ನವದೆಹಲಿ, ಮೇ 12,ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದು ಮಾತ್ರವಲ್ಲದೆ ಈ ಪ್ರದೇಶವು ಒಂದು ತಿಂಗಳಲ್ಲಿ ಮೂರು ಭೂಕಂಪಗಳನ್ನು ಕಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಭೂಕಂಪದಿಂದ ಆಸ್ತಿಪಾಸ್ತಿ ನಷ್ಟವಾಗಿಲ್ಲ ಹಾಗೂ ಯಾರಿಗೂ ಗಾಯ ಅಥವಾ ಹಾನಿಯಾಗಿಲ್ಲ. ಹೀಗಾಗಿ ಈ 'ಅಪರೂಪದ ಘಟನೆ'ಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ, ದೆಹಲಿಯ ಎನ್ಸಿಆರ್ನಲ್ಲಿ ಭಾನುವಾರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿತ್ತು. ಇದರ ಕೇಂದ್ರಬಿಂದು ದೆಹಲಿ-ಉತ್ತರ ಪ್ರದೇಶ ಗಡಿಯಾಗಿತ್ತು.ಇದಕ್ಕೂ ಮೊದಲು ದೆಹಲಿಯು ಏಪ್ರಿಲ್ 12 ಮತ್ತು ಏಪ್ರಿಲ್ 13 ರಂದು ಎರಡು ಕಡಿಮೆ ತೀವ್ರತೆಯ ಭೂಕಂಪಗಳನ್ನು ದಾಖಲಿಸಿದೆ. ಏಪ್ರಿಲ್ 12 ರಂದು ಭೂಕಂಪನವು ರಿಕ್ಟರ್ ಪ್ರಮಾಣದಲ್ಲಿ 3.5 ರಷ್ಟಿತ್ತು ಮತ್ತು ಇದರ ಕೇಂದ್ರ ಬಿಂದು ಸೋನಿಯಾ ಬಿಹಾರದಲ್ಲಿತ್ತು.