ಈಕ್ವೆಡಾರ್ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 7 ಕ್ಕೆ ಏರಿಕೆ; 1340 ಜನರಿಗೆ ಗಾಯ

 ಬ್ಯೂನಸ್ ಏರಿಸ್, ಅ 14:      ಈಕ್ವೆಡಾರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದ್ದು, 1340 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಐವರು ಮೃತಪಟ್ಟಿರುವುದಾಗಿ ಈ ಹಿಂದಿನ ವರದಿ ತಿಳಿಸಿತ್ತು.  1340 ಜನರು ಗಾಯಗೊಂಡಿದ್ದು 1152 ಜನರನ್ನು ಬಂಧಿಸಿರುವುದಾಗಿ ಅಲ್ಲಿನ ಕಚೇರಿ ಟ್ವೀಟ್ ಮಾಡಿದೆ. ಸರ್ಕಾರ ಆರ್ಥಿಕ ನೀತಿ ವಿರೋಧಿಸಿ, ಮುಖ್ಯವಾಗಿ ದಶಕಗಳಿಂದ ನೀಡುತ್ತಿದ್ದ ಇಂಧನ ಸಬ್ಸಿಡಿ ನಿಲ್ಲಿಸುವ ನಿರ್ಧಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಅಕ್ಟೋಬರ್ ಆರಂಭದಿಂದ ಜನರು ಸಾಮೂಹಿಕ ಪ್ರತಿಭಟನೆ ನಡೆಸಿದ್ದಾರೆ. ಸಬ್ಸಿಡಿಗಳನ್ನು ಜನರಿಗೆ ನೀಡಲು ಸಾಧ್ಯವಿಲ್ಲ, ಈ ಕಡಿತಗಳ ವಿನಾಯಿತಿ ತೆಗೆದುಹಾಕುವುದರಿಂದ ದೇಶಕ್ಕೆ ವಾರ್ಷಿಕವಾಗಿ 2.27 ಶತಕೋಟಿ ಡಾಲರ್ ಉಳಿತಾಯವಾಗಲಿದೆ ಎಂದು ಅಲ್ಲಿನ ಅಧ್ಯಕ್ಷ ಲೆನಿನ್ ಮೊರೆನೋ ಹೇಳಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ 4.2 ಶತಕೋಟಿ ಡಾಲರ್ ನೆರವು ಪಡೆಯಲು ಈಕ್ವೆಡಾರ್ ಸರ್ಕಾರದ ಒಪ್ಪಂದದ ಭಾಗವಾಗಿ ಇಂಧನ ಸಬ್ಸಿಡಿ ತೆಗೆದು ಹಾಕಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಜನರ ಜೀವಕ್ಕೆ ಬೆದರಿಕೆಯೊಡ್ಡಿದ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಿದ ಬಂಧನದಲ್ಲಿರುವ ಪ್ರತಿಭಟನಾಕಾರರ ವಿರುದ್ಧ ಭಯೋತ್ಪಾದಕ ಆಪಾದನೆಗಳ ಪ್ರಕರಣ ದಾಖಲಿಸುವುದಾಗಿ ಅಲ್ಲಿನ ಅಟಾನರ್ಿ ಜನರಲ್ ಕಚೇರಿ ತಿಳಿಸಿದೆ.