ಬೀಜ, ಗೊಬ್ಬರ, ಡಿಸೇಲ್ ಕೊರತೆ ನೀಗಿಸಿ, ವಿಪತ್ತು ಪರಿಹಾರ ಹೆಚ್ಚಿಸಲು ಒತ್ತಾಯ

ಬೀಜ, ಗೊಬ್ಬರ, ಡಿಸೇಲ್ ಕೊರತೆ ನೀಗಿಸಿ, ವಿಪತ್ತು ಪರಿಹಾರ ಹೆಚ್ಚಿಸಲು ಒತ್ತಾಯ Demand to address shortage of seeds, fertilizer, diesel and increase disaster relief

ಲೋಕದರ್ಶನ ವರದಿ 

 ಬೆಳಗಾವಿ 25: ಕೃಷಿ ವಲಯಲ್ಲಿ ಬೀಜ, ಗೊಬ್ಬರ, ಡಿಸೇಲ್ ಕೊರತೆ ನೀಗಿಸುವುದು ಮತ್ತು ರಾಷ್ಟ್ರೀಯ, ರಾಜ್ಯ ವಿಪತ್ತು ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಭಾರತೀಯ ಕೃಷಿಕ ಸಮಾಜ-ರೈತ ಸಂಘಟನೆಯ ಪದಾಧಿಕಾರಿಗಳು ಸರಕಾರಗಳನ್ನು ಒತ್ತಾಯಿಸಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕೆಲಹೊತ್ತು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿಯೊಂದನ್ನು ಸಲ್ಲಿಸಿ, ಪ್ರಸಕ್ತ 2026-27ನೇ ಸಾಲಿನ ಕೃಷಿ ಚಟುವಟಕೆ ಚುರುಕುಗೊಂಡು, ರೈತರು ಬಿತ್ತನೆ ಭೂಮಿಯನ್ನು ಹದಗೊಳಿಸಿ, ಬಿತ್ತನೆಗೆ ಸಜ್ಜಾಗಿರುವ ಸಮಯದಲ್ಲಿ ರೈತರಲ್ಲಿ ಆತಂಕ ಛಾಯೆ ಮೂಡುತ್ತಿದೆ. ಕಾರಣ ಪಾಶ್ಚಿಮಾತ್ಯ ರಾಷ್ಟ್ರಗಳ ಯುದ್ಧದಿಂದ ಪರಿಣಾಮ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯಾಗುವ ಕುರಿತು ಸರ್ಕಾರದ ಸಚಿವದ್ವಯರು ದಿನಕ್ಕೊಂದು ಗೊಂದಲ ಉಂಟಾಗುತ್ತಿದೆ. ಮತ್ತು ರಾಷ್ಟ್ರೀಯ ವಿಕೋಪ ಪರಿಹಾರ  ಮತ್ತು ರಾಜ್ಯ ವಿಕೋಪ ಪರಿಹಾರ  ಮೊತ್ತವನ್ನು ಹೆಚ್ಚಿಸುವುದು ಮತ್ತು ರೈತರ ಕೆಲ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಭಾರತೀಯ ಕೃಷಿಕ ಸಮಾಜ- ರೈತ ಸಂಘಟನೆ ಆಗ್ರಹಿಸುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.  

ಪ್ರಸಕ್ತ ಹಂಗಾಮಿಗೆ ರೈತರ ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಡಿಸೇಲ್‌ನ್ನು ಸಮರ​‍್ಕ ಮತ್ತು ರಿಯಾಯತಿ ದರದಲ್ಲಿ ಪೂರೈಸಬೇಕು, 2026-2027 ಸಾಲಿನ ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ಸುರಿದ ಮಳೆಯಿಂದ ನಷ್ಟವಾದ ತೋಟಗಾರಿಕಾ ಬೆಳೆನಷ್ಟವನ್ನು ಪರಿಹಾರವನ್ನು ಸಮರಾ​‍್ಕಗಿ ಸರ್ವೆ ಮಾಡಿ ಹೆಚ್ಚಿನ ಮೊತ್ತದ ಪರಿಹಾರವನ್ನು ಕೂಡಲೆ ವಿತರಿಸಬೇಕು, ರಾಜ್ಯದಲ್ಲಿ ಬಿತ್ತನೆ ಬೀಜ, ರಗಸೊಬ್ಬರ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟವಾಗುವದನ್ನು ತಡೆಹಿಡಿಯಬೇಕು, ಒಂದುವೇಳೆ ಕಂಡು ಬಂದಲ್ಲಿ ಸಂಬಂಧಿಸಿ ಅಧಿಕಾರಿಗಳನ್ನ ಹೊಣೆಗಾರರನ್ನಾಗಿಸುವು ಮೂಲಕ ನಷ್ಟವನ್ನು ಅವರಿಂದಲೇ ವಸೂಲಿ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೋದಗಿ ಸೇರಿದಂತೆ ಅನೇಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.