ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿರುವ ನೊಂದ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ಒದಗಿಸಲು ಆಗ್ರಹ
Demand for more compensation for the aggrieved victims who are losing fertile land
ವಿಜಯಪುರ 17: ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿರುವ ನೊಂದ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ನ್ಯಾ. ಬ್ರಜೇಶಕುಮಾರ ನೇತೃತ್ವದ 2ನೇಯ ನ್ಯಾಯಾಧೀಕರಣದ ತೀರ್ಿನಂತೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದ ನೀರಿನ ಮಟ್ಟವನ್ನು 519.60 ಮಿ. ದಿಂದ 524.256 ಮೀ. ಗೆ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆಯಾದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವದರಲ್ಲಿ ಅನ್ಯಾಯ ಮಾಡಿದೆ. 524.256 ಕ್ಕೆ ನೀರು ನಿಲ್ಲಿಸುವದರಿಂದ ಮುಳುಗಡೆಯಾಗುವ ಜಮೀನುಗಳಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಗಳವರೆಗೆ ಒಣ ಬೇಸಾಯದ ಜಮೀನುಗಳಿಗೆ ಹಾಗೂ ನೀರಾವರಿ ಹೊಂದಿರುವ ಭೂಮಿಗಳಿಗೆ ಪ್ರತಿ ಎಕರೆಗೆ 40 ಲಕ್ಷ ರೂ.ಗಳಂತೆ ಬೆಲೆ ನಿಗದಿಮಾಡಲಾಗಿದೆ ಸರ್ಕಾರದ ಈ ನಿರ್ಧಾರದಿಂದ ಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ರೈತರಿಗೆ ಅನ್ಯಾಯಮಾಡಿದಂತಾಗಿದೆ.
ಹಳ್ಳಿಗಳಲ್ಲಿ ಪ್ರತಿ ಎಕರೆ ಒಣ ಬೇಸಾಯದ ಜಮೀನಿಗೆ ಮಾಮೂಲಿಯಾಗಿ 40 ರಿಂದ 50 ಲಕ್ಷ ರೂ. ಗಳವರೆಗೆ ಖರೀದಿಯಾಗುತ್ತದೆ. ನೀರಾವರಿ ಹೊಂದಿದ ಜಮೀನುಗಳಿಗೆ 60-70 ಲಕ್ಷ ರೂ. ಗಳವರೆಗೆ ವ್ಯವಹಾರ ನಡೆದಿವೆ ಆದರೆ ಸರ್ಕಾರ ಬೆಲೆ ನಿಗದಿಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಬೆಲೆ ಎಷ್ಟಿದೆ ಎಂದು ಅವಲೋಕನ ಮಾಡಬೇಕಿತ್ತು. ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯಲ್ಲಿ ಫಲವತ್ತಾದ ಭೂಮಿಗಳು ಇರುವದರಿಂದ ದರ ಹೆಚ್ಚಾದರೂ ರೈತರು ಭೂಮಿ ಖರೀದಿಸಬೇಕಾದರೆ ಹಿಂದೆ
ಮುಂದೆ ನೋಡುವದಿಲ್ಲ ಜಮೀನು ಸಿಕ್ಕರೆ ಸಾಕು ಎನ್ನುವ ಭಾವನೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಎಕರೆ ಭೂಮಿಗೆ ಕೋಟ್ಯಂತರ ಹಣ ಕೊಟ್ಟರೂ ಜಮೀನು ಸಿಗದಂತ ಪರಿಸ್ಥಿತಿ ಒದಗುತ್ತದೆ. ಇಂತಹದಲ್ಲಿ ಇರುವ ಅಲ್ಪಸ್ವಲ್ಪ ಭೂಮಿಯನ್ನು ಕಳೆದುಕೊಂಡ ರೈತರಿಗೆ ಸರ್ಕಾರ ಈಗ ನಿಗದಿ ಮಾಡಿರುವ ಬೆಲೆ ತೆಗೆದುಕೊಂಡು ಅವರು ಜೀವನ ಪರ್ಯಂತ ಬದುಕುವದಾದರೂ ಹೇಗೆ? ಎಂಬುದನ್ನು ಸರ್ಕಾರ ಯೋಚನೆ ಮಾಡಬೇಕಿತ್ತು. ಆದರೆ ಕೆಲವೇ ಕೆಲವು ರಾಜಕೀಯ ರೈತರ ಅಭಿಪ್ರಾಯ ಪಡೆದು ರೈತರಿಗೆ ಮಂಕು ಬೂದಿ ಎರಚಿ ಸರ್ಕಾರ ಈಗ ನಿಗದಿ ಮಾಡಿರುವ ಬೆಲೆಗೆ ಒಪ್ಪುವಂತೆ ಮೋಡಿ ಮಾಡಿದೆ. ಇದು ಹಿನ್ನೆಲೆ ರಾಜಕೀಯ ಹುನ್ನಾರ ಅಡಗಿದ್ದು ಉಳಿದ ರೈತರಿಗೆ ಸರ್ಕಾರ ವಂಚನೆ ಮಾಡಿದೆ ಯಾವುದೇ ಕಾರಣಕ್ಕೂ ಸರ್ಕಾರ ನಿಗದಿ ಮಾಡಿದ ಬೆಲೆಗೆ ನಿರಾಶ್ರಿತರಾಗುವ ರೈತರು ಎಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಹೆಚ್ಚಿನ ದರ ನಿಗದಿ ಕುರಿತು ಮತ್ತೊಮ್ಮೆ ಸಚಿವ ಸಂಪುಟ ಸಭೆ ಕರೆದು ನಿಜವಾದ ರೈತರನ್ನು ಸಭೆಗೆ ಆವ್ಹಾನಿಸಿ ದರ ಹೆಚ್ಚಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತದೆ. ಅದರಂತೆ ವಿಜಯಪುರ - ಬಾಗಲಕೋಟ ಮಧ್ಯಸ್ಥಳವಾದ ಆಲಮಟ್ಟಿಯಲ್ಲಿ ಜಮೀನು ಮುಳುಗಡೆ ಹೊಂದುವ ರೈತರ ಸಭೆಯನ್ನು ಶೀಘ್ರದಲ್ಲಿ ಕರೆದು ದರ ನಿಗಧಿ ಬಗ್ಗೆ ಮತ್ತೊಮ್ಮೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಹುಣಶ್ಯಾಳದ ಸಂಗನ ಬಸವ ಮಹಾಸ್ವಾಮಿಗಳು, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ರೈತ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವರಾಜ ಮಸರಕಲ್ಲ, ಗುರುರಾಜ ಪಡಶೆಟ್ಟಿ, ಲಾಲಸಾಬ ಹಳ್ಳೂರ, ಮಲಿಗೆಪ್ಪ ಸಾಸಲಗಿ, ಗುರಲಿಂಗಪ್ಪ ಪಡಸಲಗಿ, ರಾ್ಯವಪ್ಪಗೌಡ ಪುಲೇಶಿ, ಮಲ್ಲಪ್ಪ ಪಡಸಲಗಿ, ಗುರುಲಿಂಗಪ್ಪ ಪಡಸಲಗಿ, ಶ್ರೀಶೈಲ, ಬಸವರಾಜ ಹೊಸಳ್ಳಿ, ರಾಮನಗೌಡ ಹಾದಿಮನಿ, ಬಸನಗೌಡ ಬನ್ನಟ್ಟಿ, ಮೈಬೂಬ ಅವಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 