ವರದಿ ಸಂತೋಷಕುಮಾರ ಕಾಮತ
ಮಾಂಜರಿ 23: ಸುಮಾರು 53 5 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಬೆಳಗಾವಿಯಲ್ಲಿ ಮಾತ್ರ ಲೋಕಾಯುಕ್ತ ಕಚೇರಿ ಮಾತ್ರವಿದ್ದು, ಚಿಕ್ಕೋಡಿ ವಿಭಾಗದ ಜನತೆಗೆ ಭ್ರಷ್ಟಾಚಾರ ವಿರುದ್ಧ ದೂರು ಕೊಡಲು ಚಿಕ್ಕೋಡಿ ನಗರದಲ್ಲೂ ಲೋಕಾಯುಕ್ತ ಕಚೇರಿ ನಿರ್ಮಾನಕ್ಕೆ ಚಿಕ್ಕೋಡಿ ವಿಭಾಗದ ಜನತೆ ಸರ್ಕಾರವನ್ನು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾಗಿದ್ದು, ಬೆಳಗಾವಿಯಲ್ಲಿ ಮಾತ್ರ ಲೋಕಾಯುಕ್ತ ಕಚೇರಿಯಿದ್ದು, ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಕುಡಚಿ, ರಾಯಬಾಗ, ಕಾಗವಾಡ ಮತ್ತು ಆಥಣಿ ತಾಲೂಕಿನ ಜನತೆ ಭಷ್ಟಾಚಾರ ವಿರುದ್ಧ ದೂರು ಕೊಡಲು ಚಿಕ್ಕೋಡಿ ನಗರದಲ್ಲಿ ಲೋಕಾಯುಕ್ತ ಕಚೇರಿ ನಿರ್ಮಿಸಿ ಜನ ಸಾಮಾನ್ಯ ಜನತೆಗೆ ಅನ್ಯಾಯವಾಗುತ್ತಿರುವುದನ್ನು ತಡೆಯಲು ಅನುಕೂಲ ಮಾಡಿಕೊಡುವಂತೆ ಚಿಕ್ಕೋಡಿ ವಿಭಾಗದ ಜನತೆಯ ಆಗ್ರಹವಾಗಿದೆ.
ಚಿಕ್ಕೋಡಿ ವಿಭಾಗದ ಆರು ಮತಕ್ಷೇತ್ರದ ಜನಸಂಖ್ಯೆಸುಮಾರು 22 ಲಕ್ಷ ಇದ್ದು, ಇಲ್ಲಿ ನೂರಾರು ಸರ್ಕಾರಿ ಕಚೇರಿಗಳಿವೆ. ಬೆಳಗಾವಿಯಲ್ಲಿ ಎಕ ಮಾತ್ರ ಲೋಕಾಯುಕ್ತ ಕಚೇರಿ ಇರುವುದರಿಂದ ಈ ಭಾಗದ ಜನತೆಗೆ ದೂರದ ಪ್ರವಾಸ ಮಾಡಿ ದೂರ ನೀಡಲು ಸಾಧ್ಯವಾಗದೆ. ಇರುವುದರಿಂದ ಕೈಚೆಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದೊದಗಿದೆ.
