ನವದೆಹಲಿ, ಜ 17 : ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್ ಪಕ್ಷ ಹೊಸದಾಗಿ ಪ್ರಚಾರ ಗೀತೆ ಬಿಡುಗಡೆಗೊಳಿಸಿದೆ.
"ಫಿರ್ ಸೆ ಕಾಂಗ್ರೆಸ್ ವಾಲಿ ದೆಹಲಿ " ಎಂಬ ಸಾಲುಗಳನ್ನೊಳಗೊಂಡ ಈ ಪ್ರಚಾರ ಗೀತೆಯನ್ನು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಷ್ ಚೋಪ್ರಾ, ದೆಹಲಿ ಘಟಕದ ಮುಖ್ಯ ವಕ್ತಾರ ಮುಖೇಶ್ ಶರ್ಮಾ, ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷ ರೋಹನ್ ಗುಪ್ತಾ ಮತ್ತು ದೆಹಲಿ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿಜಾ ಆಜಾದ್ ಬಿಡುಗಡೆಗೊಳಿಸಿದರು.
ಈ ಗೀತೆ ದೆಹಲಿಯ ಜನತೆಗೆ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಪಕ್ಷದ 15 ವರ್ಷಗಳ ಕೆಲಸವನ್ನು ನೆನಪಿಸಲಿದೆ.
ಫೆ. 8ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿಲ್ಲ.
2015ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಿರಲಿಲ್ಲ.