ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಬಿ.ಜೆ.ಇಂಡಿ ಅವರನ್ನು ಅಮಾನತ್ತುಗೊಳಿಸಲು ಆಗ್ರಹ
Demand for suspension of Dr. B.R. Ambedkar Development Corporation Manager B.J. Indi
ವಿಜಯಪುರ 07: ಡಾಽಽ ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ವಿಜಯಪುರ ವ್ಯಸ್ಥಾಪಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಜೆ.ಇಂಡಿ ಅವರು ಸಮಾಜ ಕಲ್ಯಾಣ ಇಲಾಖೆಗೆ ಬರುವ ಫಲಾನುಭವಿಗಳ ಹಾಗೂ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾ, ಇಲಾಖೆಯಲ್ಲಿರುವ ಮಾಹಿತಿಗಳನ್ನು ಸರಿಯಾಗಿ ನೀಡದೆ ತಾವು ಇರುವುದು ಸಾರ್ವಜನಿಕರ ಸೇವೆಗಾಗಿ ಎಂಬುವುದನ್ನು ಮರೆತು ಅಧಿಕಾರದ ದರ್ ಮೆರೆಯುತ್ತಿದ್ದಾರೆ ಕೂಡಲೇ ಇವರ ಮೇಲೆ ಶಿಸ್ತು ಕ್ರಮ ಮತ್ತು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರಣು ಎಸ್. ಜಮಖಂಡಿ ಮಾತನಾಡಿ, ದೇವರ ಹಿಪ್ಪರಗಿಯ ರಮೇಶ ತಂ.ಮಡಿವಾಳಪ್ಪ ಮಲ್ಲಾರಿ ಅವರಿಗೆ ಅಂಬೇಡ್ಕರ ಅಭಿವೃದ್ಧಿ ನಿಮಗದಿಂದ ಕೊಳವೆ ಬಾವಿ ಮಂಜೂರಾಗಿದ್ದರು, ಸಂಬಂಧಪಟ್ಟ ಜಿಲ್ಲಾ ನಿಗಮದ ವ್ಯವಸ್ಥಾಪಕರಾದ ಬಿ.ಜೆ.ಇಂಡಿ ಇವರಿಗೆ ಹಲವಾರು ಬಾರಿ ಬೇಟಿಯಾಗಿ ನಮ್ಮ ಜಮೀನಕ್ಕೆ ಯಾವಾಗ ಕೋಳವೆ ಬಾವಿ ಕೋರೆಸುತ್ತಿರಿ ಎಂದು ಕೇಳಲು ಹೊದರೆ, ಉಢಾಫೆ ಉತ್ತರ ನೀಡುತ್ತಿದ್ದಾರಂತೆ. ಪೋನ ಮುಖಾಂತರ ನೀವು ಕೆಳಬೇಡಿ. ನಿಮಗೆ ಹೇಳುವ ಅವಶ್ಯಕತೆ ನಮಗಿಲ್ಲ. ನೀವು ಏನು ಬೇಕಾದರು ಮಾಡಿಕೊಳ್ಳಿ ಎಂದು ಗದರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾದ ಸುಖದೇವ ಎಸ್. ಕಟ್ಟಿಮನಿ ಮಾತನಾಡಿ, ಬಿ. ಜೆ.ಇಂಡಿ ಅವರು ಸಮಾಜ ಕಲ್ಯಾಣ ಅಧಿಕಾರಿಗಳಾಗಿ ನಿಗಮದ ವ್ಯವಸ್ಥಾಪಕರಾಗಿ ಎರಡೂ ಇಲಾಖೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ರಾಜಕೀಯದಿಂದ ಈ ಹುದ್ದೆಗೆ ಬಂದಿರುತ್ತೇನೆ. ನನಗೆ ಯಾರು ಹೇಳುವ ಅವಶ್ಯಕತೆ ಇಲ್ಲಾ. ಎಂದು ಹೀಗೆ ಸುಖಾ ಸುಮ್ಮನೆ ಸಾರ್ವಜನಿಕರ ಮೇಲೆ ಹರಿ ಹಾಯುತ್ತಿದ್ದಾರೆ. ಮತ್ತು ನಮ್ಮ ಸಮಿತಿಯವರನ್ನು ಬೇದರಿಸಿ ಜಾತಿನಿಂದನೆ ಮಾಡಿರುತ್ತಾರೆ. ಇವರ ಮೇಲೆ ಕ್ರಮ ಜರುಗಿಸಿ. ಇವರನ್ನು ಅಮಾನತ್ತು ಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಂಬೇಡ್ಕರ ಸ್ವಾಭಿಮಾನಿ ಸೇನೆ ವತಿಯಿಂದ ಈ ಅಧಿಕಾರಿ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಆಲಗೂರ, ಜಿಲ್ಲಾ ಉಪಾಧ್ಯಕ್ಷ ಸುಭಾಶಚಂದ್ರ ಹೊನ್ನಕಂಟ್ಟಿ, ತಿಪ್ಪಣ್ಣ ಮೇಲಿನಮನಿ, ಕಮಲಸಾಬ ಕಾಟಮನಳ್ಳೀ, ಶಿವಶರಣ ಕಾಂಬಳೆ, ತುಕಾರಾಮ ಮಮದಾಪೂರ, ಮುನ್ನಾ ಕೋಜಿಗಿಲ, ಶಿವಾನಂದ ಕೋಳಿ, ಟಿಟಿ.ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 