ಭೂ ಪರಿವರ್ತನೆ ಆದೇಶವನ್ನು ತಕ್ಷಣವೇ ರದ್ದುಪಡಿಸಲು ಆಗ್ರಹ
Demand for immediate cancellation of land conversion order
ವಿಜಯಪುರ, 17 : ಡೋಣಿ ನದಿ ಪ್ರವಾಹ ಪೀಡಿತ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ರಿ.ಸ.ನಂ. 613/*/1 ಸೇರಿದಂತೆ ಪ್ರವಾಹ ಪೀಡಿತ ಎಲ್ಲ ಜಮೀನುಗಳಿಗೆ ನೀಡಿರುವ ಭೂ ಪರಿವರ್ತನೆ ಆದೇಶವನ್ನು ತಕ್ಷಣವೇ ರದ್ದುಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆನಂದ ಕೆ. ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಡೋಣಿ ನದಿ ಪ್ರವಾಹ ಪೀಡಿತ ಸಾರವಾಡ ಗ್ರಾಮದ ರಿ.ಸ.ನಂ. 613/*/1 ಸೇರಿದಂತೆ ಪ್ರವಾಹ ಪೀಡಿತ ಎಲ್ಲ ಜಮೀನುಗಳಿಗೆ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗೆ ನೀಡಿದ ಅನುಮತಿಯನ್ನು ರದ್ದುಪಡಿಸುವಂತೆ ಮಾನ್ಯ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಇರುತ್ತದೆ.
ಸದರಿ ಜಿಲ್ಲಾಧಿಕಾರಿಗಳು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ವಿಜಯಪುರ ಇವರಿಗೆ ಸದರಿ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದು ಇರುತ್ತದೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರವರು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳ ಪರೀಶೀಲನೆ ಮಾಡಿ ದಿನಾಂಕ : 25-07-2025 (ಉಲ್ಲೇಖ 5 ) ರಂದು ಪ್ರವಾಹ ಪೀಡಿತ ಎಲ್ಲ ಜಮೀನುಗಳಿಗೆ ನೀಡಿದ ಭೂ ಪರಿವರ್ತನೆ ಅನುಮತಿಯನ್ನು ಪಡಿಸಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಇರುತ್ತದೆ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರವರು ಹಣದ ಆಸೆ, ರಾಜಕೀಯ ವಸೀಲಿ ಒತ್ತಡಕ್ಕೆ ಮಣಿದು ಮತ್ತೊಮ್ಮೆ ದಿನಾಂಕ : 31-07-2025 (ಉಲ್ಲೇಖ 6) ರಂದು ಸದರಿ ಪ್ರವಾಹ ಪೀಡಿತ ಪ್ರದೇಶದ ಜಮೀನುಗಳ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸುಳ್ಳು ವರದಿ ನೀಡಿ ಸಾರವಾಡ ಗ್ರಾಮದ ಪ್ರವಾಹ ಪೀಡಿತ ಪ್ರದೇಶದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ವಿಷಾದನೀಯ. ಈಗಾಗಲೇ ನಾವು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಕಯ ನಿರ್ದೇಶಕರು ಸುಳ್ಳು ವರದಿ ನೀಡಿರುವ ಬಗ್ಗೆ (ಉಲ್ಲೇಖ 5) ರಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ದಿನಾಂಕ : 05-08-2025 ರಂದು ಸಂಜೆ ಹಾಗೂ 06-08-2025 ರಂದು ಸುರಿದ ಮಳೆಗೆ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಪ್ರವಾಹ ಉಂಟಾಗಿ ಸದರಿ ರಿ.ಸ.ನಂ. 613/*/1 ಸೇರಿದಂತೆ ಇತರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಇರುತ್ತದೆ. ಸದರಿ ಪ್ರವಾಹದ ವಿಷಯ ರಾಜ್ಯದ ದೃಶ್ಯ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಸಾರವಾಗಿದ್ದು ಇರುತ್ತದೆ. ಸದರಿ ಪ್ರವಾಹ ಪೀಡಿತ ಪ್ರದೇಶಕ್ಕೆ ದಿನಾಂಕ : 06-08-2025 ರಂದು ಬಬಲೇಶ್ವರ ತಹಶೀಲ್ದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದ್ದು ಇರುತ್ತದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಪ್ರವಾಹ ಪೀಡಿತ ಪ್ರದೇಶದಲ್ಲಿ ನೀಡಿದ ಭೂ ಪರಿವರ್ತನೆ ಅನುಮತಿಯನ್ನು ರದ್ದುಪಡಿಸಬೇಕೆಂದು ವಿಜಯಪುರ ಜಮಖಂಡಿ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಮಾಡಿ ಭೂಪರಿವರ್ತನೆ ರದ್ದುಪಡಿಸುವಂತೆ ಒತ್ತಾಯಿಸಿದ್ದು ಇರುತ್ತದೆ. ಸದರಿ ಪ್ರವಾಹ ಪೀಡಿತ ವಿಷಯದ ಗಂಭೀರತೆಯ ಬಗ್ಗೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ ಸೇರಿದಂತೆ ಎಲ್ಲ ಅಧಿಕಾರಿಗಳ ಗಮನದಲ್ಲಿ ಇರುತ್ತದೆ.
