ಕಾರವಾರ, ಸೆ 22 ಬೆಂಗಳೂರಿನಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗನೋರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹೊನ್ನಾವರ ಬಳಿಯ ಮುಡರ್ೆಶ್ವರದಲ್ಲಿ ಭಾನುವಾರ ನಡೆದಿದೆ.
ನಟರಾಜ್ ಮೃತಪಟ್ಟ ದುದರ್ೆವಿ. ಒಟ್ಟು 11 ಮಂದಿಯ ತಂಡ ಬೆಂಗಳೂರಿನಿಂದ ಪ್ರವಾಸಕ್ಕೆಂದು ತೆರಳಿತ್ತು. ಇಂದು ಮುಂಜಾನೆ ಮುಡರ್ೆಶ್ವರದಲ್ಲಿ ನಟರಾಜ್ ಸೇರಿ ಒಟ್ಟು ಐವರು ಸಮುದ್ರಕ್ಕೆ ಇಳಿದಿದ್ದರು. ನೀರಿನಲ್ಲಿ ಸಿಲುಕಿದ್ದ ಅವರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು.
ಆದರೆ, ನಟರಾಜ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಐವರು ನೀರಿಗೆ ಇಳಿಯುವ ಮೊದಲು, ಸ್ಥಳದಲ್ಲಿದ್ದ ಮೀನುಗಾರರು ನೀರಿನ ಆಳಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರು. ಆದರೂ ಅದ್ಯಾವುದನ್ನು ಲೆಕ್ಕಿಸದೇ ಇವರು ಆಳವಾದ ನೀರಿಗೆ ಇಳಿದಿದ್ದರು ಎನ್ನಲಾಗಿದೆ. ನಟರಾಜ್ ಶವವನ್ನು ಮೀನುಗಾರರೇ ದಡಕ್ಕೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಡರ್ೆಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.