ದ್ರಾಕ್ಷಿ ಬೆಳೆಗಾರರಿಗೆ ವಿಳಂಬವಾಗುತ್ತಿದ್ದ ವಿಮಾ ಹಣ ಪಾವತಿ ಮಾಡಲು ಆರಂಭ
Delayed insurance payments to grape growers begin
ವಿಜಯಪುರ 29: ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ವಿಳಂಬವಾಗುತ್ತಿದ್ದ ವಿಮಾ ಹಣವನ್ನು ಪಾವತಿ ಮಾಡಲು ಆರಂಭಿಸಿರುವ ಕ್ರಮವನ್ನು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ಕೆ.ಎಚ್. ಮುಂಬಾರೆಡ್ಡಿ ಸೇರಿದಂತೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಸರ್ಕಾರಕ್ಕೆ ಧನ್ಯವಾದ ಅರ್ಿಸಿರುವ ಸಂಘಟನೆಯ ಪದಾಧಿಕಾರಿಗಳು, ಅನೇಕ ಸಮಸ್ಯೆಗಳನ್ನು ಎದುರಿಸಿದ ದ್ರಾಕ್ಷಿ ಬೆಳೆಗಾರರಿಗೆ ವಿಮಾ ಹಣ ಸಕಾಲಕ್ಕೆ ಬಾರದೇ ದೊಡ್ಡ ತೊಂದರೆ ಸೃಜಿಸಿತ್ತು. ಆದರೆ ಈಗ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದ್ದು ವಿಮಾ ಹಣ ಪಾವತಿ ಆರಂಭವಾಗಿರುವುದು ಎಲ್ಲ ದ್ರಾಕ್ಷಿ ಬೆಳೆಗಾರರಿಗೂ ಸಂತೋಷ ತರಿಸಿದೆ,
ಈ ನಮ್ಮ ಹೋರಾಟ ಹಾಗೂ ನ್ಯಾಯಯುತವಾದ ಕೂಗಿಗೆ ಸ್ಪಂದಿಸಿದ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲರಿಗೆ, ಸಚಿವ ಶಿವಾನಂದ ಪಾಟೀಲರಿಗೆ ಹಾಗೂ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ತೋಟಗಾರಿಕಾ ಇಲಾಖೆಯಯ ಅಧಿಕಾರಿಗಳಿಗೆ ದ್ರಾಕ್ಷಿ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಭೀಮಸೇನ ಕೋಕರೆ, ಎಚ್.ಆರ್. ಉಟಗಿ, ಎಸ್.ಎಸ್. ಛಾಯಾಗೋಳ, ವಾಮನ ಮಹಿಷಿ, ಎಂ.ಆರ್. ತುಂಗಳ, ಶ್ರೀಶೈಲಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಸುರೇಶಗೌಡ ಬಿರಾದಾರ, ಮಹಾವೀರ ಕುಸನಾಳ, ಅಶೋಕ ಬಾಲಗಾವಿ, ವಿಶ್ವನಾಥ ಚನಾಳ ಮೊದಲಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 