ಬಳ್ಳಾರಿ,ಜು.03: ಬಳ್ಳಾರಿ ಜಿಲ್ಲೆಯಲ್ಲಿ 10 ಸಾವಿರ ಆಂಟಿಜೆನ್ ಕಿಟ್ ಖರೀದಿಸಿ ಕೋವಿಡ್ ತಪಾಸಣೆಗೆ ಒತ್ತು ನೀಡಿರುವುದು ಮಾದರಿಯಾಗಿದ್ದು, ಅದೇ ರೀತಿ ತಪಾಸಣೆಗೆ ಒತ್ತು ನೀಡುವ ದೃಷ್ಟಿಯಿಂದ ರಾಜ್ಯ ಸರಕಾರವು 1ಲಕ್ಷ ಆಂಟಿಜೆನ್ ಕಿಟ್ ಖರೀದಿಸಲು ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಲಕ್ಷಣರಹಿತ ರೋಗಿಗಳನ್ನು ಇನ್ಮುಂದೆ ಪ್ರತ್ಯೇಕಿಸಿ ಅವರನ್ನು ಹೋಂ ಐಸೋಲೇಶನ್ ಮಾಡಲು ಸರಕಾರ ತೀಮರ್ಾನಿಸಿದೆ. ಬೆಂಗಳೂರಿನಲ್ಲಿ ಕೋವಿಡ್ಗಾಗಿ ಪ್ರತಿ ವಾಡರ್್ಗೆ 2 ಆಂಬ್ಯುಲೆನ್ಸ್ಗಳಂತೆ 400 ಆಂಬ್ಯುಲೆನ್ಸ್ಗಳನ್ನು ಖರೀದಿಸಿ ಮೀಸಲಿಡಲು ಉದ್ದೇಶಿಸಲಾಗಿದ್ದು,ಇದಕ್ಕಾಗಿ ಐಪಿಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಕೆಲ 10 ಕೆಟಗೆರಿಗಳನ್ನಾಗಿ ವಿಂಗಡಿಸಿ ತಪಾಸಣೆಗೆ ಒತ್ತು ನೀಡಲು ಇಂದು ನಡೆದ ಟಾಸ್ಕ್ಫೋಸರ್್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂಬುದನ್ನು ಖಚಿತಪಡಿಸಿದ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿಯೂ 2 ಸಾವಿರ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಂಗಳೂರಿನ ನಾಲ್ಕು ಕಡೆ ವಿದ್ಯುತ್ ಚಿತಾಗಾರಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪಿಪಿಇ ಕಿಟ್,ಥರ್ಮಲ್ ಸ್ಕ್ಯಾನರ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಆರೋಪವನ್ನು ಸಾರಾಸಾಗಾಟವಾಗಿ ತಳ್ಳಿಹಾಕಿದ ಸಚಿವ ಶ್ರೀರಾಮುಲು ಅವರು ಟಾಸ್ಕ್ಫೋಸರ್್ ಮತ್ತು ತಜ್ಞರು ಸಮಿತಿ ಅನುಮೋದಿಸಿದ ನಂತರವಷ್ಟೇ ಖರೀದಿಸಲಾಗುತ್ತದೆ; ಮಾಜಿ ಸಿಎಂ ಅವರು ಪ್ರಚಾರದ ದೃಷ್ಟಿಯಿಂದ ಆ ರೀತಿ ಹೇಳಿದ್ದಾರಷ್ಟೇ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್ಒ ಜನಾರ್ಧನ್ ಮತ್ತಿತರರು ಇದ್ದರು.