ನವದೆಹಲಿ, ಮಾ 27,ಲಾಕ್ ಡೌನ್ ಹಿನ್ನೆಲೆಯಲ್ಲಿ ಸೂರುರಹಿತರಿಗೆ ಆಶ್ರಯ ಕಲ್ಪಿಸಲು ಕ್ರಮ ಕೈಗೊಳ್ಳಲು ಶನಿವಾರದಿಂದ ನಾಲ್ಕು ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ. ದೆಹಲಿ 325 ಶಾಲೆಗಳ ಮೂಲಕ ಶುಕ್ರವಾರದಿಂದ 2 ಲಕ್ಷ ಹಾಗೂ ಶನಿವಾರದಿಂದ ಮತ್ತು 2 ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡಲಾಗುವುದು. ಇಲ್ಲಿಯವರೆಗೆ 224 ಆಶ್ರಯ ತಾಣಗಳ ಮೂಲಕ 20 ಸಾವಿರ ಜನರಿಗೆ ಆಹಾರ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.