ಲೇಹ್, ಆ 29 ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಲಡಾಖ್ಗೆ ಭೇಟಿ ನೀಡಿ, ಚೀನಾದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಹಾಕಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ 370ನೇ ವಿಧಿ ಮತ್ತು 35 ಎ ಪರಿಚ್ಛೇದ ರದ್ದುಗೊಳಿಸಿದ ನಂತರ ಮತ್ತು ರಕ್ಷಣಾ ಸಚಿವರ ಮೊದಲ ಭೇಟಿ ಇದಾಗಿದೆ ಆಗಸ್ಟ್ 5 ರಂದು ಜಮ್ಮು ಕಾಶ್ಮೀರವನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ.ಹೆಸರಿನ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ.
ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ "ಲಡಾಖ್ ನಲ್ಲಿನ ಒಟ್ಟಾರೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು, ವಿಶೇಷವಾಗಿ ಚೀನಾದೊಂದಿಗಿನ ಎಲ್ಎಸಿ ಉದ್ದಕ್ಕೂ ನೀಡಿರುವ ಭದ್ರತೆಯ ಪರಿಶೀಲನೆ ನಡೆಸಿದರು" ಎಂದು ಅಧಿಕೃತ ಮೂಲಗಳು ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ.
ರಕ್ಷಣಾ ಸಚಿವರು ಲಡಾಖ್ ನಲ್ಲಿ ಕಿಸಾನ್, ಜವಾನ್, ವಿಜ್ಞಾನ ಮೇಳ ಉದ್ಘಾಟಿಸಲಿದ್ದಾರೆ ಎಂದೂ ಸಹ ಮೂಲಗಳು ಮಾಹಿತಿ ನೀಡಿವೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ವಿಶ್ವದ ಅತ್ಯುನ್ನತ ಯುದ್ಧಭೂಮಿಯಾದ ಸಿಯಾಚಿನ್ ಹಿಮನದಿಯೊಂದಿಗಿನ ಎಲ್ಎಸಿ ಮತ್ತು ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಒಟ್ಟಾರೆ ಭದ್ರತಾ ಪರಿಸ್ಥಿತಿಗಳ ಬಗ್ಗೆ ರಾಜನಾಥ್ ಸಿಂಗ್ ಅವರಿಗೆ ವಿವರವಾದ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಏತನ್ಮಧ್ಯೆ, ಕಾಶ್ಮೀರ ಎಂದಿಗೂ ನೆರೆಯ ದೇಶದ ಭಾಗವಲ್ಲ ಎಂದು ರಕ್ಷಣಾ ಸಚಿವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. "ಪಾಕಿಸ್ತಾನವನ್ನು ಭಾರತದಿಂದ ರಚಿಸಲಾಗಿದೆ ಮತ್ತು ಕಾಶ್ಮೀರ ಎಂದಿಗೂ ಅದರ ಭಾಗವಾಗಿರಲಿಲ್ಲ. ಪಾಕಿಸ್ತಾನವು ಕಾಶ್ಮೀರದ ಮೇಲಿನ ತನ್ನ ಹಕ್ಕನ್ನು ತ್ಯಜಿಸಬೇಕು ಮತ್ತು ತನ್ನದೇ ದೇಶದ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಅವರು ಹೇಳಿದರು.
ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ ಆದಾಗ್ಯೂ, ಕಣಿವೆಯಲ್ಲಿ ಉಗ್ರಗಾಮಿತ್ವವನ್ನು ಉತ್ತೇಜಿಸುವ ಪಾಕಿಸ್ತಾನದ ಸಮಸ್ಯೆ ಏನು ಅರ್ಥವಾಗುತ್ತಿಲ್ಲ. ಪಾಕ್ ಆಕ್ರಮಿತ ಕಾಶ್ಮೀರ, ಬಾಲ್ಟಿಸ್ತಾನ್ ಮತ್ತು ಗಿಲ್ಗಟ್ ನಮ್ಮ ದೇಶದ ಭಾಗವಾಗಿತ್ತು ಎಂದು ಅವರು ಹೇಳಿದರು
"ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದು ನಮ್ಮ ಮುಖ್ಯ ಕಾರ್ಯಸೂಚಿಯಾಗಿತ್ತು ಈ ವಿಷಯದಲ್ಲಿ ಎಂದು ನಾವು ಜನರನ್ನು ಮೋಸಗೊಳಿಸಿಲ್ಲ" ಎಂದ ಅವರು ಬಿಜೆಪಿ ಯಾವಾಗಲೂ 'ಒಬ್ಬ ಪ್ರಧಾನಿ, ಒಂದು ಧ್ವಜ ಮತ್ತು ಒಂದು ಸಂವಿಧಾನ' (ಏಕ್ ಪ್ರಧಾನ್, ಏಕ್ ನಿಶಾನ್ ಮತ್ತು ಏಕ್ ಸಂವಿಧಾನ್)ಕ್ಕೆ ಬದ್ಧ ಎಂದರು.
ಭಾರತವು ಪಾಕಿಸ್ತಾನದೊಂದಿಗೆ ಮಾತನಾಡಲು ಬಯಸುತ್ತದೆ, ಆದರೆ ನಮ್ಮ ದೇಶವನ್ನು ಅಸ್ಥಿರಗೊಳಿಸಲು ಮತ್ತು ಉಗ್ರರನ್ನು ಇಲ್ಲಿಗೆ ಕಳುಹಿಸಲು ಪ್ರಯತ್ನಿಸಿದಾಗ ಸಂವಾದ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇತ್ತೀಚೆಗೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಸಂಪೂರ್ಣ ಘಟಕವು ಪಕ್ಷಕ್ಕೆ ರಾಜೀನಾಮೆ ನೀಡಿ ಕಾರ್ಗಿಲ್ನಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿಕೊಂಡರು, ಅಲ್ಲಿನ ಜನರು ರಾಜ್ಯ ವಿಭಜನೆ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕ್ರಮವನ್ನು ವಿರೋಧಿಸುತ್ತಿದ್ದಾರೆ.
ಆದರೆ, ಲೇಹ್ ಜಿಲ್ಲೆಯಲ್ಲಿ ಜನರು ಲಡಾಖ್ಗೆ ಕೇಂದ್ರ ಪ್ರದೇಶವನ್ನು ನೀಡಿರುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.