ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾಽಽ ಅಶೋಕ ದಳವಾಯಿ ಅವರಿಗೆ ರೈತ ಸಂಘ ಮನವಿ
ವಿಜಯಪುರ 13: ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ನೀಡಬೇಕು, ಸ್ವಾಮಿನಾಥನ್ನ ವರದಿ ಜಾರಿಗೆ ತರಬೇಕು ಹಾಗೂ ಎಲ್ಲಾ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ ನೇರವಾಗಿ ರೈತರೆ ಮಾರಾಟ ಮಾಡಲು ಯೋಜನೆ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾಽಽ ಅಶೋಕ ದಳವಾಯಿ ಅವರಿಗೆ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸುವಂತೆ ಆಗ್ರಹಿಸಲಾಯಿತು.
ಜಿಲ್ಲಾಧ್ಯಕ್ಷರದ ಸಂಗಮೇಶ ಸಗರ ಅವರು ಮಾತನಾಡುತ್ತಾ ವಿಜಯಪುರ ಜಿಲ್ಲೆಯೂ ಬರಗಾಲದ ಹಣೆಪಟ್ಟಿಯಿಂದಾಗಿ ಇಲ್ಲಿಯ ರೈತರು ಸರಿಯಾದ ನೀರು, ವಿದ್ಯುತ್ ಸಮಸ್ಯೆಗಳಿದ್ದರು ಗಡಿಭಾಗವಿರುವ ಇಲ್ಲಿ ನಕಲಿ ಬೀಜ, ಗೊಬ್ಬರ, ಕೀಟನಾಶಕಗಳ ಎಗ್ಗಿಲ್ಲದ ಹಾವಳಿಯ ನಡುವೆ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ನಷ್ಟಹೊಂದಿ ರೈತ ಆತ್ಮಹತೈಯಂತಹ ಕೆಟ್ಟ ಪೀಡಗಿನಿಂದ ಕಂಗಾಲಾಗಿ ದಿಕ್ಕು ತೋಚದಂತಾಗಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು ಜೊತೆಗೆ ಸರಕಾರದಿಂದ ವಿಶೇಷ ಯೋಜನೆ ನಿರ್ಮಿಸಿ ಎಲ್ಲಾ ಬೆಳೆಗಳನ್ನು ರೈತರೇ ಮೌಲ್ಯವರ್ಧನೆ ಮಾಡಿ ಉಪಉತ್ಪನ್ನಗಳನ್ನು ತಯಾರಿಸಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡುವಂತೆ ಪ್ರೇರೇಪಿಸಬೇಕು ಅಂದಾಗ ಮಾತ್ರ ”ರೈತ ದೇಶದ ಬೆನ್ನೆಲುಬು” ಎಂಬುದು ನಿಜವಾದ ಘೋಷಣೆ ಆಗುತ್ತದೆ.
ಡಾಽಽ ಸ್ವಾಮಿನಾಥನ ವರದಿಯನ್ನ ಯತ್ತಾವತ್ತಾಗಿ ಜಾರಿ ಮಾಡಬೇಕೆಂದು ರಾಜ್ಯದ ಎಲ್ಲಾ ರೈತಪರ ಹೋರಾಟಗಾರರು ಒತ್ತಾಯ ಮಾಡುತ್ತಾ ಬಂದಿದ್ದರು ಇಲ್ಲಿಯವರೆಗೆ ಆಗಿಲ್ಲ, ಕೂಡಲೇ ಈ ವರದಿಯನ್ನು ಯಥಾವತ್ತಾಗಿ ಜಾರಿಗೋಳಿಸಬೇಕು,
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ತಾವೂ ಸರಕಾರದ ಗಮನಕ್ಕೆ ತಂದು ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೆ ಸೂಕ್ತ ಬೆಂಬಲಬೆಲೆ ನೀಡುವಂತೆ ತಾವೂಗಳು ಶಿಫಾರಸ್ಸು ಮಾಡಬೇಕು ಎಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಮಸ್ತ ಜಿಲ್ಲೆಯ ರೈತರ ಪರವಾಗಿ ವಿನಂತಿಸಿಕೊಳ್ಳುತ್ತೆವೆ ಎಂದರು
ಈ ವೇಳೆ ಜಿಲ್ಲಾ ಪ್ರಧಾನ ಕಾಯ್ಧರ್ಶಿಗಳಾದ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ತಾಲುಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ ಇದ್ದರು.