4ನೆ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
ಬೆಳಗಾವಿ, ಫೆ.06:4ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥ ಸಂಚಲನವು ಫೆ. 6(ಶುಕ್ರವಾರ) ಖಾನಾಪುರದಲ್ಲಿನ ಪೋಲಿಸ್ ತರಬೇತಿ ಶಾಲೆಯ ಕವಾಯತ ಮೈದಾನದಲ್ಲಿ ಜರುಗಿತು.ಅಪರ ಪೋಲಿಸ್ ಮಹಾನಿರ್ದೆಶಕರಾದ ದೇವಜ್ಯೋತಿ ರೇ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೋರಾಳಿ ಕೋಬ್ರಾ ಕ್ಯಾಂಪನ್ ಡಿ.ಐ.ಜಿ ರವೀಂದ್ರ.ಎಂ.ಎಲ್, ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಅವರುಗಳು ಪಥಸಂಚಲನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖಾನಾಪುರ ಪೋಲಿಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಎಂ.ಎಂ.ಯಾದವಾಡ ಅವರು ವರದಿ ವಾಚನ ಮಾಡಿದರು.
ಎಪಿಸಿ ಪ್ರಶಿಕ್ಷಣಾರ್ಥಿಗಳ ವೃತ್ತಿ ಬುನಾದಿ ತರಬೇತಿಯಲ್ಲಿ ವಿವಿಧ ಜಿಲ್ಲೆ ಹಾಗೂ ನಗರ ಘಟಕಗಳಿಂದ 345 ಎಪಿಸಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಸದರಿ ವೃತ್ತಿ ಬುನಾದಿ ತರಬೇತಿಯಲ್ಲಿ ಎಪಿಸಿ.20152 ದಿನೇಶಕುಮಾರ.ಎಸ್ ಅವರು ಸರ್ವೋತ್ತಮ ಪ್ರಶಸಸ್ತಿ ಪಡೆದುಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 