ಧರ್ಮಸ್ಥಳ ದೌರ್ಜನ್ಯ ಪ್ರಕರಣಗಳ ತನಿಖೆ ಎಸ್‌ಐಟಿ ಕೈಗೆತ್ತಿಕೊಳ್ಳಲು ಆಗ್ರಹ

ಧರ್ಮಸ್ಥಳ ದೌರ್ಜನ್ಯ ಪ್ರಕರಣಗಳ ತನಿಖೆ ಎಸ್‌ಐಟಿ ಕೈಗೆತ್ತಿಕೊಳ್ಳಲು ಆಗ್ರಹ Demand for SIT to take over investigation into Dharmasthala atrocities cases

ಸಿಂದಗಿ 11: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ, ನವೆಂಬರ್ 1 ರಿಂದ ರಾಜ್ಯದಾದ್ಯಂತ; ಕೊಂದವರು ಯಾರು? ಆಂದೋಲನ ನಡೆಸಿದ ಸಹಿ ಸಂಗ್ರಹ ಅಭಿಯಾನದಲ್ಲಿ ಮೊದಲ 10 ದಿನಗಳಲ್ಲಿ ಸಂಗ್ರಹವಾದ ಸಹಿಗಳು ತಹಸಿಲ್ದಾರ್ ಕರೆಪ್ಪ ಬೆಳ್ಳಿ ರವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. 

      ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಆತ್ಯಾಚಾರ ಎಸಗಿ, ಹತ್ಯೆ ಮಾಡಿದವರು ಯಾರು ಎಂಬ ಸತ್ಯವನ್ನು ತಿಳಿದು, ತಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸುವುದು ಹಾಗೂ ಆ ನಿಟ್ಟಿನಲ್ಲಿ ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಹೋರಾಟ ನಡೆಸಿರುವ ಸಂತ್ರಸ್ಥರ ಕುಟುಂಬಗಳೊಂದಿಗೆ ನಿಲ್ಲುವುದು ನಮ್ಮ ಉದ್ದೇಶ. ಸುದೀರ್ಘ ಕಾಲ ನಿರಂತರವಾಗಿ ಆರೋಪ ಕೇಳುತ್ತಲೇ ಬಂದಿರುವ ಅನುಮಾನಾಸ್ಪದವಾದ ಅನೇಕ ಅಸಹಜ ಸಾವುಗಳ ಪ್ರಕರಣಗಳು, ಅಪಹರಣ, ನಾಪತ್ತೆ, ಆತ್ಯಾಚಾರ ಮತ್ತು ಕೊಲೆಗಳಂತಹ ದೌಜರ್ನ್ಯಗಳ ಸಂದರ್ಭದಲ್ಲಿ ಕಟ್ಟುನಿಟ್ಟಾದ ತನಿಖೆ ಮತ್ತು ನ್ಯಾಯದಾನದ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಲಾಗದೆ ಹೋದ ವ್ಯವಸ್ಥೆಯೊಳಗಿನ ಲೋಪದೋಷಗಳನ್ನು ಪ್ರಶ್ನಿಸುವುದು ಮತ್ತು ಈಗಲಾದರೂ ಆ ಲೋಪದೋಷಗಳು ತಿದ್ದುಪಡಿಯಾಗಬೇಕೆನ್ನುವ ವಿಶೇಷ ತನಿಖಾ ತಂಡ’ (ಎಸ್‌ಐಟಿ)ಯು, ಕೇವಲ ಸಾಮೂಹಿಕ ಹೆಣ ಹೂಳುವಿಕೆಯ ಪ್ರಕರಣಕ್ಕೆ ಸೀಮಿತವಾಗದೇ, ಇಂತಹ ಎಲ್ಲ ಪ್ರಕರಣಗಳ ತನಿಖೆಯನ್ನೂ ಸಮಗ್ರವಾಗಿ ನಡೆಸಬೇಕೆಂದು ಆಗ್ರಹಿಸಿದರು. 

ಈ ನಿಟ್ಟಿನಲ್ಲಿ ಆಗಸ್ಟ್‌ ತಿಂಗಳಿನಿಂದ ರಾಜ್ಯದಾದ್ಯಂತ ಹಲವೆಡೆಗಳಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರ ನಡುವೆ ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆಗಳು, ಪತ್ರಿಕಾ ಗೋಷ್ಟಿಗಳು, ಅಧಿಕಾರದ ಸ್ಥಾನದಲ್ಲಿರುವವರ ಭೇಟಿ ಮತ್ತು ಮನವರಿಕೆಯ ಪ್ರಯತ್ನ ಸೆ.16 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ‘ನೊಂದವರೊಂದಿಗೆ ನಾವೂ ನೀವೂ’ ಕಾರ್ಯಕ್ರಮದಂತಹ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇವೆ. 

ಅದೇ ರೀತಿ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಹಿ ಸಂಗ್ರಹ ಹಾಗೂ ಪೋಸ್ಟ್‌ ಕಾರ್ಡ್‌ ಅಭಿಯಾನವನ್ನು ಆರಂಭಿಸಿ ಮಹಿಳೆಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ 348 ಸಹಿಗಳನ್ನು ಸಂಗ್ರಹಿಸಿದ್ದೇವೆ. ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರು ಮತ್ತು ನಾಗರೀಕರ ನಾಪತ್ತೆ, ಅಪಹರಣ, ಕೊಲೆಗಳಂತಹ ಘಟನೆಗಳ ಸಮಗ್ರ ತನಿಖೆಯನ್ನೂ ಕೂಡ  ಎಸ್‌ಐಟಿ ಕೈಗೊಳ್ಳಬೇಕು ಎಂಬುದರಲ್ಲಿ ಯಾವುದೇ ಗೊಂದಲವಿಲ್ಲ,  ಸಹಿ ಸಂಗ್ರಹ ಅಭಿಯಾನವು ಇನ್ನೂ ಸಾಕಷ್ಟು ಸಮಯ ಮುಂದುವರೆಯಲ್ಲಿದ್ದು ಎಸ್‌ಐಟಿ ತನ್ನ ರಚನೆಯ ಸಂದರ್ಭದ ಮೂಲ ಆದೇಶದ ಆಶಯದಂತೆಯೇ ಸಮಗ್ರವಾದ ತನಿಖೆಯನ್ನು ನಡೆಸಲಿದೆ ಎಂಬುದು ಸ್ವಷ್ಟಗೊಳ್ಳುವ ತನಕವೂ ನಮ್ಮ ಆಂದೋಲನ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.