ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಪಿ.ಡಿ.ಓ. -ಇಂಜನೀಯರ್ ಅಮಾನತ್ತಿಗೆ ಆಗ್ರಹ

ಹಾವೇರಿ28: ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಶಿಫಾರಸ್ಸಿನಂತೆ ನಿಯೋಜಿಸಬೇಕು. ಸದಸ್ಯರಿಗೆ ಬೇಡವಾದ ಅಧಿಕಾರಿಗಳನ್ನು  ಬದಲಾಯಿಸಿ ಕಾರ್ಯದಶರ್ಿಗಳಿಗೆ ಗ್ರಾಮ ಪಂಚಾಯತಿಗಳ ಪ್ರಭಾರ ನೀಡಬೇಕು ಎಂದು ಹಲವು ಜಿ.ಪಂ. ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ ಪರಿಣಾಮ ತೀವ್ರ ಚಚರ್ೆಗೆ ಗ್ರಾಸವದಗಿಸಿ ಶಾಸಕ ನೆಹರು ಓಲೇಕಾರ ಸೇರಿದಂತೆ ಹಲವು ಸದಸ್ಯರು ಸಭೆಯಿಂದ ಹೊರನಡೆದು ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾದ ಘಟನೆ ಇಂದಿಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಉದ್ಯೋಗ ಖಾತ್ರಿ ಇಂಜನೀಯರ್ಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಕೆಲ ಪಿ.ಡಿ.ಓ.ಗಳು ಕಚೇರಿಗೆ ಬರುವುದಿಲ್ಲ, ಉದ್ಯೋಗ ಖಾತ್ರಿ ಇಂಜನೀಯರ್ಗಳು ಗುತ್ತಿಗೆದಾರರಂತೆ ವತರ್ಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ಲಿಗೆ ರುಜುಮಾಡಲು  ಕಾಮಗಾರಿ ಕೆಲಸದಲ್ಲಿ ತಮ್ಮನ್ನು ಅನಧಿಕೃತವಾಗಿ ಪಾಲುದಾರ ಗುತ್ತಿಗೆದಾರರನ್ನಾಗಿ ಮಾಡಿಕೊಳ್ಳಲು ಷರತ್ತು ಹಾಕುತ್ತಿದ್ದಾರೆ, ಇದು ನಿಯಮಬಾಹೀರವಾಗಿದೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಂಡು ಕಡಿವಾಣಹಾಕಬೇಕು ಎಂದು ಸದಸ್ಯರು ಗಂಭೀರವಾದ ಆರೋಪವನ್ನು ಸಭೆಯಲ್ಲಿ ಮಾಡಿದರು.

ಕೆಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಇಂತಹ ಅಧಿಕಾರಿಗಳು ನಮ್ಮ ಕ್ಷೇತ್ರಕ್ಕೆ ಬೇಡ. ಇವರನ್ನು ವಗರ್ಾಯಿಸಿ ನಿಯೋಜನೆ ಮೇರೆಗೆ ಗ್ರಾಮ ಪಂಚಾಯತಿ ಕಾರ್ಯದಶರ್ಿಗಳಿಗೆ ಅಧಿಕಾರ ನೀಡಿ ಎಂದು ಕೆಲವು ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕರದ ನೆಹರು ಓಲೇಕಾರ ಅವರು ಮಾತನಾಡಿ, ಆರಂಭದಲ್ಲೇ ನಾನು ನಿಮಗೆ ಸೂಚನೆ ನೀಡಿದ್ದೇನೆ. ಬಹಳಷ್ಟು ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕೆಲಸಮಾಡುವುದಿಲ್ಲ. ಪ್ರವಾಸಕೈಗೊಂಡು ಖುದ್ದಾಗಿ ಪರಿಶೀಲನೆ ನಡೆಸಿ, ಇಂತಹ ಅಧಿಕಾರಿಗಳನ್ನು ಬೇರೆಡೆ ವಗರ್ಾಯಿಸಿ ಶಿಸ್ತು ಕ್ರಮಕೈಗೊಳ್ಳಿ ಎಂದು ಹೇಳಿದ್ದೇನೆ ಆದರೂ ಕ್ರಮವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಲೀಲಾವತಿ ಅವರು ಮಾತನಾಡಿ, ಹಲವು ಪಂಚಾಯತಿಗಳಿಗೆ ಭೇಟಿ ನೀಡಿದ್ದೇನೆ. ಸದಸ್ಯರು ನಿಧರ್ಿಷ್ಟವಾಗಿ ದೂರು ನೀಡಿದರೆ ತನಿಖೆ ನಡೆಸಿ ತಪ್ಪು ಕಂಡುಬಂದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು. ಆದರೆ ನಿಧರ್ಿಷ್ಟವಾದ ಯಾವುದೇ ದೂರುಗಳು ಇಲ್ಲದಿದ್ದರೆ ವಗರ್ಾವಣೆಯಾಗಲಿ, ನಿಯೋಜನೆಯಾಗಲು ಅಥವಾ ಶಿಸ್ತು ಕ್ರಮವಾಗಲಿ ತಗೆದುಕೊಳ್ಳಲು ಬರುವುದಿಲ್ಲ ಎಂದು ಉತ್ತರಿಸಿದರು.

 ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳ ಉತ್ತರದಿಂದ ಸಿಡಿಮಿಡಿಗೊಂಡ ಶಾಸಕರಾದಿಯಾಗಿ ಕೆಲಸ ಸದಸ್ಯರು ಸಭೆಯಿಂದ ಹೊರನಡೆದರು. 

 ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಮಾತನಾಡಿ, ಶಾಸನ ಸಭೆಯಲ್ಲಿ ರೂಪಿತವಾದ ಕಾನೂನು ಮತ್ತು ನಿಯಮಾವಳಿಯನ್ನು ಬದಲಾಯಿಸಲು ಬರುವುದಿಲ್ಲ. ಶಾಸಕಾಂಗ ಸಭೆಯಲ್ಲೇ ನಿಯಮಾವಳಿಯನ್ನು ಶಾಸಕರು ಬದಲಾಯಿಸಬೇಕಾಗುತ್ತದೆ. ಅಲ್ಲಿಯವರೆಗೂ ನಿಯಮಾವಳಿಯಂತೆ ಕೆಲಸ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ಉಪಾಧ್ಯಕ್ಷರಾದ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಲೀಲಾವತಿ, ಜಿ.ಪಂ.ಲೆಕ್ಕಾಧಿಕಾರಿ ಜಾಫರ ಸುತಾರ್ ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.