ಡಿ. 21 ಹೆಸರು ನೋಂದಾವಣಿಗೆ ಕೊನೆಯ ದಿನ

Dec. 21 Last day for name registration

ವಿಜಯಪುರ, ಡಿ. 16: ನಗರದಲ್ಲಿ ಈ ಬಾರಿ ನಡೆಯುತ್ತಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಈಗಾಗಲೇ 9113 ಜನರು ತಮ್ಮ ಹೆಸರು ನೋಂದಾಯಿಸಿದ್ದು, ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಡಿ. 21 ರಂದು ಶನಿವಾರ ಒಂದು ದಿನ ಮಾತ್ರ ನಗರದ ಭಾರತರತ್ನ ಡಾ. ಬಿ. ಆರ್‌. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪಾಟ್ ರಜಿಸ್ಟ್ರೇಷನ್ ಮೂಲಕ ಹೆಸರು ನೋಂದಾವಣಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.  

ಆದರೆ, ಈ ಸ್ಪಾಟ್ ರಜಿಸ್ಟ್ರೇಷನ್ ನಲ್ಲಿ ಹೆಸರು ನೋಂದಾಯಿಸಿದವರಿಗೆ ಬಹುಮಾನ ಮತ್ತು ಇತರ ಸೌಲಭ್ಯಗಳು ಲಭ್ಯ ಇರುವುದಿಲ್ಲ.   

ಈ ಬಾರಿ 5 ಕಿ. ಮೀ. ಓಟದಲ್ಲಿ 8430 ಜನ, 10 ಕಿ. ಮಿ. ಓಟದಲ್ಲಿ 388 ಮತ್ತು 21 ಕಿ. ಮೀ. ಓಟದಲ್ಲಿ 295 ಜನರು ತಮ್ಮ ಹೆಸರು ನೋಂದಾಯಿಸಿದ್ದಾರೆ.  ಈಗಾಗಲೇ ಆನಲೈನ್ ನೋಂದಣಿ ಮುಕ್ತಾಯಗೊಂಡಿದ್ದರೂ, ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಡಿ. 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗುವುದು.  ಕೆಲವೇ ಪ್ರವೇಶಗಳು ಬಾಕಿ ಉಳಿದಿವೆ.   

ಡಿಸೆಂಬರ್ 21 ರಂದು ಟಿ- ಶರ್ಟ್‌ ಬಿಬ್ ವಿತರಣೆ 

ಈ ಮಧ್ಯೆ, ಈಗಾಗಲೇ ಹೆಸರು ನೋಂದಾಯಿಸಿದವರಿಗೆ ಡಿಸೆಂಬರ್ 21 ರಂದು ಟಿ- ಶರ್ಟ್‌ ಮತ್ತು ಬಿಬ್ ಗಳನ್ನೂ ವಿತರಿಸಲಾಗುವುದು.  ಈ ಹಿನ್ನೆಲೆಯಲ್ಲಿ ಹೆಸರು ನೋಂದಾಯಿಸಿದವರು ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ತಮ್ಮ ಬಿಬ್ ಮತ್ತು ಟಿ- ಶರ್ಟ್‌ ಗಳನ್ನು ಪಡೆಯಬಹುದಾಗಿದೆ ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.