ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಿ ಪರಿಹಾರ ನೀಡುವಂತೆ ಆಗ್ರಹ
Demand to declare Vijayapura district drought-hit and provide relief
ಲೋಕದರ್ಶನ ವರದಿ
ವಿಜಯಪುರ 30 : ಜಿಲ್ಲೆಯಲ್ಲಿ ಕಳೆದ ವರ್ಷ ಅತೀ ಹೆಚ್ಚು ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದ ಸಾಕಷ್ಟು ನಷ್ಟಗೊಂಡರೆ ಈ ವರ್ಷ ಒಟ್ಟಾರೆಯಾಗಿ 13 ತಾಲೂಕಿನ ಯಾವ ಗ್ರಾಮಗಳಲ್ಲಿ ಬಿತ್ತನೆ ಮಾಡುವಷ್ಟು ಮಳೆ ಆಗಿಲ್ಲ ಆದ್ದರಿಂದ ಕೂಡಲೇ ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನು ಸಂಪೂರ್ಣ ಬರದ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ 25000 ಪರಿಹಾರ ನೀಡಬೇಕು ಹಾಗೇ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವುದುರ ಜೊತೆಗೆ ಎಲ್ಲಾ ಹಳ್ಳ, ಕೊಳ್ಳ, ಕೆರೆಗಳನ್ನು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳಾದ ಡಾ. ಓದ್ರಾಮ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಮಾತನಾಡುತ್ತಾ ಜಿಲ್ಲೆಯಲ್ಲಿ ಕಳೆದ ವರ್ಷ 158 ಎಂ.ಎಂ ಮಳೆ ಆಗಿತ್ತು, ಈ ವರ್ಷ ಜಿಲ್ಲೆಯ ಯಾವ ಮೂಲೆಯಲ್ಲಿಯೂ ಅಷ್ಟೊಂದು ಹೇಳಿಕೊಳ್ಳುವಷ್ಟು ಮಳೆ ಆಗಿಲ್ಲ ಆದರೆ ಇಲಾಖೆ ವರದಿ ಪ್ರಕಾರ 138 ಎಂ. ಎಂ ಮಳೆ ಆಗಿ ಕೇವಲ 10 ಅ ಮಳೆ ಪ್ರಮಾಣ ಕಡಿಮೆ ಆಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ, ಇದರಲ್ಲಿ ಸಂಪೂರ್ಣ ಗೋಲಮಾಲ್ ಆಗಿರುವುದು ಕಂಡು ಬರುತ್ತಿದೆ, ಕೂಡಲೇ ಜಿಲ್ಲಾಧಿಕಾರಿಗಳು ಎಲ್ಲಾ ಮಳೆ ಮಾಪನ ಕೇಂದ್ರಗಳ ಅಧೀಕೃತ ವರದಿಯನ್ನು ತರೆಸಿ ಮತ್ತೊಮ್ಮೆ ಪರೀಶೀಲನೆ ಮಾಡಿ ಜಿಲ್ಲೆಯನ್ನು ಬರ ಘೋಷಣೆ ಮಾಡಬೇಕು ಎಂದರು .
ಈ ವೇಳೆ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ ಅವರು ಮಾತನಾಡುತ್ತಾ, ಹಣ ಕೊಟ್ಟು ಬೀಜ ಗೊಬ್ಬರ ಖರೀಧಿಸಿದ ಹಲವಾರು ರೈತರು ಬಿತ್ತನೆ ಮಾಡದೇ ಹಾಗೆ ಇಟ್ಟು ಕೊಂಡಿದ್ದರೆ, ಇನ್ನ ಹಲವಾರು ರೈತರು ಬೆಲೆ ಬಾಳುವ ಬೀಝ ಗೊಬ್ಬರ ನೆಲಕ್ಕೆ ಹಾಕಿ ಮಳೆ ಬಾರದೇ ಮುಗಿಲಿನತ್ತ ನೋಡುತ್ತಾ ಕುಳಿತ್ತಿದ್ದಾರೆ, ಒಂದೆಡೆ ಸಾಲದ ಕಾಟ ಇನ್ನೊಂದೆಡೆ ಮಳೆಯ ಕೊರತೆ, ಇವುಗಳ ಮಧ್ಯ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದರೆ ಕೂಡಲೇ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಿ ಪ್ರತಿ ಎಕರೆಗೆ 25000 ಸಾವಿರ ಪರಿಹಾರ ಕೊಡಬೇಕು,
ಹಾಗೇ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಅಡಿ ಎಲ್ಲಾ ಕಾಲುವೆಗಳ ಮೂಲಕ ಎಲ್ಲಾ ಹಳ್ಳ, ಕೊಳ್ಳ, ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾಸಂಚಾಲಕರಾದ ಮಹಾದೇವ ಬನಸೋಡೆ, ತಾ. ಕಾರ್ಯಾಧ್ಯಕ್ಷರಾದ ರಾಮಸಿಂಗ ರಜಪೂತ, ತಾ,ಉಪಾಧ್ಯಕ್ಷರಾದ ಬಸಗೊಂಡ ತೇಲಿ, ಜಂಬಗಿ ಅಧ್ಯಕ್ಷರಾದ ಗೋರಕನಾಥ ಗೇರಡೆ, ಸುಭಾಸ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕಂಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ, ಸೇರಿದಂತೆ ನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 