ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ನೇಮಕಾತಿಗೆ ಆಗ್ರಹ
Demand for the appointment of Radiology Imaging Officers
ಬೆಳಗಾವಿ 09: “ಕ್ಷಯ ಮುಕ್ತ ಭಾರತ” ಮಾಡುವ ಸಲುವಾಗಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳು ಕಂಕಣ ಭದ್ದವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವೊಂದು ತಾಲುಕಾ ಆಸ್ಪತ್ರೆಗಳಲ್ಲಿ ಹಾಗೂ ಮತ್ತೀತರ ಕಡೆಗಳಲ್ಲಿ ಒಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲಸದ ಒತ್ತಡವೂ ಇರುತ್ತದೆ. ಹಾಗೂ ಈಗ ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಸಹ ಯಾರೂ ಕ್ಷಯ ಪರೀಕ್ಷೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹ್ಯಾಂಡ್ ಹೆಲ್ಡ ಎಕ್ಸ-ರೇ ಯಂತ್ರಗಳನ್ನು ಸಹ ಪರಿಚಯಿಸಲಾಗಿದ್ದು ಯಂತ್ರ ನಿರ್ವಹಣೆ ಕುರಿತು ಸಿಬ್ಬಂದಿಗಳಿಗೆ ತರಭೇತಿ ನೀಡಲಾಗಿದ್ದು ಈ ಕಾರ್ಯದ ಸಲುವಾಗಿ ವಿಶೇಷವಾಗಿ ಅನ್ಯ ವೃಂದಗಳ ಸಿಬ್ಬಂದಿಗಳನ್ನು ಸ್ಟೈಪಂಡ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಿಸಿದ್ದು ಅದೇ ತರಹ ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳನ್ನು ಸಹ ಸ್ಟೈಪಂಡ ಆಧಾರದ ಮೇಲೆ ತಾತ್ಕಾಲಿಕವಾಗಿ ಅಥವಾ ಒಳ-ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಡಿ.ಹೆಚ್. ಓ ರವರಿಗೆ ಮನವಿ ನೀಡಿ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಡಳಿತಾಧಿಕಾರಿ ರಮೇಶ ಮಡಿವಾಳರ ತಕ್ಷಣ ಈ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಹ್ಯಾಂಡ್ ಹೆಲ್ಡ ಎಕ್ಸ-ರೇ ಯಂತ್ರಗಳನ್ನು ನಿರ್ವಹಿಸುವ ಸಂದರ್ಬದಲ್ಲಿ ಕಡ್ಡಾಯವಾಗಿ ಎ.ಇ.ಆರಿ್ಬ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಾರ್ವಜನಿಕರು, ಹಾಗೂ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ರೇಡಿಯೇಶನ್ ಪ್ರಭಾವ ಆಗದ ಹಾಗೇ ಮನ್ನೆಚ್ಚರಿಕೆ ವಹಿಸುವಲ್ಲಿ ಕ್ರಮ ತೆಗೆದುಕೊಳ್ಳುವಂತೆ ಈ ಸಂಧರ್ಬದಲ್ಲಿ ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳು ಒತ್ತಾಯಿಸಿದರು. ಈ ಸಂಧರ್ಬದಲ್ಲಿ ಸಂಘದ ಗೌರವಾಧ್ಯಕ್ಷ ಆಕಾಶ್ ಥಬಾಜ, ಅಧ್ಯಕ್ಷ ರಾಜೀವ ಮಡಿವಾಳರ, ಕಾರ್ಯದರ್ಶಿ ಕುಬೇರ ಬೋರಣ್ಣವರ, ಶ್ರೀಮತಿ ಸುಹಾಶಿನಿ, ಸುಕದಾ, ಗಾಂಧಿ ಉಪರಿ, ಕವಿತಾ, ಗೀತಾ, ಪೂರ್ಣಿಮಾ, ಹೆಚ್.ಎಸ್. ಕೇರಿ, ರಾಜಶೇಖರ ಬಂಗಾರಿ, ಶಂಕರ ಪಾಟೀಲ, ರಿತೇಶ, ಯಾಕೂಬ ಜಾಂಬೋಟಿ, ಸುಧಾ ಪಾಶ್ಚಾಪುರೆ, ಜಾಯ್, ನಾಗಪ್ಪ ವಿಜಾಪುರೆ ಒಳಗೊಂಡಂತೆ ಜಿಲ್ಲೆಯ ಎಲ್ಲಾ ರೆಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 