ಸದರಿ ವಿಷಯವನ್ನು ಗಂಭೀರವಾಗಿದ್ದರೂ ಕೂಡ ರಿ.ಸ.ನಂ. 613/*/1 ಸೇರಿದಂತೆ ಎಲ್ಲ ಪ್ರವಾಹ ಪೀಡಿತ ಪ್ರದೇಶ ಜಮೀನುಗಳಿಗೆ ಉತಾರಿ ನಕ್ಷೆ ಹಕ್ಕು ಪತ್ರ ತಯಾರಿ ಮಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುತ್ತದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯವು ದಿನಾಂಕ: 04-02-2025 ಸದರಿ ಜಮೀನಿನಲ್ಲಿ ಯತಾಸ್ಥಿತಿಯನ್ನು ಕಾಪಾಡಬೇಕೆಂದು ಆದೇಶ ಮಾಡಿದ್ದು ಇರುತ್ತದೆ.
ಸಾರ್ವಜನಿಕರ ಜೀವ ಮತ್ತು ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕಾದ ಸರ್ಕಾರಿ ಜವಾಬ್ದಾರಿಯುತ ಹೊಣೆಗಾರಿಕೆ ಹುದ್ದೆಯಲ್ಲಿರುವ ತಮಗೆ ಪ್ರವಾಹ ಪೀಡಿತ ಬಗ್ಗೆ ಗಮನದಲ್ಲಿದ್ದರೂ ಕೂಡಾ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸುಳ್ಳು ವರದಿ ನೀಡಿ ಕಾನೂನು ಬಾಹೀರವಾಗಿ ವರ್ತಿಸುತ್ತಿರುವುದು ಖಂಡನೀಯವಾಗಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸಾರವಾಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾವು ಮಾಡುವ ಕಾನೂನು ಬಾಹೀರ ಚಟುವಟಿಕೆಯಿಂದ ಸಾರವಾಡ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಮುಂದೆ ಆಗುವ ಸಾರ್ವಜನಿಕರ ಜೀವ, ಜಾನುವಾರುಗಳು, ಆಸ್ತಿ, ಪಾಸ್ತಿ ಹಾನಿಗೆ ನೀವೆ ನೇರ ಹೊಣೆ ಹೊರಬೇಕಾಗುತ್ತದೆ. ಕೂಡಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉತಾರಿ, ನಕ್ಷೆ ಹಕ್ಕು ಪತ್ರ ತಯಾರು ಮಾಡುವ ಕಾರ್ಯವನ್ನು ಕೈ ಬಿಟ್ಟು ಗ್ರಾಮದ ಜನರ ಜೀವ ಆಸ್ತಿ, ಪಾಸ್ತಿ ರಕ್ಷಣೆ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಹುಣಶ್ಯಾಳದ ಸಂಗನ ಬಸವ ಮಹಾಸ್ವಾಮಿಗಳು, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ರೈತ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವರಾಜ ಮಸರಕಲ್ಲ, ಗುರುರಾಜ ಪಡಶೆಟ್ಟಿ, ಲಾಲಸಾಬ ಹಳ್ಳೂರ, ಮಲಿಗೆಪ್ಪ ಸಾಸಲಗಿ, ಗುರಲಿಂಗಪ್ಪ ಪಡಸಲಗಿ, ರಾ್ಯವಪ್ಪಗೌಡ ಪುಲೇಶಿ, ಮಲ್ಲಪ್ಪ ಪಡಸಲಗಿ, ಗುರುಲಿಂಗಪ್ಪ ಪಡಸಲಗಿ, ಶ್ರೀಶೈಲ, ಬಸವರಾಜ ಹೊಸಳ್ಳಿ, ರಾಮನಗೌಡ ಹಾದಿಮನಿ, ಬಸನಗೌಡ ಬನ್ನಟ್ಟಿ, ಮೈಬೂಬ ಅವಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 