ರಾಣೇಬೆನ್ನೂರು10 : ಮನುಷ್ಯ ಜ್ಞಾನ ಮತ್ತು ವಿಚಾರವಂತನಾಗಿ ಸಾತ್ವಿಕ ಮನೋಭಾವ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಸಾರ್ಥಕತೆ ಪಡೆಯುತ್ತಾನೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿಗೆ ಸಮೀಪದ ಐರಾವತ ಕ್ಷೇತ್ರ ಮುಪ್ಪಿನಾರ್ಯ ಮಹಾತ್ಮಜಿಯವರ ಸುಕ್ಷೇತ್ರ ಐರಣಿ ಹೊಳೆಮಠದಲ್ಲಿ ಜರುಗಿದ ನೂತನ ಪಟ್ಟಾಧ್ಯಕ್ಷರಾದ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಪಟ್ಟಾಭಿಷೇಕ ( ಸನ್ಯಾಸ ದೀಕ್ಷೆ ) ಮತ್ತು ನಾಣ್ಯಗಳ ತುಲಾಭಾರ ಹಾಗೂ ಧರ್ಮಸಭೆ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಸ್ವಾಮಿಗಳಾದವರು ರಕ್ತ ಸಂಬಂಧಕ್ಕಿಂತ ಭಕ್ತರ ಸಂಬಂಧ ಬಹುದೊಡ್ಡದು. ಪೂರ್ವಾಶ್ರಮದ ಕೊಂಡಿ ಕಳಚಿ, ಭಕ್ತರ ಅನುಸಂಧಾನಕಾರರಾಗಿ ಆಗಿದಾಗ ಮಾತ್ರ ಪವಿತ್ರವಾದ ಸ್ವಾಮಿತ್ವಕ್ಕೆ ಗಟ್ಟಿತನ ಮತ್ತು ಶಕ್ತಿತನ ಬರುತ್ತದೆ. ನೂತನ ಸ್ವಾಮಿಗಳವರು ನಿರ್ಲಿಪ್ತ ರಾಗಿ ಸಾಗಬೇಕು, ಕುಟುಂಬದ ಯಾವುದೇ ಬಂಧನವನ್ನು ಅಳವಡಿಸಿಕೊಳ್ಳದೆ ಭಕ್ತ ಸಂಬಂಧಕ್ಕೆ ಮಾತ್ರ ಸೀಮಿತರಾಗಿ, ಇತಿಹಾಸದ ಸಿದ್ಧಾರೂಢ ಪರಂಪರೆ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ನೂತನ ಶ್ರೀಗಳಿಗೆ ತಮ್ಮ ಸಲಹೆ ನೀಡಿದರು. ಭಾರತೀಯ ಇತಿಹಾಸ ಪರಂಪರೆಯಲ್ಲಿ, ಧರ್ಮದಅನುಯಾಯಿಗಳಿಗೆ ಮತ್ತು ಯಾವುದೇ ಮತಪೀಠಗಳ ಸ್ವಾಮಿಗಳಿಗೆ ವಿಶೇಷವಾದ ಮಾನ್ಯತೆ ಇದೆ. ಮೌಡ್ಡೆಗಳ ಸುತ್ತಲೂ ಸುತ್ತುತ್ತಿರುವುದು ಅತ್ಯಂತ ವಿಷಾಧಕರ ಸಂಗತಿ ಎಂದು ಪ್ರಸ್ತುತ ಸಂದರ್ಭವನ್ನು ವಿಶ್ಲೇಷಿಸಿ ಮಾತನಾಡಿದ ಸಾಣೆಹಳ್ಳಿ ಶ್ರೀಗಳು ನಿತ್ಯ ನಿರಂತರ ಅಧ್ಯಯನ ಶೀಲರಾಗಿ, ವೈಚಾರಿಕ ಜ್ಞಾನವನ್ನು ಅಳವಡಿಸಿಕೊಂಡು ಸಾಗಿದಾಗ ಪರಂಪರೆಯ ಮಠ- ಪೀಠಗಳಿಗೆ ಮತ್ತಷ್ಟು ಮಾನ್ಯತೆ ದೊರೆಯಲಿದೆ ಎಂದರು.
