ವಾಷಿಂಗ್ಟನ್, ಏಪ್ರಿಲ್ 17, ಅಮೆರಿಕದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಒಂದೇ ದಿನದಲ್ಲಿ ಸುಮಾರು 4,000 ಜನರನ್ನು ಬಲಿಪಡೆದಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ (ಜೆಎಚ್‌ಯು) ಅಂಕಿ- ಅಂಶಗಳು ತಿಳಿಸಿವೆ.ಸ್ಥಳೀಯ ಕಾಲಮಾನ ಗುರುವಾರ ಸಂಜೆ 6:00 ರ ವೇಳೆಗೆ ದೇಶದಲ್ಲಿ ಸಾವಿನ ಸಂಖ್ಯೆ 32,186 ಕ್ಕೆ ತಲುಪಿದೆ ಎಂದು ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.ಅಮೆರಿಕದಲ್ಲಿ ಒಟ್ಟು 6,58,263 ಕರೋನವೈರಸ್ ಪ್ರಕರಣಗಳು ಇದರುವರೆಗೆ ದೃಢಪಟ್ಟಿವೆ. ಇದು ಯೂರೋಪ್‍ನಲ್ಲಿ ಅತಿ ಹೆಚ್ಚು ಬಾಧಿತ ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ದೇಶಗಳ ಒಟ್ಟು ಪ್ರಕರಣಗಳಿಗಿಂತ ಅಧಿಕ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ದೇಶದಲ್ಲಿ ಆರ್ಥಿಕತೆ ತೀವ್ರ ಕುಸಿತ ಕಾಣುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಆರ್ಥಿಕ ಚುಟುವಟಿಕೆಗಳ ಪುನರಾರಂಭಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಿದ್ದಾರೆ.