ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಭೂ ಪರಿವರ್ತನೆ ಅನುಮತಿ ನೀಡಿದ್ದನ್ನು ರದ್ದು ಪಡಿಸಲು ಆಗ್ರಹ : ಮಲ್ಲಿಕಾರ್ಜುನ ಬಟಗಿ

ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಭೂ ಪರಿವರ್ತನೆ ಅನುಮತಿ ನೀಡಿದ್ದನ್ನು ರದ್ದು ಪಡಿಸಲು ಆಗ್ರಹ : ಮಲ್ಲಿಕಾರ್ಜುನ ಬಟಗಿ Demand to cancel permission for land conversion in Doni River flood-affected area: Mallikarjuna Bata

ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಭೂ ಪರಿವರ್ತನೆ ಅನುಮತಿ ನೀಡಿದ್ದನ್ನು ರದ್ದು ಪಡಿಸಲು ಆಗ್ರಹ : ಮಲ್ಲಿಕಾರ್ಜುನ ಬಟಗಿ 

ವಿಜಯಪುರ  14 : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶವೆಂದು ಘೋಷಿಸಿ ಪುನರ್ವಸತಿ ಕಲ್ಪಿಸಲು ಗ್ರಾಮದ ಜನರು ಸರ್ಕಾರಕ್ಕೆ ಹಲವಾರು ದಿನಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿ ವಿಷಯ ಸರ್ಕಾರದ ಗಮನದಲ್ಲಿದ್ದರೂ ಕೂಡ ಡೋಣಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವಸತಿ ಉದ್ದೇಶಕ್ಕಾಗಿ ಜಮೀನುಗಳನ್ನು ಭೂ ಪರಿವರ್ತನೆ ಮಾಡಲು ಜಿಲ್ಲಾಡಳಿತದಿಂದ ಅನುಮತಿ ನೀಡಿದ್ದು ಇರುತ್ತದೆ. ತಕ್ಷಣ ಈ ಸಮಸ್ಯೆಯನ್ನು ಅರಿತುಕೊಂಡು ಸಾರ್ವಜನಿಕರಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಸಿದ್ದರು ತಹಶೀಲ್ದಾರ ಹಾಗೂ ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರಿಗೆ ಕ್ರಮ ಜರುಗಿಸಲು ತಿಳಿಸಿರುತ್ತಾರೆ ಆದರೆ ಭೂ ಪರಿವರ್ತನೆ ಮಾಡಲು ಆದೇಶ ಮಾಡಿದನ್ನು ಹಿಂಪಡೆದಿರುವುದಿಲ್ಲ. ಇದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಈಗ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಡಾ. ಆನಂದ ಕೆ. ತಾವುಗಳು ಈ ಗಂಭೀರ ವಿಷಯವನ್ನು ಪರಿಗಣಿಸಬೇಕೆಂದು ಗಮನಕ್ಕೆ ತಂದಾಗ ಮನವಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿ ಸದರಿ ವಿಷಯದ ಕುರಿತು ವಿಚಾರಿಸುತ್ತೇನೆಂದು ಭರವಸೆ ನೀಡಿದ್ದಾರೆ.  ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಎಮ್‌.ಎಸ್‌. ಪಾಟೀಲ, ಆನಂದ ಸೋಮಕನವರ ಮುಂತಾದವರು ಇದ್ದರು.