ಗ್ಯಾರೆಂಟಿ ಯೋಜನೆ ಎಲ್ಲರಿಗೂ ತಲುಪಿಸಿ: ಶಾಸಕ ನಾಡಗೌಡ

Deliver guarantee scheme to all: MLA Nad Gowda

ತಾಳಿಕೋಟಿ 23: ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಲಾಭ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಂಥಾಗಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಮೇಲ್ವಿಚಾರಣ ಸಮಿತಿಯ ಎಲ್ಲ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಸಮಿತಿಗೆ ಸದಸ್ಯರು ಸೇವಾ ಮನೋಭಾವ ದೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್‌.ನಾಡಗೌಡ (ಅಪ್ಪಾಜಿ)ಹೇಳಿದರು. 

ಇಲ್ಲಿಯ ತಾಲೂಕ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಮೇಲ್ವಿಚಾರಣೆ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಗ್ಯಾರೆಂಟಿ ಯೋಜನೆಗಳಿಂದ ಸಮಾಜದಲ್ಲಿರುವ ಬಡವರಿಗೆ ಹೆಚ್ಚು ಅನುಕೂಲವಾಗಿದೆ ಇದನ್ನು ಸಹಿಸದ ವಿರೊಧ ಪಕ್ಷದವರು ಇದರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಇದು ಸರಿಯಲ್ಲ, ಗ್ಯಾರೆಂಟಿಗಳಿಂದಾಗಿ ಯಾವ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಇದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ಒಂದು ಯೋಜನೆ ನಮ್ಮ ಸರ್ಕಾರ ಬಂದು ಎರಡು ವರ್ಷಗಳು ಆಗುತ್ತಿವೆ ಯೋಜನೆಗಳು ಸರಾಗವಾಗಿ ನಡೆದು ಬರುತ್ತಿವೆ ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸುವ ಕೆಟ್ಟ ಚಾಳಿಯನ್ನು ಬಿಡಲಿ ಎಂದ ಅವರು ಈ ಯೋಜನೆಯ ಕೆಲವು ಫಲಾನುಭವಿಗಳಿಗೆ ತೊಂದರೆ ಯಾಗುತ್ತಿದೆ ಇದನ್ನು ಸರಿಪಡಿಸುವ ಕಾರ್ಯ ಈ ಸಮಿತಿಯವರು ಮಾಡಬೇಕು ಎಂದರು.  

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ ಮುದ್ದೇಬಿಹಾಳ ತಾಳಿಕೋಟಿ ತಾಲೂಕಿನಲ್ಲಿ ಯೋಜನೆಯ ಲಾಭ ಪಡೆದವರ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಸಮಿತಿಗೆ ಜಿಲ್ಲಾ ಘಟಕದ ಅಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಘಟಕದ ಅಧ್ಯಕ್ಷರನ್ನು ಶಾಸಕರು ಸನ್ಮಾನಿಸಿದರು.  

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್‌. ಪಾಟೀಲ (ಯಾಳಗಿ),ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ್ ಹಜೇರಿ,ತಾಪಂ ಇಒ ನಿಂಗಪ್ಪ ಮಸಳಿ,ಸಮಿತಿ ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ,ಪ್ರಭುಗೌಡ ಮದರಕಲ್, ಅಕ್ಕಮಹಾದೇವಿ ಕಟ್ಟಿಮನಿ, ಪರುಶುರಾಮ ತಂಗಡಗಿ, ಸಂಗನಗೌಡ ಅಸ್ಕಿ,ಕಾಸಿಂ ಪಟೇಲ ಪಾಟೀಲ, ಮೋದಿನಸಾ ನಗಾರ್ಚಿ, ಆಸಿಫ್ ಕೆಂಭಾವಿ,ಗೋಪಾಲ ಕಟ್ಟಿಮನಿ,ತಾಲೂಕಿನ ಪಿಡಿಒ, ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿಗಳು ಮತ್ತೀತರರು ಇದ್ದರು.