲ್ಲಿ ಎಲ್ಲ ಸಂಶಯಗಳನ್ನು ಪರಿಹರಿಸಿಕೊಳ್ಳಿ. ಅನಾವಶ್ಯಕವಾಗಿ ಸಮಯವನ್ನು ಹಾಳು ಮಾಡಬೇಡಿ ಎಂದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 