ಸೌಲಭ್ಯಗಳ ಹಂಚಿಕೆ ಸಮರ್ಕವಾದರೆ ಪ್ರಜಾಪ್ರಭುತ್ವದ ಸಾರ್ಥಕತೆ ಸಾಧ್ಯ: ಸಚಿವ ಎಚ್.ಕೆ.ಪಾಟೀಲ
Democracy can be meaningful if the distribution of facilities is equitable: Minister H.K. Patil
ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಯೋಜನೆ ರೂಪಿಸಲು ಸಭೆ
ಗದಗ 26 : ಸರ್ಕಾರದಿಂದ ಅನುಷ್ಟಾನಗೊಂಡ ಯೋಜನೆಗಳ ಸೌಲಭ್ಯಗಳು ಫಲಾನುಭವಿಗಳಿಗೆ ಸಮರ್ಕವಾಗಿ ಹಂಚಿಕೆಯಾದರೆ ಪ್ರಜಾಪ್ರಭುತ್ವದ ಸಾರ್ಥಕತೆ ಕಾಣಬಹುದಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಸೋಮವಾರ 2027-2028 ನೇ ಸಾಲಿಗೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನರ ಯೋಜನೆ ರೂಪಿಸಲು ಸಭೆಯನ್ನುದ್ದೇಶಿಸಿ ಮಾತನಾಡಿದರು. ಗದಗ ಜಿಲ್ಲೆಯು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಅಗ್ರ ಸ್ಥಾನದಲ್ಲಿದೆ. ಪ್ರಬಲ ಆಡಳಿತ ವ್ಯವಸ್ಥೆಯನ್ನು ಹೊಂದಿದ ಈ ಜಿಲ್ಲೆಯಲ್ಲಿ ಡಿಬಿಓಟಿ ಮೂಲಕ ಕುಡಿಯುವ ಜಿಲ್ಲೆಯ ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಶುದ್ಧ ಹವಾಮಾನದಲ್ಲಿ ಅಗ್ರ ಸ್ಥಾನದಲ್ಲಿರುವ ಜಿಲ್ಲೆ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಬಿಂಕದಕಟ್ಟಿ ಗ್ರಾಮ ಪಂಚಾಯಿತಿಯು ರಾಷ್ಟ್ರಮಟ್ಟದಲ್ಲಿಯೇ ಗುರುತಿಸಿಕೊಂಡಿದೆ ಎಂದರು.ಸರ್ಕಾರದ ಯೋಜನೆಗಳು ಕೆಳಹಂತದಿಂದ ಮೇಲಿನ ಹಂತಕ್ಕೆ ರೂಪುಗೊಳ್ಳಬೇಕು. ಅಂದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸಾಗಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತ್‌ದಿಂದ ತಾಲೂಕು ಪಂಚಾಯತ್, ತಾಲೂಕು ಪಂಚಾಯತ್‌ದಿಂದ ಜಿಲ್ಲಾ ಪಂಚಾಯತ್‌ದವರೆಗೆ ಯೋಜನೆಗಳನ್ನು ರೂಪಿಸಿ ಅವುಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿನ ಯೋಜನೆಗಳು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನವರು ತಮಗೆ ನಿರ್ವಹಿಸಿದ ಕೆಲಸ ಸಮರ್ಕವಾಗಿ ನಿರ್ವಹಿಸಬೇಕು ಎಂದರು.
