ಕಾಶಪ್ಪನವರಗೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲು ಒತ್ತಾಯ

ಕಾಶಪ್ಪನವರಗೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲು ಒತ್ತಾಯ Demand to give Kashappa the post of Minister and District In-charge Minister

ಲೋಕದರ್ಶನ ವರದಿ, 

ಜಮಖಂಡಿ 18: ಕಾಂಗ್ರೆಸ್ ಸರ್ಕಾರದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಪ್ರಭಲ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹಲವು ದಶಕಗಳಿಂದ ಕಾಶಪ್ಪನವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದೆ ಆದ್ದರಿಂದ ಅವರ ಕುಟುಂಬದ ಶ್ರಮವನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಸಿಎಂ ಡಿ. ಕೆ. ಶಿವಕುಮಾರ ಸರಕಾರವನ್ನು ಹಿರಿಯ ವಕೀಲ, ಪಂಚಮಸಾಲಿ ಮಹಾಸಭಾದ ಖಜಾಂಚಿ ಎಸ್‌. ಎಸ್‌. ಕಣಬೂರ ಒತ್ತಾಯಿಸಿದರು. ಲಿಂಗಾಯತ ಪಂಚಮಸಾಲಿ ಸಮಾಜ 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ, ಕನಿಷ್ಠ ನಾಲ್ಕು ಸಚಿವ ಸ್ಥಾನವನ್ನು ನೀಡಬೇಕು,

ಮೊದಲಿನ ಪಟ್ಟಿಯಲ್ಲಿ ಕಾಶಪ್ಪನವರ ಹೆಸರು ಇರಬೇಕಿತ್ತು. ಆದರೆ ಅವರ ಹೆಸರು ಇರದ ಕಾರಣ ಸಮಾಜದ ಜನರಿಗೆ ನೋವಾಗಿದೆ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕು. ವಿಜಯಾನಂದ ಕಾಶಪ್ಪನವರ 2ಎ ಹೋರಾಟದ ಪ್ರತಿಫಲ ಹಾಗೂ ಬಿಜೆಪಿಯವರು ನಂಬಿಸಿ ಮೋಸ ಮಾಡಿದ ಪರಿಣಾಮವಾಗಿ ಕಾಂಗ್ರೆಸ್ ನಮ್ಮ ಸಮಾಜದ ಮತಗಳು ಹೆಚ್ಚಿಗೆ ಬಂದಿವೆ ನಮ್ಮ ಸಮಾಜದ ಮುಖಂಡರನ್ನು ಕಡೆಗಣಿಸಿದರೆ ಕಾಂಗ್ರೆಸ್ ಮುಂದಿನ ಭಾರಿ ನಷ್ಟವಾಗುತ್ತದೆ. ಜಿಲ್ಲೆಯಲ್ಲಿ ಪಕ್ಷವನ್ನು ಬೆಳೆಸುವ ಕೆಲಸವನ್ನು ಕ್ರಿಯಾಶೀಲವಾಗಿ ಮಾಡುತ್ತಿದ್ದಾರೆ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಈ ಭಾಗದ ಜನರ ಹಿತ ಕಾಪಾಡಲು ಸಚಿವ ಸ್ಥಾನ ನೀಡುವ ಅವಶ್ಯಕತೆ ಇದೆ ಎಂದರು.