ಶಿಥಿಲಗೊಂಡ ಶಾಲಾ ಕೊಠಡಿಗಳ ದುರುಸ್ಥಿಗೆ ಆಗ್ರಹ
Demand for repair of dilapidated school rooms
ಶಿಥಿಲಗೊಂಡ ಶಾಲಾ ಕೊಠಡಿಗಳ ದುರುಸ್ಥಿಗೆ ಆಗ್ರಹ
ಮಹಾಲಿಂಗಪುರ 05: ಕೆಂಗೇರಿಮಡ್ಡಿ ಬಡಾವಣೆ ಸರ್ಕಾರಿ ಉರ್ದು ಪ್ರೌಢಶಾಲೆ ಶಾಲೆಯ ಶಿಥಿಲಗೊಂಡ ಕೊಠಡಿಗಳ ದುರುಸ್ಥಿ ಸಲುವಾಗಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ಇತ್ತೀಚೆಗೆ ಈದ್ಗಾ ಮೈದಾನ ಹತ್ತಿರದ ಕೋಡಿಹಾಳ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳಿಗೆ ಶಾಸಕರು ಚಾಲನೆ ನೀಡಿದ ಸಂದರ್ಭದಲ್ಲಿ ಎಸ್. ಡಿ. ಎಂ. ಸಿಯವರು ಶಾಸಕ ಸವದಿಯವರನ್ನು ಭೇಟಿ ಮಾಡಿ ದುರಸ್ಥಿಗೆ ಮೌಖಿಕ ಮನವಿ ಕೂಡ ಮಾಡಿದರು.
ಪತ್ರದ ಸಾರಾಂಶ, ಈ ಶಾಲೆ 2003 ರಲ್ಲಿ ಆರಂಭವಾಗಿ, ಪ್ರಸ್ತುತ ಏಳು ಕೊಠಡಿಗಳನ್ನು ಹೊಂದಿದೆ. ಮೂರು ಕೊಠಡಿಗಳಲ್ಲಿ 138 ವಿದ್ಯಾರ್ಥಿಗಳು 8,9 ಮತ್ತು 10 ನೇ ತರಗತಿಗಳಿಗೆ ವ್ಯಾಸಂಗ ಮಾಡುತ್ತಿದ್ದು, ಮಳೆ ಬಂದರೆ ಸಾಕು ಶಿಥಿಲಗೊಂಡ ಗೋಡೆ, ಸ್ಲ್ಯಾಪಗಳಿಂದ ನೀರು ಸೋರಲಾರಂಭಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಈ ತೊಂದರೆ ತಪ್ಪಿಸಿ ವಿಧ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳ್ಳಲು ಆದಷ್ಟು ಬೇಗ ಶಿಥಿಲಗೊಂಡ ಅವಶೇಷಗಳನ್ನು ದುರುಸ್ಥಿಗೊಳಿಸಲು ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಎಸ್. ಡಿ. ಎಂ. ಸಿ ಸದಸ್ಯರು ಶಾಸಕ ಸಿದ್ದು ಸವದಿ ಅವರನ್ನು ಮತ್ತೊಮ್ಮೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಯಾಸೀನ್ ಪಾಂಡು, ಉಪಾಧ್ಯಕ್ಷ ಯುನೂಸ್ ಅತ್ತಾರ ಮತ್ತು ಅಬ್ದುಲ್ರಜಾಕ್ ಬಾಗವಾನ, ಜಮೀರ ಯಕ್ಸಂಬಿ, ಮುಸ್ತಫಾ ಸೌದಾಗರ, ಮುಬಾರಕ್ ಹುನ್ನೂರ, ಮೈಬೂಬ್ ಪೆಂಡಾರಿ, ಅಸ್ಲಂ ಜಮಾದಾರ, ತಾಹೀರ್ ಸೌದಾಗರ, ರಿಯಾಜ್ ಪೆಂಡಾರಿ, ಪೈಗಂಬರ್ ಪೆಂಡಾರಿ, ಯುಸೂಫ್ ಜಮಾದಾರ, ಇರ್ಷಾದ್ ಕಬಾಡಿ, ಸೈಫ್ ಬಾಗವಾನ, ರಸೂಲ್ ಸಾಂಗ್ಲಿಕರ ಹಾಗೂ ತಿಪ್ಪು ಬಂಡಿವಡ್ಡರ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 