ಶಾಸಕ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಶಾಸಕ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಲು ಆಗ್ರಹ Demand to give ministerial position to MLA Yashwant Ray Gowda


ತಾಂಬಾ 06: ಇಂಡಿ ವಿಧಾನಸಭಾ ಕ್ಷೇತ್ರದ ಸ್ವಾತಂತ್ರ್ಯದ ನಂತರ ಸಚಿವ ಸ್ಥಾನ ನೀಡುವುದರಲ್ಲಿ ಎಲ್ಲ ಪಕ್ಷಗಳು ಮಲತಾಯಿ ಧೋರಣೆ ಮಾಡುತ್ತಾ ಬರುತ್ತಿವೆ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಮಾತು ಕೇಳಿಬರುತ್ತಿದೆ. ಹಾಗೇನಾದರೂ ಸಚಿವ ಸಂಪುಟ ಪುನಾರಚನೆ ಮಾಡಿದರೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವನಾಯಕ ಅಪ್ಪಣ್ಣ ಕಲ್ಲೂರ ಈ ಮೂಲಕ ಮನವಿ ಮಾಡಿದ್ದಾರೆ. 

ಸಚಿವಸ್ಥಾನದ ಎಲ್ಲ ಅರ್ಹತೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೊಂದಿದ್ದು ಜಿಲ್ಲೆಯಲ್ಲಿ ಸಜ್ಜನ ರಾಜಕಾರಣಿಯಾಗಿ ನಡೆದುಕೊಂಡುಬಂದಿದ್ದಾರೆ ಅಷ್ಟೇ ಅಲ್ಲದೆ ಕಳೆದ 2023 ಚುಣಾವಣೆ ಸಂದರ್ಭದಲ್ಲಿ ನಮ್ಮ ಇಂಡಿ ತಾಲೂಕಿಗೆ ಪ್ರಜಾ ಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಮುಖ್ಯ ಮಂತ್ರಿ ಸಿದ್ರಾಮಯ್ಯನವರು ತಾಲೂಕಿನ ಜನತೆ ಮುಂದೆ ಮಾತು ಕೊಟ್ಟಿದ್ದಾರೆ. ನೀವು ಆಯ್ಕೆ ಮಾಡುವುದು ಬರಿ ಶಾಸಕರನ್ನ ಅಲ್ಲ ಸಚಿವರನ್ನ ಎಂದು ಮಾತು ಕೊಟ್ಟಿದ್ದಾರೆ ಅದೇ ರೀತಿ ಈ ಬಾರಿ ನಮ್ಮ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನಮ್ಮ ತಾಲೂಕಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಕಾಂಗ್ರಸ್ ನಾಯಕರಾದ ಸಿದ್ದಗೊಂಡ ಹಿರೇಕುರಬರ, ಮಹ್ಮದ ವಾಲಿಕಾರ, ಪರಸು ಬಿಸನಾಳ, ರಾಯಗೊಂಡ ನಾಟಿಕಾರ, ಮಹಾಂತೇಶ ಬಡದಾಳ, ಪಾರುಖ್ ಮುಲ್ಲಾ ಇದ್ದರು.