ಕಬ್ಬು ಬಾಕಿ ಪಾವತಿಗೆ ಜೂ.30ರಂದು ಗಡುವು: ಡಿಸಿ

ಬಾಗಲಕೋಟೆ24: ಜಿಲ್ಲೆಯ ವಿವಿಧ ಸಕ್ಕರೆ ಕಾಖರ್ಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಪಾವತಿಸಲು ಜೂನ್ 30 ಗಡುವು ನೀಡಲಾಗಿದ್ದು, ಪಾವತಿಸದಿದ್ದಲ್ಲಿ ಜುಲೈ 1 ರಂದು ಸಕ್ಕರೆ ಜಪ್ತಿಗೆ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಕ್ಕರೆ ಕಾಖರ್ಾನೆ ಮಾಲಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2018-19ನೇ ಹಂಗಾಮಿನ ಒಟ್ಟು 15849.18 ಲಕ್ಷ ಬಾಕಿ ಉಳಿದಿದ್ದು, ಈ ಕುರಿತು ಈಗಾಗಲೇ ಜೂನ್ 17 ರಂದು ಸಕ್ಕರೆ ಆಯುಕ್ತರ ಆದೇಶದಂತೆ ಕಬ್ಬು ಬಾಕಿ ವಸೂಲಾತಿಗೆ ನೋಟಿಸ್ ನೀಡಲಾಗಿದೆ. ಜೂನ್ 30 ರಂದು ಸಂಜೆ 6 ಗಂಟೆಯೊಳಗಾಗಿ ಬಾಕಿ ಹಣ ಸಂಪೂರ್ಣವಾಗಿ ಪಾವತಿಸಲಿದ್ದಲ್ಲಿ ಜುಲೈ 1 ರಂದು ಸಕ್ಕರೆ ಜಪ್ತಿಗೆ ಕ್ರಮ ಜರುಗಿಸುವದಾಗಿ ತಿಳಿಸಿದರು.

ನಿರಾಣಿ ಸುಗರ್ಸ್, ರನ್ನ ಶುಗರ್ಸ್ ಹಾಗೂ ಸಾಯಿಪ್ರೀಯಾ ಶುಗರ್ಸ್ ನವರು ಜೂನ್ 30 ರೊಳಗೆ ಪಾವತಿಸುವುದಾಗಿ ತಿಳಿಸಿದರೆ, ಉಳಿದ ಸಕ್ಕರೆ ಕಾಖರ್ಾನೆ ಮಾಲಿಕರು ಉತ್ಪಾದನೆ ಸಬ್ಸಿಡಿ ಮತ್ತು ರಸ್ತೆ ಸಾರಿಗೆ ವಿನಾಯಿತಿ ಕೋರಿ ಕೇಂದ್ರ ಸರಕಾರಕ್ಕೆ ಅಜರ್ಿ ಸಲ್ಲಿಸಲಾಗಿದ್ದು, ವಿನಾಯಿತಿ ಹಣ ಬಂದ ಮೇಲೆ ಪಾವತಿಸಲು ಕಾಲಾವಧಿ ಕೇಳಿ ಮನವಿ ನೀಡುವುದಾಗಿ ತಿಳಿಸಿದರು. 

 ಈಗಾಗಲೇ ಈ ಹಿಂದೆ ಕಾಲಾವಕಾಶ ನೀಡಲಾಗಿದೆ. ಕಾಲಾವಕಾಶ ಕೇಳುವ ಜರುರು ಇಲ್ಲ. ಮೊದಲು ಕೊಡಬೇಕಾದ ರೈತರ ಕಬ್ಬು ಬಾಕಿ ಪಾವತಿಸಿ ನಂತರ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದರು.

2018-19ನೇ ಸಾಲಿಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾಖರ್ಾನೆಯವರು ಒಟ್ಟು 9884052.873 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್ಆರ್ಪಿ ಯನ್ವಯ ರೂ.289863.81 ಲಕ್ಷ ಮೊತ್ತ ಪಾವತಿಸಬೇಕಾಗಿದ್ದು, ಈ ಪೈಕಿ 274014.62 ಲಕ್ಷ ರೂ. ಮೊತ್ತವನ್ನು ಪಾವತಿಸಿದ್ದು, ರೂ.15849.18 ಲಕ್ವ ಮೊತ್ತವನ್ನು ಪಾವತಿಸಲು ಬಾಕಿ ಇರುತ್ತದೆ. ನಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ಶುಗರ್ಸ್ ನವರು 2018-19ನೇ ಸಾಲಿನ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಿದನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.

ಇದರ ಜೊತೆಗೆ 2017-18ನೇ ಸಾಲಿಗೆ ಹೆಚ್ಚುವರಿಯಾಗಿ ಘೋಷಿಸಿರುವ ದರ ಪಾವತಿ ಕುರಿತು ಇಐಡಿ ಪ್ಯಾರಿ ಶುಗರ್ಸ್ ಹೊರತುಪಡಿಸಿ ಉಳಿದ ಎಲ್ಲ ಕಾಖರ್ಾನೆಯವರು ಪಾವತಿಸಲು ಬಾಕಿ ಉಳಿದಿದೆ. 

    2016-17ನೇ ಹಂಗಾಮಿಗೆ ಕಾಖರ್ಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿ ಬಾಕಿ ಉಳಿಸಿಕೊಂಡಿರುವ ನಿರಾಣಿ ಶುಗರ್ಸ್ನವರು 682.66 ಲಕ್ಷ ರೂ. ಹಾಗೂ ರನ್ನ ಶುಗರ್ಸ್ 288.89 ಲಕ್ಷ ರೂ. ಹಾಗೂ ಇಐಡಿ ಪ್ಯಾರಿ ಇಂಡಿಯಾ 1387.84 ಲಕ್ಷ ಬಾಕಿ ಉಳಿದಿದ್ದು, ತುತರ್ಾಗಿ ಪಾವತಿಸಲು ತಿಳಿಸಿದರು.

  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಉಪವಿಭಾಗಾಧಿಕಾರಿಗಳಾದ ಎಚ್.ಜಯಾ, ಮೊಹಮ್ಮದ ಇಕ್ರಮ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಜಿಲ್ಲೆಯ ಎಲ್ಲ ಸಕ್ಕರೆ ಕಾಖರ್ಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.