ಕೋರೋನಾ ಸೈನಿಕರಿಗೆ ಪುಷ್ಪಾಲಂಕಾರದ ಮೂಲಕ ಗೌರವ ಸಮರ್ಪಣೆ

ಬೆಂಗಳೂರು,ಜೂ 11,ಕೊರೊನಾ ಯೋಧರಾಗಿ ವೈದ್ಯರು, ಪೊಲೀಸರು, ದಾದಿಯರು  ಕಳೆದ ಮೂರು ತಿಂಗಳಿನಿಂದ ತಮ್ಮ ಜೀವ ಒತ್ತೆಯಿಟ್ಟು ದುಡಿಯುತ್ತಿದ್ದು, ಇಂತಹ ಕೊರೊನಾ ಸೈನಿಕರಿಗೆ ಪುಷ್ಪ ಪ್ರದರ್ಶನ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ. ತೋಟಗಾರಿಕಾ ಇಲಾಖೆ, ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಝೀ ವೆಡ್ಡಿಂಗ್ದ್ ಎಂಡ್ ಈವೆಂಟ್ ಸಂಸ್ಥೆಗಳ ಸಹಯೋಗದಲ್ಲಿ ಇಂದಿನಿಂದ ಮೂರುದಿನಗಳ ಕಾಲ ಪುಷ್ಪಾಲಂಕಾರದ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ. ಅಂದ ಹಾಗೆ ಈ ಕರೊನಾ ಸೈನಿಕರ ಪ್ರತಿಮೆಗಳನ್ನು  1.72 ಲಕ್ಷ ಹೂ  ಬಳಸಿ ಅಲಂಕಾರ ಮಾಡಲಾಗುತ್ತಿದೆ. ಬೆಂಗಳೂರಿನ ವಿಧಾನಸೌಧ, ಬ್ರಿಗೇಡ್ ರೋಡ್,  ಫ್ರೇಜರ್ ಟೌನ್ ಸೇರಿದಂತೆ ವಿವಿಧೆಡೆ ಪುಷ್ಪಾಲಂಕರದ ಮೂಲಕ ಗೌರವ ಅರ್ಪಿಸಲಾಗುತ್ತಿದೆ. 

ವಿಧಾನಸೌಧದ ಮುಂಭಾಗ ಸಾಂಕೇತಿಕವಾಗಿ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಪ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೋಟಗಾರಿಕೆ ಸಚಿವ ಡಾ| ನಾರಾಯಣಗೌಡ ಚಾಲನೆ ನೀಡಿದರು. ಝೀ ವೆಡ್ಡಿಂಗ್ ಎಂಡ್ ಈವೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಝುಬೈರ್ ಮಾತನಾಡಿ, ಸಂಕಷ್ಟದಲ್ಲಿ ಮಹತ್ವದ ಸೇವೆ ನೀಡಿದ ಕೊರೊನಾ ಸೈನಿಕರಿಗೆ ಇದೀಗ ಪುಷ್ಪ ಪ್ರದರ್ಶನದ ಮೂಲಕ ಗೌರವ ಸೂಚಿಸಲಾಗುತ್ತಿದೆ. “ಕೋವಿಡ್ ವಾರಿಯರ್ಸ್ ಗೆ ಹೂಗಳ ಪ್ರದರ್ಶನ ನೀಡುವ ಮೂಲಕ ಗೌರವ ಸೂಚಿಸುತ್ತಿರುವುದು ಹಮ್ಮೆಯ ಸಂಗತಿಯಾಗಿದೆ. ಸಂಕಷ್ಟದ ಕಾಲದಲ್ಲಿ ಜನರ ಸೇವೆ ಮಾಡಿದ ಇವರಿಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.