ದಸರಾ ಹಬ್ಬ: ಮುತ್ತಿನಕಂತಿ ಮಠದಲ್ಲಿ ಹಲವಾರು ಕಾರ್ಯಕ್ರಮ

ದಸರಾ ಹಬ್ಬ: ಮುತ್ತಿನಕಂತಿ ಮಠದಲ್ಲಿ ಹಲವಾರು ಕಾರ್ಯಕ್ರಮ Dasara festival: Several programs at Muttinakanti Math

ದಸರಾ ಹಬ್ಬ: ಮುತ್ತಿನಕಂತಿ ಮಠದಲ್ಲಿ ಹಲವಾರು ಕಾರ್ಯಕ್ರಮ 

ಜಮಖಂಡಿ 12: ದಸರಾ ಹಬ್ಬದ ಪ್ರಯುಕ್ತ ಸೆ. 22 ರಿಂದ ಅ.4ರವರೆಗೆ ಲೋಕ ಕಲ್ಯಾಣಕ್ಕಾಗಿ ಹೋಮ್, ರುದ್ರಾಭಿಷೇಕ, ದೇವಿಅಭಿಷೇಕ, ಕುಂಕುಮಾರ್ಚನೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮುತ್ತಿನಕಂತಿ ಮಠದಲ್ಲಿ ನಡೆಯುತ್ತವೆ.  ಇಂತಹ ಕಾರ್ಯಗಳನ್ನು ಮಾಡುವ ಮೂಲಕ ದೇಶಕ್ಕೆ ಒಳಿತನ್ನು ನೀಡುವ ಸಂಕಲ್ಪವನ್ನು ಶ್ರೀಮಠ ಹೊಂದಿದೆ ಎಂದು ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ನಗರದ ಮುತ್ತಿನಕಂತಿ ಮಠದ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಸರಾ ಹಬ್ಬದ ನಿಮಿತ್ತವಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, ದಸರಾ ಮಹೋತ್ಸವವು ನಾಡಹಬ್ಬ ಸಡಗರ ಸಂಭ್ರಮದಿಂದ ನಡೆಯುತ್ತಾ ಬಂದಿರುವ ಹಬ್ಬವಾಗಿದೆ. 2008 ರಲ್ಲಿ ದಸರಾ ಉತ್ಸವವನ್ನು ಶ್ರೀಮಠದಲ್ಲಿ ಪ್ರಾರಂಭ ಮಾಡಲಾಯಿತು. ದೇವಿ ಕೃಪೆಯಿಂದ ಸಮಾಜದಲ್ಲಿ ಬದಲಾವಣೆ ಮಾಡಲು ಅನುಕೂಲವಾಯಿತು. ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸುತ್ತಾ ಬಂದಿದೆ. ಅದರ ಜೊತೆಗೆ ಪರಿಸರ ರಕ್ಷಣೆ ಮಾಡುತ್ತಾ ಬಂದಿದೇವೆ. ಕೇವಲ ಮಠದ ಜವಾಬ್ದಾರಿ ಅಲ್ಲ. ಸಮಾಜದ ಜವಾಬ್ದಾರಿ ಆಗಿದೆ. ಜಾತಿ, ಮತ, ಪಂತ, ಭೇದ, ಭಾವ ಮರೆತು ಸಮಾನತೆಯನ್ನು ಕಾಣುವ ಮಠದ ಕಾರ್ಯನಿರ್ವಹಿಸುತ್ತಾ ಬಂದಿದೆ. ಮಠದ ಭಕ್ತರು ಸಾಕಷ್ಟು ಮಠದಲ್ಲಿ ಸಾಮಾಜಿಕ ಸೇವೆಯನ್ನು ಸಲಿಸುತ್ತಾ ಬಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ದೇವಿಯ ಪೂಜೆಯನ್ನು ಸಲಿಸುತ್ತಾ ಬಂದಿದೆ. ತಂದೆಗಿಂತಲು ತಾಯಿ ಬಹಳ ಬೇಗನೆ ಒಳಿಯುತ್ತಾಳೆ. ಅದಕ್ಕಾಗಿ ನಾಡ ಹಬ್ಬ ಎಂದರೆ ದೇವಿ ಹಬ್ಬವಾಗಿದೆ ಎಂದರು. 2007, ಮಠದ ಜವಾಬ್ದಾರಿ ಜೊತೆಗೆ ಸಮಾಜವನ್ನು ಸುಧಾರಣೆಯನ್ನು ನನ್ನ ಮೇಲೆ ಶ್ರೀಗಳು ನೀಡಿದ್ದಾರೆ. ಅವರ ಕೃಪಾಶೀರ್ವಾದದಿಂದ ಹೇಗೆ ಮುನ್ನಡೆಸಬೇಕೆಂಬ ಉದ್ದೇಶವನ್ನು ಹೊಂದಿದೆ. ಕೇವಲ ಮಠದ ಜವಾಬ್ದಾರಿ ಅಲ್ಲ. ಸಮಾಜದ ಜವಾಬ್ದಾರಿಯು ಸಹ ಬಹಳ ಮುಖ್ಯವಾಗಿದೆ. ಇಂದಿನ ಯುಗದಲ್ಲಿ ಹಿಂದಿನ ಸಂಸ್ಕೃತಿಯನ್ನು ಹಾಳುವ ಮಾಡುತ್ತಿದ್ದೇವೆ. ಅದನ್ನು ತಡೆಯುವ ಕೆಲಸವನ್ನು ಶ್ರೀಮಠದ ಜೊತೆಗೆ ಭಕ್ತರು ಮಾಡಬೇಕಾಗಿದೆ. ಅನ್ನಪ್ರಸಾದ, ಉಡಿತುಂಬುವ ಕೆಲಸ ಹೀಗೆ ಹಲವಾರು ಕಾರ್ಯಕ್ರಮಗಳು ಸತತವಾಗಿ 18 ವರ್ಷಗಳ ಕಾಲ ಜರುಗುತ್ತಾ ಬಂದಿವೆ ಎಂದರು. ಆನಂದ ದೇವರು, ಹುಲ್ಯಾಳ ದುಂಡಪ್ಪ ಅಜ್ಜನ್ನವರು, ಜಗ್ಗದ ಯಲ್ಲಮ್ಮ ದೇವಿಯ ಅರ್ಚಕ ಪರುಶುರಾಮ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು. ಸಾಗರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಪ್ರದೀಪ ಮೆಟ್ಟಗುಡ್ಡ ಮಾತನಾಡಿದರು.