ಆಥಣಿ ತಾಲೂಕಿನ ಜನತೆ ಜಿಲ್ಲೆಯ ಕೇಂದ್ರ ಸ್ಥಳಕ್ಕೆ ತೆರಳಿ 185 ರಿಂದ 195 ಕಿಮೀ ಸಂಚರಿಸಿ ಬೆಳಗಾವಿ ದೂರು ನೀಡಲು ತೆರಳ ಬೇಕಾಗುತ್ತದೆ. ಚಿಕ್ಕೋಡಿ, ರಾಯಬಾಗ, ಆಥಣಿ, ಕಾಗವಾಡ, ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ಅನ್ಯಾಯಕ್ಕೆ ಮತ್ತು ಭ್ರಷ್ಟಾಚಾರಕ್ಕೆ ರೋಸಿ ಹೋಗಿದ್ದು, ಚಿಕ್ಕೋಡಿ ವಿಭಾಗದ ಜನತೆ ಅನುಭವಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕ್ಕೋಡಿ ನಗರದಲ್ಲಿ ಲೋಕಾಯುಕ್ತ ನಿರ್ಮಿಸಬೇಕೆಂದು
ಈ ವಿಭಾಗದ ಜನತೆ ಒತ್ತಾಯಿಸುತ್ತಿದ್ದಾರೆ. ಚಿಕ್ಕೋಡಿಶೈಕ್ಷಣಿಕಜಿಲ್ಲೆಯಾಗಿಕಾರ್ಯನಿರ್ವಹಿಸುತ್ತಿದೆ. ಆದರೆ ಚಿಕ್ಕೋಡಿ ಜಿಲ್ಲೆಗಾಗಿ ಕಳೆದ 3 ದಶಕಗಳಿಂದ ಹೋರಾಟ ನಡೆಯುತ್ತಲೆ ಇದೆ. ಆದರೆ ಕೆಲ
ಕುತಂತ್ರಿಗಳಿಂದ ನೆನಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹೊರತುಪಡಿಸಿ ಬಹುತೇಕ ಎಲ್ಲಾ ಕಚೇರಿಗಳು ಚಿಕ್ಕೋಡಿಯಲ್ಲಿವೆ. ಇದರಂತೆ ಚಿಕ್ಕೋಡಿಯಲ್ಲಿ ಲೋಕಾಯುಕ್ತ ಕಚೇರಿ ಏಕೆ ಮಾಡಬಾರದು ಎಂಬ ಪ್ರಶ್ನೆ ನೊಂದವರಿಂದ ಕೇಳಿಬರುತ್ತಿದೆ.
ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇವರಿಗೆ ಕಡಿವಾಣ ಹಾಕುವವರೇ ಯಾರಿಲ್ಲದಂತಾಗಿದೆ. ಮಧ್ಯವರ್ತಿಗಳ ಮತ್ತು ದಲ್ಲಾಳಿಗಳಸಂಖ್ಯೆಯು ಹೆಚ್ಚಾಗಿದೆ. ಈ ಕುರಿತು ಈ ಭಾಗದ ಜನ ಪ್ರತಿನಿಧಿಗಳೂ ಸಹ ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಸರ್ಕಾರಗಳು ಹೇಳಿಕೆ ನೀಡುತ್ತಲೆ ಬಂದಿವೆ. ಆದರೆ ಯಾವುದೇ ಇನ್ನುವರೆಗೆ ಪ್ರಯೋಜನವಾಗಿಲ್ಲ ಎಂಬ ಮಾತು ಪ್ರಜ್ಞಾವಂತರಿಂದ ಕೇಳಿಬರುತ್ತಿದೆ.
ಚಿಕ್ಕೋಡಿ ವಿಭಾಗದ ಜನತೆಗೆ ದೂರದ ಅಂತರದ ಬೆಳಗಾವಿಗೆ ತೆರಳಿ ದೂರು ನೀಡುವ ಪ್ರಸಂಗ ಬಂದೋದಗಿದ್ದು, ಚಿಕ್ಕೋಡಿ ವಿಭಾಗದ ಜನತೆ ಅನುಭವಿಸುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತು ಇಲಾಖೆಯ ಅಧಿಕಾರಿಗಳು ಚಿಕ್ಕೋಡಿ ನಗರದಲ್ಲಿ ಲೋಕಾಯುಕ್ತ ಕಚೇರಿ ಸ್ಥಾಪಿಸಬೇಕು ಎನ್ನುವುದು ಸಮಾಜ ಸೇವಕರಾದ ಕೆ.ಬಿ. ಹೋನ್ನಯ್ಯ, ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ರಾಜು ಖಿಚಡೆ, ಅಜರುದ್ದಿನ ಶೇಖಜಿ ಅವರ ಅಭಿಪ್ರಾಯವಾಗಿದೆ