ಕಾರವಾರ ಬಳಿಯ ಕದಂಬ ನೌಕಾನೆಲೆಗೆ ಪಾರ್ಲಿಮೆಂಟರಿ ಡಿಫೆನ್ಸ ಕಮಿಟಿ ಭೇಟಿ
ಕಾರವಾರ .ಜ.20: ಕಾರವಾರ ಬಳಿಯ ಕದಂಬ ನೌಕಾನೆಲೆಗೆ ಪಾರ್ಲಿಮೆಂಟರಿ ಡಿಫೆನ್ಸ ಕಮಿಟಿ ಭೇಟಿ ನೀಡಿ , ಪ್ತಸಕ್ತ
ಬೆಳವಣಿಗೆ ಹಾಗೂ ಪ್ರಗತಿ ಪರಿಶೀಲನೆ ಮಾಡಿತು.
ಸಂಸದ ಜುಅಲ್ ಓರಮ್ ಅಧ್ಯಕ್ಷತೆಯಲ್ಲಿ ಆಗಮಿಸಿ ಮೂವತ್ತು ಜನರ ಕಮಿಟಿಯಲ್ಲಿ ರಾಜ್ಯಸಭಾ ಸದಸ್ಯ ಶರದ್ ಪವಾರ್ ,ವಿಜಯೇಂದ್ರ ಸಿಂಗ್,ಡಾ.ಅಶೋಕ್ ,ವಾಜಪೇಯಿ,ಪ್ರೇಮಚಂದ್ ಗುಪ್ತಾ,ಸಂಸದರಾದ ಕುಮಾರ್ ಡ್ಯಾನಿಷ್ ಅಲಿ,ಅಜಯ್ ಭಟ್, ಕರ್ನಾಟಕದ ಅಣ್ಣಾಸಾಬ್ ಜೊಲ್ಲೆ,ರಾಮ್ ಶಂಕರ್ ಕಟಾರಿಯ ,ಪಿ.ಆರ್.ಫಣಿವೇಂದ್ರ ಮುಂತಾದವರು ಆಗಮಿಸಿದ್ದರು
ಬುಧುವಾರ ಮಧ್ಯಾಹ್ನ ಆಗಮಿಸಿದ ಸಮಿತಿ ಕದಂಬ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ಹಾಗೂ ಭದ್ರತೆ ಕುರಿತು ಸಭೆ ನಡೆಸಿ ಮಾಹಿತಿ ಪಡೆಯಿತು.ಏಷ್ಯಾ ಖಂಡದ ಅತೀ ದೊಡ್ಡ ನೌಕಾನೆಲೆ ಎಂಬ ಖ್ಯಾತಿ ಹೊಂದಿರುವ ಕಾರವಾರದ ಕದಂಬ ನೌಕಾ ನೆಲೆಯು 2005 ರಲ್ಲಿ ದೇಶಕ್ಕೆ ಸಮರ್ಪಣೆಯಾಗಿದೆ.
ನೇವಿ ವಿಮಾನ ನಿಲ್ದಾಣ, ವಜ್ರಕೋಶ, ಶಿಫ್ ಲಿಫ್ಟ್ ಬಗ್ಗೆ ಸಹ ಮಾಹಿತಿ ಪಡೆಯಿತು.ಐಎನ್ ಎಸ್ ವಿಕ್ರಮಾದಿತ್ಯ ಆಧುನೀಕರಣದ ವಿವರ ಸಹ ಪಡೆಯಿತು.
ನಂತರ 2018 ರಲ್ಲಿ ಎರಡನೇ ಹಂತದ 13,500 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಇದರ ಖರ್ಚು ವೆಚ್ಚ,ಕಾಮಗಾರಿ ಗುಣಮಟ್ಟ,ಪ್ರಸಕ್ತ ಸ್ಥಿತಿಗಳ ಬಗ್ಗೆ ಅಧ್ಯಯನ ನೆಡೆಸಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಜೊತೆಗೆ ಹಣ ಬಿಡುಗಡೆ ಗೆ ಶಿಫಾರಸ್ಸು ಮಾಡುತ್ತದೆ. ಕಮಿಟಿಯಲ್ಲಿ ಅಧಿಕಾರಿಗಳು ಸೇರೆ ಒಟ್ಟು ಮೂವತ್ತು ಜನರಿದ್ದು ಕದಂಬ ನೌಕಾನೆಲೆಯಲ್ಲಿ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ಸಹ ಮಾಡಿತು. ಇದಕ್ಕೂ ಮುನ್ನ ಗೋವಾದ
ನೇವಿ ಕೇಂದ್ರಕ್ಕೆ ಸಮಿತಿ ಭೇಟಿ ನೀಡಿತ್ತು. ಸಮಿತಿಯಲ್ಲಿದ್ದ ಸಂಸದ ರಾಹುಲ್ ಗಾಂಧಿ, ಪ್ರತಾಪ್ ಸಿಂಹ ನೌಕಾನೆಲೆಗೆ ಬಂದಿರಲಿಲ್ಲ