ಅಪರಿಚಿತ ವ್ಯಕ್ತಿ ಸಾವು: ಪ್ರಕರಣ ದಾಖಲು

ಅಪರಿಚಿತ ವ್ಯಕ್ತಿ ಸಾವು: ಪ್ರಕರಣ ದಾಖಲು Death of an unknown person: Case registered:Koppal news

ಕೊಪ್ಪಳ 12 : ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಇರಕಲ್‌ಗಡಾ ಸೀಮಾದಲ್ಲಿ ಆಗಸ್ಟ 10 ರಂದು ಅನಾಮದೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆಯ ಯು.ಡಿ.ಆರ್ ನಂ:25/2025 ಕಲಂ: 194(3)(ತ)ರ ಭಾರತೀಯ ನಾಗರಿಕ ಸುರಕ್ಷ ಸಾಹಿತ್ಯ-2023 ರೀತ್ಯಾ ಪ್ರಕರಣ ದಾಖಲಿಸಲಾಗಿದೆ.   

ಇರಕಲ್‌ಗಡಾ ಸೀಮಾದಲ್ಲಿ ಬರುವ ಸಿ.ವಿ ಚಂದ್ರಶೇಖರ ಎಂಬುವವರ ಜಮೀನಿನ ಹತ್ತಿರ ರಸ್ತೆಯ ಪಕ್ಕದಲ್ಲಿ ಗಿಡ ಗಂಟೆಗಳ ಮಧ್ಯದಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯು ಯಾವುದೋ ರೀತಿಯಿಂದ ಮೃತಪಟ್ಟಂತೆ ಕಂಡು ಬರುತ್ತಿದ್ದು, ಇದರಲ್ಲಿ ಸಂಶಯ ಕಂಡು ಬರುತ್ತಿದೆ ಎಂದು ಇರಕಲ್‌ಗಡಾ ದಿಂದ ವಣಬಳ್ಳಾರಿಗೆ ಹೋಗುವ ಸ್ಥಳೀಯರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿ, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿಸಿರುತ್ತಾರೆ. ಪೊಲೀಸರು ಪ್ರಕರಣ ದಾಖಲಿಸಿ ತಪಾಸಣೆಯನ್ನು ಕೈಗೊಂಡಿದ್ದಾರೆ.  

ಮೃತ ವ್ಯಕ್ತಿಯ ಚಹರೆ: ಅಂದಾಜು 5.3 ಅಡಿ ಎತ್ತರ, ಸಾದಾ ಕೆಂಪನೆಯ ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಕಪ್ಪು ಕೂದಲು, ಕೊರಚಲ ಗಡ್ದವನ್ನು ಬಿಟ್ಟಿದ್ದು ಇರುತ್ತದೆ. ಬಲಗೈಯಲ್ಲಿ ಕಪ್ಪು ದಾರ ಕಟ್ಟಿದ್ದು ಮತ್ತು ಬಲಗೈ ಮಂಗೈ ಕೆಳಭಾಗದಲ್ಲಿ ದಿಲ್ ಮಾರ್ಕ್‌ ಇದ್ದು, ಅದರಲ್ಲಿ ಬಿ.ಕೆ.ಬಿ ಎಂಬ ಇಂಗ್ಲಿಷ್ ಅಕ್ಷರದ ಅಚ್ಚೆ ಇದೆ. ಮೃತ ವ್ಯಕ್ತಿಯ ಮೈ ಮೇಲಿನ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರೆಸಿರುತ್ತಾನೆ.  

ಈ ಮೃತ ವ್ಯಕ್ತಿ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ಸುಮಾರು 30 ರಿಂದ 35 ವರ್ಷ ವಯಸ್ಸಿನ ವ್ಯಕ್ತಿಯು ಕಾಣೆಯಾದ ಬಗ್ಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದಲ್ಲಿ ಅಥವಾ ವಾರಸುದಾರರು ಯಾರದಾರದೂ ಇದ್ದಲ್ಲಿ ಮಾಹಿತಿಯನ್ನು ಕಂಟ್ರೋಲ್ ರೂಮ್ ನಂಬರ್ 085392-30100 ಮತ್ತು 230222, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್‌.ಐ ಮೊ.ಸಂ: 9480803746 ಹಾಗೂ ದೂ.ಸಂ: 08539-221333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯ ಪಿ.ಎಸ್‌.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.