ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ

ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ Demand to take legal action against MLA Basanagouda Patil (Yathnal)

ವಿಜಯಪುರ 17: ಬಸನಗೌಡ ಪಾಟೀಲ, ಯತ್ನಾಳ್ ಎಂಬ ಈ ವ್ಯಕ್ತಿಯ ಈ ಮಾತುಗಳು ಸ್ಪಷ್ಟವಾಗಿ ಸಂವಿಧಾನ ಜಾರಿಯಲ್ಲಿರುವ ಈ ದೇಶದಲ್ಲಿ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಬರುವ ಮಹಾ ಅಪರಾಧವಾಗಿದೆ. ಈ ಮಾತನ್ನು ಈತ ಸಾರ್ವಜನಿಕವಾಗಿ ಹೇಳಿದ್ದಾನೆ. ಈತ ಮಾತಾಡಿರುವ  ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಹಾಗು ಸಾಮಾಜಿಕ ಮಾಧ್ಯಮಗಳಲ್ಲಿ ಈಗಲೂ ಹರಿದಾಡುತ್ತಿದೆ. 

ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರವಿದೆ,  ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಶಾಸಕರೂ ಸಂಸದರೂ ಸಚಿವರುಗಳೂ ಇದ್ದಾರೆ, ಸಂವಿಧಾನದ ಉಲ್ಲಂಘನೆ ಆಗದಂತೆ ಕಾಯಲು ರಾಜ್ಯದಲ್ಲಿ ದಕ್ಷ ಉನ್ನತಾಧಿಕಾರಿಗಳ ಪೊಲೀಸ್ ಇಲಾಖೆ ಇದೆ, ಆದರೂ ಈ ವ್ಯಕ್ತಿ ಮನಬಂದಂತೆ ಬಾಯಿ ಬಡಿದುಕೊಂಡು ಒಂದು ವರ್ಗವನ್ನು ಅವಮಾನಿಸುತ್ತಿರುವುದು ನಿಲ್ಲಿಸುತ್ತಿಲ್ಲ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಾನೆ.  

ಯಾವ ಕಾನೂನಿನ ಭಯವೂ ಇಲ್ಲದೆ ಹೀಗೆ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಿಸುವ ಇಂಥ ಸಂವಿಧಾನ ವಿರೋಧಿ ಜಾತಿರೋಗಿಯ ಮೇಲೆ ಸುಮೋಟೋ ಕೇಸು ದಾಖಲಿಸಲು ಅವಕಾಶವಿದೆ ಸಾಕ್ಷಿಯೂ ಇದೆ. ಕಾನೂನು ಕಾಯ್ದೆಯೂ ಇದೆ ತಕ್ಕ ಶಿಕ್ಷೆಯೂ ಇದೆ. ಇಂಥವರಿಗೆ ಸರಿಯಾಗಿ ಕಾನೂನಿನ ಪಾಠ ಮಾಡಿ ಜೈಲಿನಿಂದ ಹೊರಗೆ ಬರದಂತೆ ಬಿಗಿಮಾಡಿ ಇತರರು ಎಚ್ಚೆತ್ತುಕೊಳ್ಳುವಂತೆ ಮಾಡಲು ಹೇರಳವಾದ ಅವಕಾಶ ಸಂವಿಧಾನಬದ್ಧ ಶಾಸಕಾಂಗ (ಸರ್ಕಾರ) ಕಾಯಾಂರ್ಗ (ಪೋಲೀಸ್ ) ನ್ಯಾಯಾಂಗ ( ಕೋರ್ಟ್‌) ಈ ಮೂರೂ ಅಂಗಕ್ಕೂ ಇದೆ..!! ಇನ್ನೇನು ಬೇಕು..!? ಹೇಳಿ ಈತನ ಮೇಲೆ ಕಾನೂನು ಕ್ರಮವಾಗಲು..!? 

ಕೂಡಲೇ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರವನ್ನು ಆಗ್ರಹಿಸುತ್ತೆನೆ.