ತಂಬಾಕು ತನಿಖಾ ದಾಳಿ- ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ

ತಂಬಾಕು ತನಿಖಾ ದಾಳಿ- ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ Tobacco inspection raid – Directive to clear unauthorized shops

ಲೋಕದರ್ಶನ ವರದಿ 

        ಹಾವೇರಿ  04:  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ  ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಆಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ, ಸಹಾಯಕ ಅಭಿಯಂತರರ ಹಾಗೂ ತಾಲೂಕಾ ಅಬಕಾರಿ ನೀರಕ್ಷಕರ ಮತ್ತು ಆರೋಗ್ಯಾಧಿಕಾರಿಗಳ ಸಹಯೋಗದಲ್ಲಿ ಶುಕ್ರವಾರ ರಾಣೇಬೆನ್ನೂರ ನಗರದದಲ್ಲಿ  ವಿವಿಧೆಡೆ  ದಾಳಿ  ನಡೆಸಲಾಯಿತು. 

ನಗರದ ಓಂ ಪಬ್ಲಿಕ್ ಆಲೆ ಮತ್ತು ಓಂ ಸ್ವತಂತ್ರ ಪದವಿ ಪೂರ್ವ ಕಾಲೇಜ್ ವ್ಯಾಪ್ತಿಯಲ್ಲಿ ಎರಡು ಅನಧಿಕೃತ ತಂಬಾಕು ಮತ್ತು ಮದ್ಯಪಾನ ಅಂಗಡಿಗಳು ಕಂಡುಬಂದಿವೆ.  ಕೋಟ್ಪಾ-2003ರ ಕಾಯ್ದೆ ಕಲಂ-6ಬಿ ಅಡಿಯಲ್ಲಿ 12 ಪ್ರಕರಣಗಳಲ್ಲಿ ರೂ.1200 ದಂಡ ವಸೂಲಿ ಮಾಡಲಾಗಿದೆ ಹಾಗೂ ತಿಳುವಳಿಕೆ ನೋಟೀಸ್ ನೀಡಿ, ಅನಧಿಕೃತವಾಗಿ ತಂಬಾಕು ಮಾರಾಟ ಮಾಡದಂತೆ ಸೂಚನೆ ನೀಡಲಾಯಿತು. 

ಅಂಗಡಿಗಳಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟ ಮದ್ಯಪಾನ ಪ್ಯಾಕೇಟ್‌ಗಳನ್ನು ತಾಲೂಕಾ ಅಬಕಾರಿ ನೀರೀಕ್ಷಕರ ತಂಡು ಜಪ್ತಿಮಾಡಿಕೊಂಡು ಪ್ರಕರಣ ದಾಖಲಿಸಿತು. ಅನಧಿಕೃತ ಅಂಗಡಿಗಳನ್ನು ವಾರದೊಳಗೆ ತೆರವುಗೊಳಿಸುವಂತೆ ನಗರಸಭೆ ಸಹಾಯಕ ಅಭಿಯಂತರರು  ಸೂಚನೆ ನೀಡಿದರು. 

ತನಿಖಾ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಗದೀಶ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಕಾಶ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸಂತೋಷ ದಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಡಿಗ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ನಾಗರಾಜ ಕುಡಪಲಿ, ಸಹಾಯಕ ಅಭಿಯಂತರ ಮಹೇಶ್ವರ ಕೋಡಬಾಳ, ತಾಲೂಕು ಅಬಕಾರಿ ನೀರೀಕ್ಷಕ  ಮಲ್ಲಪ್ಪ ಹಕ್ಕಿ, ಪೊಲೀಸ್ ಇಲಾಖೆಯ ವಿಶ್ವನಾಥ ನಾಯಕ,  ತಂಬಾಕು ನಿಯಂತ್ರಣ ಕೋಶದ ದಾದಾಪೀರ ಹುಲಿ