ಓಇಕ ಜಾರಿಗೆ ಒತ್ತಾಯ: ಸಂಸದ ಕಾರಜೋಳ**

 ಓಇಕ ಜಾರಿಗೆ ಒತ್ತಾಯ: ಸಂಸದ ಕಾರಜೋಳ**  Demand for implementation of OEC: MP Karajola**

ಲೋಕದರ್ಶನ ವರದಿ 

  ಓಇಕ ಜಾರಿಗೆ ಒತ್ತಾಯ: ಸಂಸದ ಕಾರಜೋಳ**  

ಮುದ್ದೇಬಿಹಾಳ, ಸೆ.12:  ರಾಜ್ಯ ಸರ್ಕಾರ ಎಸ್‌ಇಪಿ (ಖಇಕ) ರದ್ದುಗೊಳಿಸಿ, ರಾಷ್ಟ್ರೀಯ ಶಿಕ್ಷಣ ನೀತಿ (ಓಇಕ)ಯನ್ನು ಒಪ್ಪಿಕೊಂಡು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.  

ನಗರದ ಬಿಜಿಎಮ್‌ಐಟಿ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಎಸ್‌.ಆರ್‌. ಕಾಂತಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ನೂತನವಾಗಿ ಆರಂಭಿಸಲಾದ ಸಮಗ್ರ ಶಿಕ್ಷಕರ ಶಿಕ್ಷಣ ಯೋಜನೆ (ಋಇಕ)ಯ ಬಿ.ಎ., ಬಿ.ಎಡ್‌., ಬಿ.ಎಸ್ಸಿ., ಬಿ.ಎಡ್‌. (ಮಿಡಲ್) ಹಾಗೂ ಬಿ.ಎಡ್‌. (ಸೆಕೆಂಡರಿ) ಶಿಕ್ಷಕರ ತರಬೇತಿ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಓಇಕ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶ ಹೊಂದಿದೆ. ಆದರೆ ರಾಜ್ಯ ಸರ್ಕಾರ ಓಇಕ ಬದಲಿಗೆ ಖಇಕ ಜಾರಿಗೊಳಿಸಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಆದ್ದರಿಂದ ಖಇಕ ರದ್ದುಪಡಿಸಿ ಓಇಕ ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.  

ಬಾಗಲಕೋಟೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಸಂಘದ ಅಡಿಯಲ್ಲಿ 190ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಲಾಗುತ್ತಿದೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಹಲವು ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.  

ಸಂಸದ ಗೋವಿಂದ ಕಾರಜೋಳ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಋಇಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಎನ್‌. ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಎಸ್‌. ಸೂಳಿಭಾವಿ, ಋಇಕ ಸಂಯೋಜಕ ಡಾ. ಎಂ.ಕೆ. ಗವಿಮಠ ಸೇರಿದಂತೆ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.