ಅಹಿಂಸಾತ್ಮಕವಾಗಿ ಬಕ್ರಿದ್ ಹಬ್ಬ ಆಚರಿಸಲು ಮುಸ್ಲಿಮರಲ್ಲಿ ದಯಾನಂದ್ ಸ್ವಾಮೀಜಿ ಮನವಿ

ಅಹಿಂಸಾತ್ಮಕವಾಗಿ ಬಕ್ರಿದ್ ಹಬ್ಬ ಆಚರಿಸಲು ಮುಸ್ಲಿಮರಲ್ಲಿ ದಯಾನಂದ್ ಸ್ವಾಮೀಜಿ ಮನವಿ Dayanand Swamiji appeals to Muslims to celebrate Bakrid festival non-violently

ಕೊಪ್ಪಳ 27 : ಮುಸ್ಲಿಂ ಸಮಾಜ ಬಾಂಧವರು ಬಕ್ರೀದ್ ಹಬ್ಬವನ್ನು ಈ ಸಾರಿ ಅಹಿಂಸಾತ್ಮಕವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು ಗೋವುಗಳ ಬಲಿ ಕೊಡದೆ ಅಹಿಂಸ ಮಾರ್ಗವನ್ನು ಅನುಸರಿಸಿ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಅವರು ಗೋ ವಂಶ ಜಾನುವಾರುಗಳ ಹತ್ತೆ ಹಾಗೂ ಪ್ರಾಣಿ ಬಲಿ ತೈಜಿಸಿ ಅಹಿಂಸಾತ್ಮಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ, ಪ್ರಾಣಿಗಳ ಬಲಿ ಹಬ್ಬಗಳಲ್ಲಿ ಅನಿವಾರ್ಯವೇನು ಅಲ್ಲ, ಅನ್ಯ ಧರ್ಮೀಯರಿಗೆ ತೊಂದರೆ ಉಂಟು ಮಾಡುವುದು ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಬೇಡ ಎಂದು ಪ್ರವಾದಿಗಳು ಸಹ ಹೇಳಿದ್ದಾರೆ , ನ್ಯಾಯಾಲಯದ ಆದೇಶ ಕೂಡ ಇದೆ ಪ್ರಾಣಿಗಳ ವಧೆ ಮಾಡಬಾರದು ಎಂದು ಮುಖ್ಯ ನ್ಯಾಯಾಲಯ ಕೂಡ ಹೇಳಿದೆ,ಕಾರಣ ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬವನ್ನು ಅಹಿಂಸಾತ್ಮಕವಾಗಿ ಆಚರಿಸುವುದರ ಜೊತೆಗೆ ಶಾಂತಿಯುತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು ಎಂದು ಶ್ರೀ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋತೀರ್ಥ, ಸರ್ವಜೀವ ರಕ್ಷಾಧಾಮ ,ವಿಶ್ವ ಗೋರಕ್ಷ ಮಹಾಪೀಠ ,ಬಸವ ಧರ್ಮ ಜ್ಞಾನಪೀಠ ಮತ್ತು ಗೋವಂಶ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದು  ಗೋ ವಧೆ ಕೈಬಿಡಲೂ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ,