ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನಕ್ಕೆ ಆಗ್ರಹ
Demand for ministerial post for MLA J.N. Ganesh
ಕಂಪ್ಲಿ 01 : ಜನಪ್ರೀಯ ಶಾಸಕ ಜೆ.ಎನ್.ಗಣೇಶ ಇವರಿಗೆ ಸಚಿವ ಸ್ಥಾನ ಸಿಲೆಂದು ಹಾರೈಯಿಸಿ, ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂಯ ಹೊನ್ನಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಮತ್ತು ಅಭಿಮಾನಿ ದೊಡ್ಡ ರಾಮಾಲಿಸ್ವಾಮಿ ಇವರು ಕಂಪ್ಲಿ ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಬಿಂದಿಗೆಯೊಂದಿಗೆ ಪಾದಯಾತ್ರೆ ಆರಂಭಿಸಿದರು. ಕಂಪ್ಲಿಯಿಂದ ಕಾಲ್ನಡಿಗೆ ಮೂಲಕ ಪಾದಯಾತ್ರೆ ಪ್ರಾರಂಭಿಸಿ, ನಂ.10 ಮುದ್ದಾಪುರ ಮಾರ್ಗದೊಂದಿಗೆ ರಾಮಸಾಗರ, ಬುಕ್ಕಸಾಗರ, ವೆಂಕಟಾಪುರಕ್ಯಾಂಪ್, ಕಮಲಾಪುರದಿಂದ ಹಂಪಿಯ ವಿರುಪಾಕ್ಷ ದೇವಸ್ಥಾನವರೆಗೂ ಹಾಲಿನ ಬಿಂದಿಗೆ ಮೂಲಕ ವಿರುಪಾಕ್ಷಪ್ಪ ಸನ್ನಿದಾನಕ್ಕೆ ತೆರಳಿ, ನಂತರ ವಿರುಪಾಕ್ಷಪ್ಪ ದೇವರಿಗೆ ಹಾಲಿನ ಅಭಿಷೇಕದೊಂದಿಗೆ ಮಾನ್ಯ ಗಣೇಶಗೆ ಸಚಿವ ಸ್ಥಾನ ಸಿಗಲೆಂದು ಬೇಡಿಕೊಂಡರು.
ತದನಂತರ ಅಭಿಮಾನಿ ದೊದ್ದ ರಾಮಾಲಿಸ್ವಾಮಿ ಮಾತನಾಡಿ, ಈ ಮೊದಲ ಮಾನ್ಯ ಜೆ.ಎನ್.ಗಣೇಶ ಅವರು ಶಾಸಕರಾಗಬೇಕೆಂದು ಕಂಪ್ಲಿ ಸೋಮೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನವರೆಗೂ ಪಾದಯಾತ್ರೆ ನಡೆಸಲಾಗಿತ್ತು. ಇದರ ಹಿನ್ನಲೆ ಶಾಸಕ ಗಣೇಶ ಇವರು ಮೊದಲ ಬಾರಿಗೆ ಶಾಸಕರಾಗಿ ಹೊರ ಹೊಮ್ಮಿರುವುದು ಖುಷಿ ತಂದಿದೆ. ಕಳೆದ ಎರಡು ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿಯೊಂದಿಗೆ ಜನಪರ ಕೆಲಸ ಮಾಡಿದ್ದಾರೆ. ಆದ್ದರಿಂದ ಇನ್ನಷ್ಟು ಅಭಿವೃದ್ಧಿ ಜೊತೆಗೆ ಜಿಲ್ಲೆ ಮತ್ತು ರಾಜ್ಯದ ಜನರ ಸೇವೆ ಸಲ್ಲಿಸಲು, ಸಚಿವ ಸ್ಥಾನ ಲಭಿಸಬೇಕಾಗಿದೆ. ಆ ಹಿನ್ನಲೆಯಲ್ಲಿ ಶಾಸಕ ಗಣೇಶಗೆ ಸಚಿವ ಸ್ಥಾನ ನೀಡಬೇಕೆಂದು ಕಂಪ್ಲಿಯಿಂದ ಹಂಪಿವರೆಗೆ ಪಾದಯಾತ್ರೆ ಮಾಡಿರುವೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 