ಲೋಕದರ್ಶನ ವರದಿ
ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಭೇಟಿ
ಹಾವೇರಿ 21: ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇಂದ್ರಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ ಪರೀಶೀಲನೆ ನೀಡಿದರು.
ಹಾವೇರಿ ನಗರದ ಲಯನ್ಸ್ ಇಂಗ್ಲೀಷ ಮಿಡಿಯಂ ಸ್ಕೂಲ್ ಹಾಗೂ ಸರ್ ಎಂ.ವಿಶ್ವೇಶ್ವರ ಸ್ಕೂಲ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮೊಲದ ಸಲ ಪರೀಕ್ಷೆ ಬರೆಯುವಾಗ ಆಂತಕ ಸಹವಾಗಿರುತ್ತದೆ, ಆದರೆ ಆತ್ಮವಿಶ್ವಾಸದಿಂದ ಹಾಗೂ ಯಾವುದೇ ರೀತಿಯ ಭಯಪಡಂತೆ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ ಹಾಗೂ ಬೆಳಕು ಸೇರಿದಂತೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ನಕಲು ಮುಕ್ತ ಪಾರದರ್ಶಕ ಪರೀಕ್ಷೆ ನಡೆಸಬೇಕು ಎಂದು ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿದರು. ಒಂದೊಂದು ವೇಳೆ ಯಾವುದೇ ಸಮಸ್ಯೆ ಉಂಟಾದರೆ ವಿಳಂಬಮಾಡದಂತೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮಕ್ಕೆ ತರಬೇಕು ಎಂದು ಸೂಚನೆ ನೀಡಿದರು.