ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಆಗ್ರಹ
Demand that Yatnal be dismissed from the MLA position
ವಿಜಯಪುರ 19: ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ವೈ. ಕಂಬಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ ಅವರನ್ನು ನಾಡ ಹಬ್ಬ ದಸರಾ ಉದ್ಘಾಟನೆಗೆ ಆಹ್ವಾನ ನಿರಾಕರಿಸುವ ಮಾತಿನ ಭರದಲ್ಲಿ ಸನಾತನಿ ಧರ್ಮದ ಮಹಿಳೆಯರು ಮಾತ್ರ ಚಾಮುಂಡಿ ದೇವಿಗೆ ಹೂ ಅರ್ಿಸಲು ಯೋಗ್ಯರು ಅಂತಾ ಹೇಳಿ ಮುಂದುವರೆದು ಕೇವಲ ದಲಿತ ಮಹಿಳೆಗೂ ಅವಕಾಶವಿಲ್ಲ. ಅಂತಾ ಮಾತನಾಡಿದ್ದು ಸಂವಿಧಾನ ವಿರೋಧ ಹೇಳಿಕೆಯಾಗಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ಬಹಿರಂಗವಾಗಿ ಮನಸ್ಮೃತಿಯನ್ನು ಸುಡುವುದರ ಮೂಲಕ ಮಹಿಳೆಯರಿಗೆ, ಶೋಷಿತರಿಗೆ ಮುಕ್ತವಾಗಿ ಸಂವಿಧಾನಬದ್ಧ ಹಕ್ಕನ್ನು ನೀಡಿದ್ದಾರೆ. ಆದರೆ ಅಂಬೇಡ್ಕರ್ ಅವರನ್ನು ಒಂದು ಕಡೆ ಹೊಗಳಿ, ಅದೇ ಬಾಯಿಂದ ದಲಿತ ಸಮುದಾಯದ ಹೆಣ್ಣುಮಕ್ಕಳಿಗೆ ಅವಕಾಶವಿಲ್ಲ ಎನ್ನುವಂತಹದ್ದನ್ನು ದಸಂಸ ತೀವ್ರವಾಗಿ ಖಂಡಿಸುತ್ತದೆ. ದಲಿತ ಹೆಣ್ಣುಮಕ್ಕಳಿಗೆ ಅಷ್ಟೇ ಅಲ್ಲದೆ ಅನ್ಯ ಕೋಮಿನ ಮಹಿಳೆಯರಿಗೂ ಹಾಗೂ ಜಗಜ್ಯೋತಿ ಅಣ್ಣ ಬಸವಣ್ಣನವರನ್ನು ಕೂಡ ಹೊಳೆಹಾರಿ ಬಿದ್ದ ಎಂಬ ಪದವನ್ನು ಬಳಿಸಿ ಅವಮಾನಗೊಳಿಸಿದ್ದನ್ನು ನಾವು ಇಲ್ಲಿ ನೋಡಿದ್ದೇವೆ. ಮತ್ತು ಸಾಹಿತಿಗಳಿಗೆ, ಹೋರಾಟಗಾರರಿಗೆ ಕ್ಷುಲ್ಲಕವಾಗಿ ಮಾತನಾಡುವುದು ಇವನ ಬಾಯಿಚಾಳಿಯಾಗಿದೆ. ಅದರಂತೆ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಈತನ ಮೇಲೆ ಸಾಕಷ್ಟು ಕೇಸುಗಳಿದ್ದರೂ ಕೂಡ ಜಿಲ್ಲಾಡಳಿತ ಮೂಕವಿಸ್ಮಯವಾಗಿದ್ದನ್ನು ನಾವು ಇಲ್ಲಿ ನೋಡಬಹುದು. ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸುತ್ತೇವೆ.
ಈತನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ದು ಅರೆ ಬರೆ ಹುಚ್ಚನಾಗಿ ಹೇಳಿಕೆ ಕೊಡುತ್ತಿದ್ದು ಈಗ ಸಂಪೂರ್ಣವಾಗಿ ಹುಚ್ಚನಾಗಿದ್ದು ಜನರ ಮೆಚ್ಚುಗೆಗಾಗಿ ಮನಬಂಧಂತೆ ನಾಲಿಗೆಯನ್ನು ಹರಿಯಬಿಡುತ್ತಿರುವ ಈತನನ್ನು ಕೂಡಲೇ ರಾಜ್ಯ ಪಾಲರು ಈತನ ಶಾಸಕ ಸ್ಥಾನದಿಂದ ವಜಾಗೊಳಿಸಿ ಸಂವಿಧಾನಕ್ಕೆ ಗೌರವ ಸೂಚಿಸಬೇಕೆಂದು ರಾಜ್ಯಪಾಲರಲ್ಲಿ ಕೇಳಿಕೊಳ್ಳುತ್ತೇವೆ.
ಅದರಂತೆ ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಮಾನಗಳಲ್ಲಿ ನಗರ ಶಾಸಕ ಯತ್ನಾಳರ ಪ್ರತಿಕೃತಿ ದಹಿಸುವ ಮೂಲಕ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 