ವದಂತಿಗಳಿಗೆ ಕಿವಿಕೊಡಬೇಡಿ :
ಕೊವಿಡ್ ವ್ಯಾಕ್ಸಿನ್ ಅತ್ಯಂತ ಸುರಕ್ಷಿತ
- ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
ಕಾರವಾರ,ಜ.12 : ಇಂದು ಕ್ರಿಮ್ಸ ಕಾರವಾರಕ್ಕೆ ಭೇಟಿ ನೀಡಿ ಕೊವಿಡ್ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್ , ತಾವು ಕೂಡಾ ಕೊವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಯಾವುದೇ ವದಂತಿಗಳಿಗೆ ಕಿವಿಗೊಡದೆ ವ್ಯಾಕ್ಸಿನ್ ಪಡೆಯಿರಿ ಎಂದು ಕರೆ ನೀಡಿದರು.
ಎಲ್ಲಾ ಮೂಂಚೂಣಿಯ ಕೊವಿಡ್ ವಾರಿಯರ್ಸಗಳು ಕೊವಿಡ್ ಲಸಿಕೆಯನ್ನು ಸ್ವಯಂ ಪ್ರೇರೇಪಿತರಾಗಿ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಕೆಲ ಸಣ್ಣ ಪುಟ್ಟ ಸಾಮಾನ್ಯ ಅಡ್ಡ ಪರಿಣಾಮಗಳು ಕೆಲವರಲ್ಲಿ ಕಂಡು ಬಂದರೂ, ಸಹ ಇದರಲ್ಲಿ ಯಾವುದೇ ಅಪಾಯವಿಲ್ಲ ಎಂದರು. ಲಸಿಕೆ ಪಡೆದುಕೊಳ್ಳಲು ಬಂದಿದ್ದ ಸಿಬ್ಬಂದಿಗಳಿಗೆ
ಅವರು ಧೈರ್ಯ ತುಂಬಿದರು.
ಜಿಲ್ಲಾಧಿಕಾರಿಗಳ ಜೊತೆಗೆ , ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು ಕೂಡಾ ಲಸಿಕೆ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಕ್ರಿಮ್ಸ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕ್ರಿಮ್ಸನ ಬಹುತೇಕ ವೈದ್ಯರು ಹಾಜರಿದ್ದರು. ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಳ್ಳವದನ್ನು ನೋಡಿ ಪ್ರೇರೇಪಿತರಾದ ಕ್ರಿಮ್ಸನ ನಿರ್ದೇಶಕರಾದ ಡಾ.ಗಜಾನನ ನಾಯಕ , ಈ ಹಿಂದೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡಾ ಲಸಿಕೆಯನ್ನು ಸ್ಥಳದಲ್ಲಿ ಪಡೆದುಕೊಂಡಿರುವದು ವಿಶೇಷವಾಗಿತ್ತು.