ಇನ್ನೂರ್ವ ಶ್ರೀಗಳಾದ ಗದುಗಿನ ಶಿವಾನಂದ ಬ್ರಹ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳವರು,ಇದೊಂದು, ಸಾಧು ಸಂತ ಸನ್ಯಾಸಿಗಳ ಅಪರೂಪದ ಕಾರ್ಯಕ್ರಮ. ಮಠ ಪೀಠಗಳಿಂದ ಮಾತ್ರ ಮನುಷ್ಯನ ಶಾಂತಿ ನೆಮ್ಮದಿ ದೊರೆಯಲು ಸಾಧ್ಯ. ಮಠಗಳಲ್ಲಿ ಜಾತಿ ಭೇದ ಭಾವ ಬಡವ ಶ್ರೀಮಂತ ಎನ್ನುವ ಯಾವುದೇ ತಾರತಮವಿಲ್ಲ ಅಂತಹ ಶ್ರೀಮಂತ ಪರಂಪರೆಯ ಭಾವೈಕ್ಯತೆಯ ಮಠ ಐರಣಿ ಹೊಳೆಮಠವಾಗಿದೆ ಎಂದರು. ನೂತನ ಜಗದ್ಗುರುಗಳು ಹಿರಿಯ ಜಗದ್ಗುರುಗಳ ಮಾರ್ಗದರ್ಶನದಲ್ಲಿ, ಮುನ್ನಡೆಯಬೇಕು ಮತ್ತುಈ ಮಠದ ಇತಿಹಾಸವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡು ಪರಂಪರೆ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದು, ಅವರು ಜಗದ್ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು. ನೂರಾರು ಭಕ್ತಾರಿಂದ, ನಾಣ್ಯಗಳ ತುಲಾಭಾರ ಸ್ವೀಕರಿಸಿದ, ಜಗದ್ಗುರು ಶ್ರೀ ಗುರು ಬಸವರಾಜ ದೇಸಿಕೇಂದ್ರ ಮಹಾಸ್ವಾಮಿಗಳವರು, ಸಂಸ್ಥಾನ ಪೀಠವು, ಮುಪ್ಪಿನಾರ್ಯಮಹಾ ಸ್ವಾಮೀಜಿಯವರ ಸಂಕಲ್ಪ ಆಶಯದಂತೆ ಇಲ್ಲಿಯವರೆಗೂ ಪರಂಪರಾಗತವಾಗಿ ಭಕ್ತರ ಉದ್ಧಾರಕ್ಕಾಗಿ, ಸೇವೆ ಸಲ್ಲಿಸಿದ್ದೇವೆ. ಪರಂಪರೆ ಮುಂದುವರೆಯುವ ಮತ್ತು ಮುಪ್ಪಿನಾರ್ಯರ ಅಂತ:ಶಕ್ತಿಯ ಸದೀಚ್ಛಯಂತೆ ನೂತನ ಶ್ರೀಗಳನ್ನು ಜಗದ್ಗುರುಗಳನ್ನಾಗಿ ನಿಯೋಜಿಸಲಾಗಿದೆ. ಭಾವೈಕ್ಯತೆಯ ಈ ಪರಂಪರೆಯ ಮಠ ಎಂದಿಗೂ ಭಕ್ತರ ಉದ್ಧಾರಕ್ಕಾಗಿಯೇ ಇದೆ ಎಂದು ತಮ್ಮ ಸಂದೇಶಾ ಮೃತ ನುಡಿಯಾಡಿದರು. ನೂತನ ಪಠಾಧ್ಯಕ್ಷರಾದ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು, ಶ್ರೀಮಠಕ್ಕೆ ಧಾವಿಸಿದ 25ಕ್ಕೂ ಹೆಚ್ಚು ಮಠ ಪೀಠಗಳ ಶ್ರೀಗಳನ್ನು ಅಭಿನಂದಿಸಿ, ಸನ್ಮಾನಿಸಿ ದಿವ್ಯಾಶೀರ್ವಾದವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಇಂಚಲದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶಾಂತಾಶ್ರಮದ ಸಿದ್ಧಾರೂಢ ಮಹಾಸ್ವಾಮಿಗಳು, ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಕು ಳ್ಳೂರು ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು, ತೆಲಗಿ ಪೂರ್ಣಾನಂದ ಮಹಾಸ್ವಾಮಿಗಳು, ಹದಡಿ ಮುರಳಿಧರ ಶ್ರೀಗಳು ಮಂಗಳೂರು, ಶ್ರೀ ಮೌಲಾನ ಅಬುಸುಫಾನ್ ಮದನಿ, ಸಿಎಸ್‌ಐ ರೇ : ವಿವೇಕ ಪಾಲ ಸಿ. ಕೆ, ಮತ್ತಿತರ ಶ್ರೀಗಳು ತಮ್ಮ ಸಂದೇಶ ಶಾಮೃತ ನುಡಿದರು. ವೇದಿಕೆಯಲ್ಲಿ ಬಿ. ಜೆ. ಪಿ. ಮಂಜುನಾಥ ಓಲೆಕಾರ್, ಹನುಮಂತಪ್ಪ ಕ್ಷೀರಸಾಗರ್, ಸೇರಿದಂತೆ ನಾಡಿನ ಅನೇಕ ಗಣ್ಯರು, ಮುಖಂಡರು, ಗ್ರಾಮದ ಅನೇಕ ಹಿರಿಯರು ಉಪಸ್ಥಿತರಿದ್ದರು. ಮೂರು ದಿವಸಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಾವಿರ ಭಕ್ತರು, ಸಂತರು, ಶಿವ ಶರಣರು ಪಾಲ್ಗೊಂಡಿದ್ದರು.