ಆಹಾರ ಧಾನ್ಯಗಳ ಸಂಸ್ಕೃತಿಯನ್ನು ಕಾಪಾಡಿಕೊಂಡು ನಮ್ಮ ದೈನಂದಿನ ಜೀವನದಲ್ಲಿ ಸಿರಿಧಾನ್ಯದ ಬಳಕೆಯ ಅನುಷ್ಟಾನವಾಗಬೇಕು. ಬ್ರಿಜ್ ಟು ವ್ಯಾಲಿ ಪ್ರೊಜೆಕ್ಟ್ ಕರ್ನಾಟಕದಲ್ಲಿಯೇ ಉತ್ತಮ ಪ್ರೊಜೆಕ್ಟ್ ಆಗಿದೆ. ಸಿರಿಧಾನ್ಯದ ಬಳಕೆಯಿಂದ ದೇಶದ ಭವಿಷ್ಯ ಸುಧಾರಣೆಯಾಗಲಿದೆ. ಪ್ರಕೃತಿ ಸಂರಕ್ಷಣೆ 252 ಕಾಯ್ದೆ ಅನುಷ್ಟಾನಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಬೇಕಾಗುತ್ತದೆ. ಅದಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ಮಾತನಾಡಿ ಸರ್ಕಾರದ ಮುಂದಿನ ಯೋಜನೆಗಳು ಜನರಿಂದಲೇ ರೂಪುಗೊಳ್ಳಲಿವೆ. ಆಯಾ ಗ್ರಾಮದ ಜನರು ತಮ್ಮ ಗ್ರಾಮಗಳಲ್ಲಿನ ಯೋಜನೆಗಳನ್ನು ಗ್ರಾಮ ಸಭೆಗಳಲ್ಲಿ ನಿರ್ಣಯಿಸಿ ರೂಪಿಸಬೇಕು. ಗ್ರಾಮ ಪಂಚಾಯತ್ ಆದ್ಯತೆಯ ಪಟ್ಟಿಯು ಸರ್ಕಾರದಲ್ಲಿ ಅನುಷ್ಟಾನಗೊಳ್ಳಲಿದೆ. ಯೋಜನೆಗಳಲ್ಲ ಏನಾದರೂ ಬದಲಾವಣೆಯನ್ನು ತರುವುದಿದ್ದರೂ ಸಹಿತ ಗ್ರಾಮಸಭೆಯ ಮುಂದಿಟ್ಟು ನಂತರ ಬದಲಾವಣೆಗಳಾಗಬೇಕು. ಪಂಚಾಯತ್‌ಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಲಸ ಮಾಡಬೇಕು. ಜಿಲ್ಲೆ ಯೋಜನೆ ರೂಪಿಸುವಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ನವರು ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಮಾತನಾಡಿ ಜಿಲ್ಲೆಗೆ ಬೇಕಾಗಿರುವ ಯೋಜನೆ ಗ್ರಾಮ ಪಂಚಾಯತಿ ಹಂತದಿಂದ ಹಿಡಿದು ಅವರಿಂದಲೇ ಸಂಗ್ರಹಿಸಿ ಯೋಜನೆ ರೂಪಿಸಲಾಗುವುದು. ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ಜಿಲ್ಲೆ ಅಬಿವ್ರದ್ದಿ ಹೊಂದಲು ಸಾಧ್ಯವಾಗುತ್ತದೆ. ಗದಗ ಜಿಲ್ಲೆಯ ಕೂಡ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ದಕ್ಷಿಣ ಕನ್ನಡ . ಉಡುಪಿ. ಬೆಳಗಾವಿ ಇತರೆ ಜಿಲ್ಲೆಗಳು ಮುಂದುವರಿದ ಜಿಲ್ಲೆಗಳಾಗಿವೆ. ಜಿಲ್ಲೆಯ ಅಬಿವೃದ್ದಿಗೆ ಸಾಕ್ಷರತೆ ಪ್ರಮಾಣ ಮುಖ್ಯವಾಗಿದೆ.ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯ. ಕುಡಿಯುವ ನೀರಿನ ಸರಬರಾಜು ಕುರಿತಂತೆ ಕೊರತೆಗಳ ಪಟ್ಟಿ ತಯಾರಿಸಬೇಕು. ಗ್ರಾಮ ಪಂಚಾಯತನವರು ತಮ್ಮ ಅಧಿಕಾರದ ಸದುಪಯೋಗ ಪಡಿಸಿಕೊಳ್ಳಬೆಕು ಎಂದರು. ಪ್ರತಿಷ್ಟಿತ ರಾಮನ್ ಮ್ಯಾಗೆಸೆ ಪ್ರಶಸ್ತಿ ಪುರಸ್ಕೃತ ಮತ್ತು ಸ್ಟಾಕ್ ಹೋಂ ಜಲ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಸಿಂಗ್ ಅವರು ಮಾತನಾಡಿ ದೇಶದ ಪ್ರಗತಿಗೆ ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆಯು ಬಹಳ ಮುಖ್ಯವಾಗಿದೆ. ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆ ಎರಡೂ ಮುಂದಿನ ಸ್ಥಾನದಲ್ಲಿದ್ದರೆ ಭಾರತದ ಜಿಡಿಪಿ ಮೊದಲಿನ ಸ್ಥಾನದಲ್ಲಿರುತ್ತದೆ. ಬಡಜನರು ಉನ್ನತ ಸ್ಥಾನಕ್ಕೇರಲು ಯೋಜನಾ ಸಮಿತಿ ಸಹಾಯವಾಗಲಿದೆ. ಗ್ರಾಮದ ಜನರು ಸಂಘಟಿತರಾದಾಗ ಸುಧಾರಣೆ ಸಾಧ್ಯವಾಗುತ್ತದೆ. ಗ್ರಾಮಸಭೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತು ಚರ್ಚೆಯಾಗಬೇಕು. ಗ್ರಾಮಸ್ಥರು ಸ್ವಾವಲಂಬಿಗಳಾಗಬೇಕು. ತಮ್ಮ ಪ್ರದೇಶದಲ್ಲಿನ ನೀರು ಮತ್ತು ಮಣ್ಣಿನ ಸಂರಕ್ಷಣೆ , ಬೀಜ ಉತ್ಪಾದನೆ ಮಾಡುವುದು ಅವರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಈ ಹಿಂದೆ ಅವರು ನೀರಿನ ಸಂರಕ್ಷಣೆಗಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಆರೋಗ್ಯ ಮತ್ತು ಆಹಾರ ತಜ್ಞ ಡಾ. ಖಾದರ್ ಅವರು ಮಾತನಾಡಿ ಮಣ್ಣಿನ ಮತ್ತು ನೀರಿನ ಸಂರಕ್ಷಣೆ ಮಾಡುವುದು ಮುಖ್ಯ ಕೆಲಸವಾಗಿದೆ. ಗ್ರಾಮಿಣ ಪ್ರದೇಶದಲ್ಲಿ ಗೊಮಾಳ ಸಂಸ್ಕ್ರತಿಯ ಪ್ರಾಮುಖ್ಯತೆ ತಿಳಿಸಿದರು. ನಮ್ಮ ಭೂಮಿಯನ್ನು ನಾವು ಸಂರಕ್ಷಣಾ ಮಾಡಬೇಕು. ಸಾವಯವ ಧಾನ್ಯದ ಬಳಕೆ ಹೆಚ್ಚಾಗಬೆಕು. ನಗರೀಕರಣ ಕ್ಕೆ ಪ್ರಾಮುಖ್ಯತೆ ಕೊಟ್ಟ ಹಾಗೆ ಗ್ರಾಮಿಣ ಪ್ರದೇಶದ ಪ್ರಾಮುಖ್ಯತೆ ಕೊಡಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಗಳ ಬಳಕೆ ವಿನಾಶಕಾರಿಯಾಗಿದೆ. ಎಲ್ಲ ಜೀವರಾಶಿಗಳಿಗೆ ಮಣ್ಣು ಮತ್ತು ನೀರು ಬಹಳ ಮುಖ್ಯವಾಗಿದೆ. ಆರೋಗ್ಯ ನಮ್ಮ ಸ್ವಂತ ಸ್ವತ್ತಾಗಬೇಕು. ನಮ್ಮ ಪ್ರದೇಶದ ಮಣ್ಣಿನಲ್ಲಿಯೇ ನಮ್ಮ ಆಹಾರ ಬೆಳೆದುಕೊಳ್ಳಲು ಪ್ರಯತ್ನಿಸಬೇಕು. ಅನವಶ್ಯಕ ಆಹಾರ ಸೇವನೆಯಿಂದಲೇ ಅನಾರೋಗ್ಯ ಉಂಟಾಗುವುದನ್ನು ನಾವು ಕಾಣುತ್ತಿದ್ದೇವೆ. ಮಣ್ಣು ಮತ್ತು ನೀರು ಪೋಲಾಗದಂತೆ ತಡೆದು ಸ್ವಾವಲಂಬಿ ಯಾಗಿ ಬೆಳೆ ಬೆಳಯಬೇಕು ಎಂದು ಡಾ.ಖಾದರ್ ವಿವರಿಸಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸ್ವಾಗತಿಸಿದರು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಮಟ್ಟದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಜೆಟ್ ತಯಾರಿಸಲಾಗುತ್ತಿದೆ. ಸ್ವಾವಲಂಬಿ ಬದುಕು ಸ್ವಾಭಿಮಾನದ ಬದುಕಾಗಿದೆ. ಗ್ರಾಮ ಪಂಚಾಯತ್ ಗಳಿಂದ ಮಾಹಿತಿ ಸಂಗ್ರಹಣೆಯಾಗಿ ತಾಲೂಕು ಪಂಚಾಯತ್ ನಂತರ ಜಿಲ್ಲಾ ಪಂಚಾಯತ್ ವರೆಗೆ ಜಿಲ್ಲೆಯಲ್ಲಿ ಬೇಕಾಗುವ ಒಂದು ಸಮಗ್ರ ಕೈ ಪಿಡಿಯನ್ನು ಸರ್ಕಾರದ ಮುಂದೆ ಇಟ್ಟಾಗ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಗಣ್ಯರಾದ ಸಿದ್ದು ಪಾಟೀಲ, ಬಳಿಗಾರ, ವಾಸಣ್ಣ ಕುರಡಗಿ, ಎಲ್.ಡಿ.ಚಂದಾವರಿ, ಕೃಷ್ಣ ಪರಾಪೂರ, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 