ಲೋಕದರ್ಶನ ವರದಿ
ಕೊಪ್ಪಳ 07: ಕೋರ್ಟ್ಕ್ ಬರುವ ಕಕ್ಷಿದಾರ ಸಾರ್ವಜನಿಕರ ವಿವಿಧ ಪ್ರಕರಣಗಳು ವಿಲೇವಾರಿವಾಗುವುದರಲ್ಲಿ ವಿಳಂಬವಾಗುತ್ತಿದೆ ಎಂಬ ನೆಪ ಹೇಳಿ ಕೆಲವರು ಕೊಪ್ಪಳ ಜಿಲ್ಲೆ ಧಾರವಾಡ ಹೈಕೋಟರ್್ ಪೀಠದಿಂದ ಕಲಬುಗರ್ಿ ಪೀಠಕ್ಕೆ ಸ್ಥಳಾಂತರಿಸಬೇಕೆಂದು ಅನಾವಶ್ಯಕ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹಿರಿಯ ನ್ಯಾಯವಾದಿ ಹಾಗೂ ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಆಸೀಫ್ ಅಲಿ ಹೇಳಿದರು.
ಅವರು ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡದ ಅವರು ಕೊಪ್ಪಳ ಜಿಲ್ಲೆ ಧಾರವಾಡ ಹೈಕೋಟರ್್ ಪೀಠದಲ್ಲಿಯೇ ಇದೆ ಮತ್ತು ಇಲ್ಲಿಯೇ ಮುಂದುವರೆಲಿ ಎಂದು ಅವರು ಸಾರ್ವಜನಿಕ ಹಿತಾಸಕ್ತಿಯ ಅನುಗುಣವಾಗಿ ಕೊಪ್ಪಳ ಮತ್ತು ಬಳ್ಳಾರಿ ಎರಡು ಜಿಲ್ಲೆಗಳು ಮೊದಲಿನಿಂದಲು ಧಾರವಾಡ ಪೀಠದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಹೈಕೋಟರ್್ದಲ್ಲಿ ನ್ಯಾಯದೀಶರ ನೇಮಕವಾಗಬೇಕಾಗಿದೆ. ಶೇ. 50 ಹುದ್ದೆ ಖಾಲಿ ಇದೆ ಸಕರ್ಾರ ಕೂಡಲೇ ಇದನ್ನು ಸಕರ್ಾರ ತಕ್ಷಣ ಖಾಲಿ ಇರುವ ಹುದ್ದೆಗಳನ್ನು ಭತರ್ಿ ಮಾಡಬೇಕು ಎಂದರು.
ಮುಂದುವರೆದು ಮಾತನಾಡಿ ಅವರು ಖಾಲಿ ಇರುವ ಸಮಸ್ಯ ಇಡಿ ರಾಜ್ಯದಲ್ಲಿ ಇದೆ. ಈಗಾಗಲೇ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭತರ್ಿಯಾದರೆ ಕಕ್ಷಿದಾರ ಸಾರ್ವಜನಿಕರ ಯಾವುದೇ ಪ್ರಕರಣದಲ್ಲಿ ವಿಳಂಬವಾಗುದಿಲ್ಲ. ಆದರೆ ಇದನ್ನ ನೆಪವೊಡ್ಡಿ ಅನಾವಶ್ಯಕ ನೆಪಗಳನ್ನು ಹೇಳಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಸಾರ್ವಜನಿಕರಲ್ಲಿ ಇರುವ ಗೊಂದಲ ನಿವಾರಣೆಗೆ ಕೊಪ್ಪಳ ಜಿಲ್ಲಾ ವಕೀಲರ ಸಂಘ ಈ ಸ್ಪಷ್ಟನೆ ನೀಡುತ್ತದೆ. ಹಾಗೂ ಕೊಪ್ಪಳ ಧಾರವಾಡ ಹೈಕೋಟರ್್ನಲ್ಲಿಯೇ ಮುಂದುವರೆಯಲಿ ಎಂದು ಹಿರಿಯ ನ್ಯಾಯವಾದಿ ಹಾಗೂ ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಆಸೀಫ್ ಅಲಿ ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ವಕೀಲರ ಸಂಘದ ಅಧ್ಯಕ್ಷ ಹನುಮೇಶ್ ಮುರಡಿ, ಪ್ರಧಾನ ಕಾರ್ಯದಶರ್ಿ ಬಸವರಾಜ್ ಸಜ್ಜನ್ ಹಾಗೂ ಹಿರಿಯ ನ್ಯಾಯವಾದಿಗಳಾದ ರಾಘವೇಂದ್ರ ಪಾನಘಂಟಿ, ಪಿ ಆರ್. ಹೊಸಳ್ಳಿ ಮತ್ತು ಬಿ.ಕೆ.ಹಿರೇಮಠ್ ಉಪಸ್ಥಿತರಿದ್ದರು.