ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆಗೆ ಒತ್ತಾಯ
Demand for service security for crop surveyors
ಹೂವಿನಹಡಗಲಿ 17: ರಾಜ್ಯದ ಪಿ.ಆರ್.(ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಮತ್ತು 10 ಲಕ್ಷರೂ.ಜೀವ ವಿಮೆ ಸೇರಿದಂತೆ 14 ಬೇಡಿಕೆಯನ್ನುಈಡೇರಿಸಲು ಗುರುವಾರ ಕರ್ನಾಟಕ ರಾಜ್ಯ ಬೆಳೆ ಸಮೀಕ್ಷೆಗಾರರ ಹೂವಿನಹಡಗಲಿ ಸಂಘದಿಂದ ತಹಶಿಲ್ದಾರರ ಹಾಗೂ ಕೃಷಿ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ಇದೇ ವೇಳೆ ಬಸವರಾಜ ಸಂಶಿ ಮಾತನಾಡಿ ಕಳೆದ 9 ವರ್ಷಗಳಿಂದ ಕೃಷಿ ಇಲಾಖೆ ಮತ್ತುಕಂದಾಯಇಲಾಖೆಯಜಂಟಿಯಾಗಿ ನಡೆಸುವ ಬೆಳೆ ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಜೀತದಾಳು ವಿನಂತೆ ದುಡಿಸಿಕೊಳ್ಳಲಾಗುತ್ತಿದೆ. ಕೂಡಲೇ ಸರ್ಕಾರ ಮತ್ತುತಾಲೂಕು ಆಡಳಿತ ವತಿಯಿಂದಜೀವವಿಮೆ ಮಾಡಿಸಬೇಕು.ಗುರುತಿನಚೀಟಿ ನೀಡಬೇಕು, ರೈನ್‌ಕೋಟ್ ಶೂ ಮತ್ತುಟೀ ಶರ್ಟ್ ಗಳನ್ನು ಪ್ರತಿ ವರ್ಷ ನೀಡಬೇಕು ಹಾಗೂ ಸಮೀಕ್ಷೆಕೈಗೊಂಡಾಗಏನಾದರೂಕಾಡು ಪ್ರಾಣಿಗಳು ಹಾಗೂ ಕ್ರಿಮಿಕೀಟಗಳಿಂದ ತೊಂದರೆಯಾದಲ್ಲಿಆಸ್ಪತ್ರೆಖರ್ಚು ಪೂರ್ತಿ ನೀಡಬೇಕು, ಪ್ರತಿ ಪ್ಲಾಟ್ ಗೆ 30ರೂ. ಹೆಚ್ಚಾಳ ನೀಡಬೇಕು. ಹಾಗೂ ಇವರನ್ನು ದಿನಗೂಲಿ ನೌಕರರುಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯಅಧ್ಯಕ್ಷರಾದ ಸಂತೋಷಕುಮಾರಗಡ್ಡಿ, ಗೌರವಾಧ್ಯಕ್ಷರಾದ ಸುರೇಶ್ ನಗಾವತ್ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಹೆಚ್, ಉಪಾಧ್ಯಕ್ಷರಾದಕೊಟ್ರಬಸಪ್ಪಆರ್. ಖಜಾಂಚಿ ನಾಗರಾಜ್ ಎ, ಸದಸ್ಯರಾದ ಮಂಜುನಾಥ ಓಳಿ, ಹನುಮಜ್ಜಎಮ್ಮಿ. ಸಿದ್ದೇಶ, ಜೀವರಾಜ ಎಂ.ಮಲ್ಲಿನಾಥ, ರಫಿ ಮಂಜುನಾಥ ಪಿ, ದುರುಗಪ್ಪ ಸೇರಿದಂತೆಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 