ಲೋಕದರ್ಶನ ವರದಿ
ಬೆಳಗಾವಿ 29: ಪಾಶ್ಚಾತ್ಯ ಸಂಸ್ಕೃತಿಗೆ ನಾವಿಂದು ದಾಸರಾಗುತ್ತಿದ್ದೇವೆ. ಇಂಗ್ಲೀಷರು ದೇಶ ಬಿಟ್ಟ ಹೋದರೂ ತಮ್ಮ ಸಂಸ್ಕೃತಿಯ ಬೀಜ ಬಿತ್ತಿ ಹೋಗಿದ್ದಾರೆ. ದಾಸರು ತೋರಿದ ಮಾರ್ಗದಲ್ಲಿ ನಾವು ನಡೆದದ್ದೇ ಆದರೆ ನಮ್ಮ ಸಂಸ್ಕೃತಿ ಪರಂಪತೆಯನ್ನು ಉಳಿಸಿಕೊಳ್ಳಲು ಸಾಧ್ಯ. ದಾಸ ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರೋಜೆಕ್ಟನ ನಿದರ್ೇಶಕರಾದ ಕೆ. ಅಪ್ಪಣ್ಣಾಚಾರ್ಯ ಇಂದಿಲ್ಲಿ ಹೇಳಿದರು.
ಪ್ರತಿಸಲದಂತೆ ಈ ಸಲವೂ ಕೂಡ ಪುರಂದರದಾಸರ ಆರಾಧನಾ ಮಹೋತ್ಸವವನ್ನು ಶ್ರೀನಿವಾಸ ಭಜನಾ ಮಂಡಳ, ನಗರದ ಸಮಸ್ತ ಭಜನಾ ಮಂಡಳಿಗಳು ಹಾಗೂ ವಿಶ್ವಮಧ್ವ ಮಹಾಪರಿಷತ್ತು ಬೆಳಗಾವಿ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ. ದಿ.28 ಸೋಮವಾರದಿಂದ ಪೆ. ದಿ. 04ರವರೆಗೆ ಚೆನ್ನಮ್ಮ ನಗರದ ಮೊದಲ ಹಂತದಲ್ಲಿರುವ ಸತ್ಯಪ್ರಮೋದತೀರ್ಥ ಸಭಾಗೃಹಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ. ಅಪ್ಪಣ್ಣಾಚಾರ್ಯ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಅವರು ಬೇರೆ ಬೇರೆ ಕಮಲಗಳಿದ್ದರೂ ಎಲ್ಲ ಕಮಲಗಳನ್ನು ಅರಳಿಸುವ ಸೂರ್ಯ ಒಬ್ಬನೆ. ನಮ್ಮೆಲ್ಲರನ್ನು ಕಾಯುವ ಭಗವಂತನೊಬ್ಬನೇ ಇದ್ದು ಪ್ರತಿಯೊಂದು ಜೀವಿಯಲ್ಲಿಯೂ ಶಕ್ತಿಯನ್ನು ತುಂಬುತ್ತಾನೆ ಎಂಬ ಗೋಪಾಲದಾಸರ ನುಡಿಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇ. ಮೂ. ಪ್ರಾಣನಾಥಾಚಾರ್ಯ ಪಾಂಘ್ರಿಯವರು ಮಾತನಾಡಿ. ವ್ಯಾಸ ಸಾಹಿತ್ಯ ಸಂಸ್ಕೃತದಲ್ಲಿದ್ದರೆ ಅದನ್ನೇ ಕನ್ನಡದಲ್ಲಿ ಸರಳಿಕರಣ ಮಾಡಿಕೊಟ್ಟವರು ದಾಸರು. ಇಂದು ದಾಸ ಸಾಹಿತ್ಯವನ್ನು ಉಳಿಸುವ ಮಹತ್ತರವಾದ ಜವಾಬ್ಧಾರಿ ತಾಯಂದಿರ ಮೇಲಿದೆ. ಮಕ್ಕಳಲ್ಲಿ ದಾಸಸಾಹಿತ್ಯದ ತಿಳುವಳಿಕೆಯನ್ನು ಮೂಡಿಸಿದಲ್ಲಿ ದಾಸಸಾಹಿತ್ಯ ಉಳಿಯಲು ಸಾಧ್ಯ ಎಂದು ಹೇಳಿದರು.
ಕೊನೆಯಲ್ಲಿ ಭಜನಾ ಮಂಡಲಿಗಳಿಂದ ನೃತ್ಯ, ರೂಪಕಗಳು ಜರುಗಿದವು.
ಪೂರ್ಣಬೋಧ ಕಡಗದಕೈ ನಿರೂಪಿಸಿದರು. ವಾಸಾಚಾರ್ಯ ಅಂಬೇಕರ ಸ್ವಾಗತಿಸಿದರು. ಪ್ರೊ. ಜಿ. ಕೆ. ಕುಲಕಣರ್ಿ, ಗುರುರಾಜ ಪರ್ವತಿಕರ, ಮಕುಂದ ದೇಸಾಯಿ, ಆರ್ ಆರ್ ಕುಲಕಣರ್ಿ, ಕೇಶವ ಮೌವಲಿ ಮುಂತಾದವರು ಉಪಸ್ಥಿತರಿದ್ದರು.