ಮಹಾಮೇಳಕ್ಕೆ ಸಿದ್ಧತೆ ನಡೆಸಿರುವ ಝಾಪಾಗಳ ಬಂಧನಕ್ಕೆ ಒತ್ತಾಯ
Demand for arrest of Jhapas preparing for Maha Mela
ಬೆಳಗಾವಿ 05: ರಾಜ್ಯ ವಿಧಾನ ಮಂಡಳ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಮಹಾ ಮೇಳ ನಡೆಸಲು ಸಿದ್ಧತೆ ನಡೆಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರನ್ನು ಮುಂಜಾಗ್ರತ ಕ್ರಮವಾಗಿ ಬಂಧಿಸಬೇಕು ಮತ್ತು ಮಹಾ ಮೇಳ ನಡೆಸುವ ಪ್ರದೇಶದಲ್ಲಿ ನಿಷೇಧ ಆದೇಶ ಜಾರಿ ಮಾಡಬೇಕೆಂದು ಗಡಿನಾಡು ಕನ್ನಡಿಗರ ಸೇನೆಯು ಶುಕ್ರವಾರ ಜಿಲ್ಲಾಧಿಕಾರಿ ಮೊಹಮದ ರೋಷನ್ ಅವರನ್ನು ಆಗ್ರಹಿಸಿದೆ.
ಈ ಸಂಬಂಧ ಮನವಿಯೊಂದನ್ನು ಸಲ್ಲಿಸಿರುವ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೆನಟ್ಟಿ ಅವರು, ನವೆಂಬರ್ ಒಂದರಂದು ಕಪ್ಪು ದಿನಾಚರಣೆಯನ್ನು ಆಚರಿಸದಂತೆ ಜಿಲ್ಲಾಡಳಿತವು ಎಚ್ಚರಿಕೆ ನೀಡಿದರು ಸಹ ಎಮ್‌ಈಎಸ್ ನಾಯಕರು ಸಹಸ್ರಾರು ಜನರ ಮೆರವಣಿಗೆ ನಡೆಸಿತು. ಈಗಲೂ ಅದೇ ರೀತಿ ಆಗುವ ಸಾಧ್ಯತೆ ಇದ್ದು ಅವರನ್ನು ಮುಂಜಾಗ್ರತೆ ಕ್ರಮವಾಗಿ ಬಂಧಿಸಬೇಕು ಹಾಗೂ ಅವರು ಕಾರ್ಯಕ್ರಮ ನಡೆಸುವ ಪ್ರದೇಶದಲ್ಲಿ ನಿಷೇಧ ಹೆರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟ ಭೀಮಾಶಂಕರ್ ಗುಳೇದ ಅವರು ಸಹ ಹಾಜರಿದ್ದರು. ಗಡಿನಾಡು ಕನ್ನಡಿಗರ ಸೇನೆಯ ಪದಾಧಿಕಾರಿಗಳಾದ ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ಎಸ್.ಎಸ್.ಮೂಕನವರ, ಕಿರಣ ಚಿತಂಪಳೆ, ಮಯೂರ್ ಕಾಂಬಳೆ, ಮಂಜುನಾಥ ಪಾಸ್ತೇ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 