ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಆಗ್ರಹ

 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಆಗ್ರಹ Demand for construction of primary health center building

ಲೋಕದರ್ಶನ ವರದಿ 


ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಆಗ್ರಹ 

ಸಂಬರಗಿ 09: ರಾಜ್ಯ ಸರಕಾರ ಗಡಿಭಾಗದ ಗ್ರಾಮಗಳ ಅಭಿವೃದ್ಧಿಗಾಗಿ ಹಾಗೂ ಎಲ್ಲಾ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ ಜನರ ಅತ್ಯವಶ್ಯಕವಾದ ಶಿವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಐದು ವರ್ಷದಿಂದ ಶಿಥಿಲಗೊಂಡು ಕುಸಿದು ಬಿದ್ದಿದೆ. ಆದರೆ ಇನ್ನೂವರೆಗೆ ಆರೋಗ್ಯ ಇಲಾಖೆ ಈ ಕಡೆ ಗಮನಹರಿಸಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಅದರಲ್ಲಿ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ.  

1997-98 ರಲ್ಲಿ ಜನತಾ ದಳ ಸರಕಾರ ಇದ್ದಾಗ, ಅಂದಿನ ಸಚಿವೆ ಆದ ಲೀಲಾದೇವಿ ಪ್ರಸಾದ ಇವರ ಸತತ ಪ್ರಯತ್ನದಿಂದ ಹಾಗೂ ಅಂದಿನ ಜಿಲ್ಲಾ ಪಂಚಾಯತ ಸದಸ್ಯರಾದ ರಾವಸಾಬ ಬೆವನೂರ ಇವರ ಸತತ ಪ್ರಯತ್ನದಿಂದ ದವಾಖಾನೆ ಪ್ರಾರಂಭವಾಯಿತು. ಆದರೆ ದವಾಖಾನೆಯಲ್ಲಿ ಸಿಬ್ಬಂದಿ ಕೊರತೆದಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ರೋಗಿಗಳಿಗೆ ತಾಲೂಕಾ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಹೋಗಬೇಕಾಗುತ್ತಿದೆ. ಸಧ್ಯದಲ್ಲಿ ಈ ಆರೋಗ್ಯ ಕೇಂದ್ರ ಎಲ್ಲಾ ಕೊಠಡಿಗಳು ಸಿಥಿಲಗೊಂಡಿವೆ. ಆರೋಗ್ಯ ಇಲಾಖೆ ಈಕಡೆ ಗಮನ ಹರಿಸುತ್ತಿಲ್ಲ. ರಾಜಕೀಯ ನಾಯಕರು ಹೇಳಿ ಜಾರುತ್ತಿದ್ದಾರೆ. ಈ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಭಾಗ್ಯ ಯಾವಾಗ ಬರುವುದು ಎಂದು ಈ ಭಾಗದ ಜನರು ನಿರಿಕ್ಷೆಯಲ್ಲಿದ್ದಾರೆ. 

ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಲ್ಲೊತ್ತಿ, ಶಿವನೂರ, ಜಂಬಗಿ, ತೆವರಟ್ಟಿ, ಅಗ್ರಾಣಿ-ಇಂಗಳಗಾಂವ, ಮಾಯನಟ್ಟಿ, ಅಬ್ಬಿಹಾಳ ಈ ಗ್ರಾಮಗಳು ಬರುತ್ತಿದ್ದು, ಈ ಗ್ರಾಮಗಳ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗಿತ್ತು. ಕಳೆದ 10 ವರ್ಷಗಳಿಂದ ಕಟ್ಟಡವು ಸಿಥಿಲಗೊಂಡಿದೆ. ಆದರೆ ಅದೇ ಕಟ್ಟದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಆರೋಗ್ಯ ಕೇಂದ್ರ ಸಿಥಿಲಗೊಂಡ ಕಾರಣ ಅಲ್ಲಿ ಸಿಬ್ಬಂದಿ ಹಾಗೂ ಅಲ್ಲಿನ ಎಲ್ಲ ಓಷಧ ವಸ್ತುಗಳನ್ನು ಸಮುದಾಯ ಭವನಕ್ಕೆ ವರ್ಗಾವಣೆ ಮಾಡಿ ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಈ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬೀದಿಗಿಳಿಯುವ ನಿರಿಕ್ಷೇಯಲ್ಲಿದ್ದಾರೆ.  

ಈ ಕುರಿತು ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರಾವಸಾಬ ಬೆವನೂರ ಇವರನ್ನು ಸಂಪರ್ಕಿಸಿದಾಗ, ಈ ಕಟ್ಟಡದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೆಲಸದ ಎಸ್ಟಿಮೇಟ್ ಆಗಿದೆ. ಆದರೆ ಇನ್ನೂ ಕಟ್ಟಡ ಪ್ರಾರಂಭ ಆಗಿಲ್ಲ. ಯಾವುದೇ ದುರಸ್ತಿ ಇಲ್ಲ. ಶೀರ್ಘದಲ್ಲಿ ಕಟ್ಟಡ ಪ್ರಾರಂಭ ಮಾಡದೇ ಹೋದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು. 

ಈ ಕುರಿತು ತಾಲೂಕಾ ವೈದ್ಯಾಧಿಕಾರಿ ಬಸಗೌಡ ಕಾಗೆ ಇವರನ್ನು ಸಂಪರ್ಕಿಸಿದಾಗ, ಈ ಆರೋಗ್ಯ ಕೇಂದ್ರಕ್ಕೆ ನಾನು ಭೇಟಿ ನೀಡಿ ಮೇಲಾಧಿಕಾರಿಗಳಿಗೆ ಹಾಗೂ ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.