ಗ್ರಾ ಪಂ ಕಾರ್ಯದರ್ಶಿ ಮೇಲೆ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ

 ಗ್ರಾ ಪಂ ಕಾರ್ಯದರ್ಶಿ ಮೇಲೆ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ Demand for investigation and action against Gram Panchayat Secretary

ಲೋಕದರ್ಶನ ವರದಿ 

ಗ್ರಾ ಪಂ ಕಾರ್ಯದರ್ಶಿ ಮೇಲೆ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ 

ಸಂಬರಗಿ 13: ಅಥಣಿ ತಾಲೂಕಿನಲ್ಲಿ ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ವರ್ಗಾವಣೆ ಆದರೂ ಸಹ ಅವರಿಗೆ ಅಧಿಕಾರ ಹಸ್ತಾಂತರ ಮಾಡಿರುವದಿಲ್ಲ. ಸಂಬರಗಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಧರೆಪ್ಪಾ ತಗಲಿ ಇವರು ಪ್ರಭಾರಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಥಣಿ ತಾಲೂಕಾ ಪಂಚ ಗ್ಯಾರೆಂಟಿ ಅಧ್ಯಕ್ಷರಾದ ಸಿದ್ಧಾರ್ಥ ಶಿಂಗೆ ಆಗ್ರಹಿಸಿದ್ದಾರೆ.  

ಸಂಬರಗಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಹಿತೀನೀಡಿ ಮಾತನಾಡಿ ಕಳೆದ 10 ವರ್ಷಗಳಿಂದ ಈ ಗ್ರಾಮ ಪಂಚಾಯತಿಗೆ ಅಭಿವೃದ್ಧಿ ಅಧಿಕಾರಿ ಸಿಗುತ್ತಿಲ್ಲ. ಕಾರ್ಯದರ್ಶಿಗಳಿಗೆ ಅಧಿಕಾರ ನೀಡಿದ್ದಾರೆ. ಬೇರೆ ಅಭಿವೃದ್ಧಿ ಅಧಿಕಾರಿಗಳು ಬಂದರೂ ಸಹ ಅವರಿಗೆ ಅಧಿಕಾರ ಹಸ್ತಾಂತರ ಮಾಡದ ಕಾರಣ ಮರಳಿ ಅವರು ಬೇರೆ ಗ್ರಾಮ ಪಂಚಾಯತಿಗೆ ಹೋಗಬೇಕಾಗಿ ಬರುತ್ತಿದೆ. ಸರಕಾರ ತೆರಿಗೆ ಹಣ ವಸೂಲಾತಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ಸರಿಯಾಗಿ ಸಿಬ್ಬಂದಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆ ಗಮನಿಸುವುದಿಲ್ಲ. ಇಂತಹ ಪ್ರಭಾರಿ ಅಭಿವೃದ್ಧಿ ಅಧಿಕಾರಿಗೆ ಅವರ ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಬೇಕು. ಇಲಾಖೆಯಿಂದ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಕೆಲವು ಸಿಬ್ಬಂದಿಗಳು ಪಗಾರ ನೀಡುತ್ತಿಲ್ಲ. ಅವರ ಮೇಲೆ ಒತ್ತಡ ಹೇರಿದ ನಂತರ ಕೂಲಿಗಾರರಿಗೆ ಚೆಕ್ ಕೊಡುತ್ತಾನೆ ಆದರೆ ಖಾತೆಯಲ್ಲಿ ದುಡ್ಡು ಇರುವದಿಲ್ಲ. ಈ ತರಹ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾನೆ. ಸರಕಾರಿ ಟ್ಯಾಕ್ಸ್‌ ವಸೂಲಿ ಮಾಡಲು ನಿಯಂತ್ರಣ ಇಲ್ಲ.