ಅಹಿಂಸಾತ್ಮಕವಾಗಿ ಬಕ್ರಿದ್ ಹಬ್ಬ ಆಚರಿಸಲು ಮುಸ್ಲಿಮರಲ್ಲಿ ದಯಾನಂದ್ ಸ್ವಾಮೀಜಿ ಮನವಿ
Dayanand Swamiji appeals to Muslims to celebrate Bakrid festival non-violently
ಕೊಪ್ಪಳ 27 : ಮುಸ್ಲಿಂ ಸಮಾಜ ಬಾಂಧವರು ಬಕ್ರೀದ್ ಹಬ್ಬವನ್ನು ಈ ಸಾರಿ ಅಹಿಂಸಾತ್ಮಕವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು ಗೋವುಗಳ ಬಲಿ ಕೊಡದೆ ಅಹಿಂಸ ಮಾರ್ಗವನ್ನು ಅನುಸರಿಸಿ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಗೋ ವಂಶ ಜಾನುವಾರುಗಳ ಹತ್ತೆ ಹಾಗೂ ಪ್ರಾಣಿ ಬಲಿ ತೈಜಿಸಿ ಅಹಿಂಸಾತ್ಮಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ, ಪ್ರಾಣಿಗಳ ಬಲಿ ಹಬ್ಬಗಳಲ್ಲಿ ಅನಿವಾರ್ಯವೇನು ಅಲ್ಲ, ಅನ್ಯ ಧರ್ಮೀಯರಿಗೆ ತೊಂದರೆ ಉಂಟು ಮಾಡುವುದು ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಬೇಡ ಎಂದು ಪ್ರವಾದಿಗಳು ಸಹ ಹೇಳಿದ್ದಾರೆ , ನ್ಯಾಯಾಲಯದ ಆದೇಶ ಕೂಡ ಇದೆ ಪ್ರಾಣಿಗಳ ವಧೆ ಮಾಡಬಾರದು ಎಂದು ಮುಖ್ಯ ನ್ಯಾಯಾಲಯ ಕೂಡ ಹೇಳಿದೆ,ಕಾರಣ ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬವನ್ನು ಅಹಿಂಸಾತ್ಮಕವಾಗಿ ಆಚರಿಸುವುದರ ಜೊತೆಗೆ ಶಾಂತಿಯುತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು ಎಂದು ಶ್ರೀ ದಯಾನಂದ ಸ್ವಾಮೀಜಿ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಗೋತೀರ್ಥ, ಸರ್ವಜೀವ ರಕ್ಷಾಧಾಮ ,ವಿಶ್ವ ಗೋರಕ್ಷ ಮಹಾಪೀಠ ,ಬಸವ ಧರ್ಮ ಜ್ಞಾನಪೀಠ ಮತ್ತು ಗೋವಂಶ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದು ಗೋ ವಧೆ ಕೈಬಿಡಲೂ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ,
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 